ಬ್ರೇಕಿಂಗ್: ಎನ್‌ಎಲ್‌ಎಟಿ ನಡೆಸುವ ಎನ್‌ಎಲ್‌ಎಸ್‌ಐಯು ನಿರ್ಧಾರ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ಜಾರ್ಖಂಡ್ ಹೈಕೋರ್ಟ್

ನ್ಯಾಯಮೂರ್ತಿ ರಾಜೇಶ್ ಶಂಕರ್ ನೇತೃತ್ವದ ಏಕಸದಸ್ಯ ಪೀಠವು ಎನ್‌ಎಲ್‌ಎಟಿ ನಡೆಸಲು ಮುಂದಾಗಿರುವ ರಾಷ್ಟ್ರೀಯ ಕಾನೂನು ಶಾಲೆಯ ನಿರ್ಧಾರದ ಕುರಿತ ವಿಚಾರವು ಜಾರ್ಖಂಡ್ ಹೈಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದಿದೆ.
Jharkhand High Court
Jharkhand High Court
Published on

ಪ್ರಸಕ್ತ ಸಾಲಿನ ಪ್ರವೇಶಾತಿಗೆ ಪ್ರತ್ಯೇಕವಾಗಿ ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ (ಎನ್‌ಎಲ್‌ಎಟಿ) ನಡೆಸಲು ಉದ್ದೇಶಿರುವ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಜಾರ್ಖಂಡ್ ಹೈಕೋರ್ಟ್ ವಜಾಗೊಳಿಸಿದೆ.

ನಿನ್ನೆ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ರಾಜೇಶ್ ಶಂಕರ್ ನೇತೃತ್ವದ ಏಕಸದಸ್ಯ ಪೀಠವು ಇಂದು ಸದರಿ ಪ್ರಕರಣದ ವಿಚಾರಣೆಯು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದಿತು.

“ಪ್ರಕರಣವು ದೇಶಾದ್ಯಂತ ಪರಿಣಾಮ ಬೀರುವುದರಿಂದ ಸೆಪ್ಟೆಂಬರ್ 3ರಂದು ಹೊರಡಿಸಿರುವ ಅಧಿಸೂಚನೆಯ ವಿಚಾರದಲ್ಲಿ ಮಧ್ಯಪ್ರವೇಶಿಸುವುದು ನಾವು ಸರಿಯಲ್ಲ ಎಂದು ನಂಬಿದ್ದೇವೆ” ಎಂದು ನ್ಯಾಯಪೀಠ ಹೇಳಿತು.

Also Read
ಎನ್‌ಎಲ್‌ಎಟಿ ಪ್ರಕರಣ: ಇದು ದೇಶಾದ್ಯಂತ ಪರಿಣಾಮ ಬೀರುವುದಾದರೆ ನಾವು ಹೇಗೆ ನಿರ್ಣಯಿಸುವುದು ಎಂದ ಜಾರ್ಖಂಡ್ ಹೈಕೋರ್ಟ್‌

ಬೆಂಗಳೂರಿನ ಎನ್‌ಎಲ್‌ಎಸ್‌ಐಯುವಿನಲ್ಲಿ ಪ್ರವೇಶ ಕಲ್ಪಿಸುವ ಸಂಬಂಧ ಸೆಪ್ಟೆಂಬರ್ 12ರಂದು ಎನ್‌ಎಲ್‌ಎಟಿ ನಡೆಸಲು ಹೊರಡಿಸಿರುವ ಅಧಿಸೂಚನೆಯನ್ನು ವಜಾಗೊಳಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಹಿರಿಯ ವಕೀಲ ಸಜ್ಜನ್ ಪೂವಯ್ಯ ಅವರು ಎನ್ಎಲ್ಎಸ್‌ಐಯು ಪ್ರತಿನಿಧಿಸಿದ್ದರೆ ಅರ್ಜಿದಾರರ ಪರ ಶುಭಮ್ ಗೌತಮ್ ಮತ್ತು ಬಾಯ್‌‌ಭಾ ಗಹ್ಲಾವತ್ ಅವರು ವಾದ ಮಂಡಿಸಿದ್ದರು.

Kannada Bar & Bench
kannada.barandbench.com