{ಲೈವ್ ಅಪ್‌ಡೇಟ್} ಎನ್‌ಎಲ್‌ಎಸ್‌ಐಯುನ ಎನ್ಎಲ್ಎಟಿ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ಜಾರ್ಖಂಡ್ ಹೈಕೋರ್ಟ್

ಸಿಎಲ್ಎಟಿಗೆ ಬದಲಾಗಿ ಪ್ರವೇಶಾತಿಗೆ ತನ್ನದೇ ಆದ ಪರೀಕ್ಷೆ ಎನ್ಎಲ್‌ಎಟಿ ನಡೆಸಲು ನಿರ್ಧರಿಸಿರುವ ಎನ್‌ಎಲ್‌ಎಸ್‌ಐಯು ಕ್ರಮವನ್ನು ಪ್ರಶ್ನಿಸಿ ಐವರು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜಾರ್ಖಂಡ್ ಹೈಕೋರ್ಟ್ ನಡೆಸುತ್ತಿದೆ.
Jharkhand High Court
Jharkhand High Court

ವಕೀಲರಾದ ಶುಭಂ ಗೌತಮ್‌ ಮತ್ತು ಬಾಯ್‌ಭಾ ಗಹ್ಲಾವತ್‌ ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದು, ಹಿರಿಯ ವಕೀಲ ಸಜ್ಜನ್‌ ಪೂವಯ್ಯ ಅವರು ಎನ್‌ಎಲ್‌ಎಸ್‌ಐಯು ಪರ ವಾದಿಸುತ್ತಿದ್ದಾರೆ.

ರಾಷ್ಟ್ರೀಯ ಕಾನೂನು ಪ್ರವೇಶಾತಿ ಪರೀಕ್ಷೆ (ಎನ್‌ಎಲ್‌ಎಟಿ) ವಿಚಾರಣೆ: ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು (ಎನ್‌ಎಲ್‌ಎಸ್‌ಐಯು) ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ನಡೆಸಲು ಕಾರಣವಾದ ಘಟನೆಗಳ ಕುರಿತು ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರಿಂದ ಮನವರಿಕೆ.

ಕೇವಲ ಹತ್ತು ದಿನದ ಕಾಲಾವಕಾಶವನ್ನಷ್ಟೇ ನೀಡಿ ಪ್ರವೇಶ ಪರೀಕ್ಷೆ ನಡೆಸಲು ಎನ್‌ಎಲ್‌ಎಸ್ಐಯು ಮುಂದಾಗಿದೆ. ಪರೀಕ್ಷಾ ವಿಧಾನ ಕೂಡ ಎನ್‌ಎಲ್‌ಎಟಿಗಿಂತ ಭಿನ್ನವಾಗಿದೆ ಎಂದು ವಾದಿಸಿದ ಅರ್ಜಿದಾರರ ಪರ ವಕೀಲರು.

ಅರ್ಜಿಯನ್ನು ಏಕೆ ಜಾರ್ಖಂಡ್‌ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ ಎಂದು ಪ್ರಶ್ನಿಸಿದ ಪೀಠ? ಪ್ರತಿಯೊಂದು ರಾಜ್ಯದ ವಿದ್ಯಾರ್ಥಿಗಳು ಸಂಬಂಧಪಟ್ಟ ರಾಜ್ಯಗಳ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಿಸಿದರೆ ಏನು ಮಾಡುವುದು? ಒಂದು ಹೈಕೋರ್ಟ್‌ ತಡೆ ನೀಡಿ, ಮತ್ತೊಂದು ಹೈಕೋರ್ಟ್‌ ಅರ್ಜಿ ವಜಾ ಮಾಡಿದರೆ ಏನು ಮಾಡಬೇಕು? ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಶಂಕರ್

ಎನ್‌ಎಲ್ಎಸ್ಐಯು ಹಾಗೂ ಒಕ್ಕೂಟದ ಕಚೇರಿಗಳು ಕರ್ನಾಟಕದಲ್ಲಿವೆ. ಜಾರ್ಖಂಡ್‌ ಹೈಕೋರ್ಟ್‌ ಹೇಗೆ ಈ ಮನವಿಯನ್ನು ಆಲಿಸಲು ಸಾಧ್ಯ? ಎಂದು ಪ್ರಶ್ನಿಸಿದ ನ್ಯಾಯಾಲಯ.

ಜಾರ್ಖಂಡ್‌ ಹೈಕೋರ್ಟ್‌ಗೆ ಪ್ರಕರಣದಲ್ಲಿ ನ್ಯಾಯಿಕವ್ಯಾಪ್ತಿ ಇಲ್ಲ ಎಂದಲ್ಲ. ಆದರೆ, ಅದು ‘ಇದು ಸೂಕ್ತ ವೇದಿಕೆಯಲ್ಲ’ ಎನ್ನುವ ಕಾರಣದಿಂದ ತನ್ನ ನ್ಯಾಯಿಕ ವ್ಯಾಪ್ತಿಯನ್ನು ಬಳಸುವುದರಿಂದ ಅದು ಹಿಂದೆ ಸರಿಯಬೇಕಾಗುತ್ತದೆ.

ಈ ಪ್ರಕರಣದಲ್ಲಿ ದೇಶದಲ್ಲಿಯೇ ಮೊದಲು ದಾಖಲಾದ ರಿಟ್‌ ಅರ್ಜಿ ಇದಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಅರ್ಜಿದಾರರ ಪರ ವಕೀಲರು. ಒಂದೊಮ್ಮೆ ಸುಪ್ರೀಂಕೋರ್ಟ್‌ ಮುಂದೆ, ಮಧ್ಯಪ್ರದೇಶದ ಹೈಕೋರ್ಟ್‌ ಮುಂದೆ ಪ್ರಕರಣದ ವಿಚಾರಣೆಯು ಪರೀಕ್ಷಾ ದಿನಕ್ಕಿಂತ ಮುಂಚೆ ಬಾರದೆ ಹೋದರೆ ಏನು ಮಾಡುವುದು ಎಂದು ವಾದಿಸಿದ ವಕೀಲರು.

ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಇರುವ ತಾಂತ್ರಿಕ ತೊಂದರೆ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿನ ತಾಂತ್ರಿಕ ತೊಂದರೆಗಳಿಗೆ ತಾನು ಜವಾಬ್ದಾರನಲ್ಲ ಎಂದಿರುವ ಎನ್ಎಲ್ಎಸ್‌ಐಯು ನಡೆಯನ್ನು ಪ್ರಶ್ನಿಸಿದ ಅರ್ಜಿದಾರರ ಪರ ವಕೀಲರು.

ಈಗಾಗಲೇ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಕೆಲವರಷ್ಟೇ ಆಕ್ಷೇಪ ಎತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಎನ್‌ಎಲ್‌ಎಸ್‌ಐಯು ಪರ ವಾದಿಸುತ್ತಿರುವ ಹಿರಿಯ ವಕೀಲರಾದ ಸಜನ್‌ ಪೂವಯ್ಯ.

ಪ್ರತ್ಯೇಕ ಪರೀಕ್ಷೆಗಳನ್ನು ಕೇವಲ ಈ ವರ್ಷ ಮಾತ್ರವೇ ನಡೆಸಲಾಗುತ್ತದೋ, ಪ್ರತಿವರ್ಷವೂ ನಡೆಸಲಾಗುತ್ತದೋ ಎಂದು ಪ್ರಶ್ನಿಸಿದ ನ್ಯಾಯಾಲಯ. ಈ ವರ್ಷಕ್ಕೆ ಮಾತ್ರವೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಪೂವಯ್ಯ. ಮುಂದಿನ ನಡೆಯನ್ನು ಸಂಸ್ಥೆಯ ಕಾರ್ಯಕಾರಿ ಸಮಿತಿಯು ನಿರ್ಧರಿಸಲಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಕೀಲ ಸಜ್ಜನ್ ಪೂವಯ್ಯ.

ಪ್ರಕರಣದ ಕೇಂದ್ರ ವಿಷಯವು ಜಾರ್ಖಂಡ್‌ ಹೈಕೋರ್ಟ್‌ನ ವ್ಯಾಪ್ತಿಯದಾಗಿದ್ದು, ದೇಶಾದ್ಯಂತ ಪರೀಕ್ಷೆಯ ಮೇಲೆ ಉಂಟಾಗುವ ಪರಿಣಾಮದ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ನಾಳೆ ಆದೇಶ ನೀಡಲು ಪೀಠ ನಿರ್ಧರಿಸಿದೆ.

Related Stories

No stories found.
Kannada Bar & Bench
kannada.barandbench.com