ಕಾನೂನು ನೆರವು: ಮಂಗಳೂರಿನಲ್ಲಿ ಡಿಫೆನ್ಸ್‌ ಕೌನ್ಸೆಲ್‌ ಕಚೇರಿ ಉದ್ಘಾಟಿಸಿದ ನ್ಯಾ. ರವೀಂದ್ರ ಜೋಷಿ

ರಾಜ್ಯದ ವಿವಿಧ ಜಿಲ್ಲೆಗಳ ಡಿಫೆನ್ಸ್‌ ಕೌನ್ಸೆಲ್‌ ಕಚೇರಿಗಳನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಅಧ್ಯಕ್ಷರಾದ ನ್ಯಾ. ಬಿ ವೀರಪ್ಪ ಅವರು ಬೆಂಗಳೂರಿನಲ್ಲಿ ಏಕಕಾಲಕ್ಕೆ ಲೋಕಾರ್ಪಣೆ ಮಾಡಿದರು.
Judge Ravindra Joshi inaguarates the Defence Counsel Office in Mangalore.
Judge Ravindra Joshi inaguarates the Defence Counsel Office in Mangalore.

ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ಮಂಗಳೂರು ನ್ಯಾಯಾಲಯ ಸಂಕೀರ್ಣದಲ್ಲಿ ಇದೇ ಮೊದಲ ಬಾರಿಗೆ ಕಾನೂನು ನೆರವು ನೀಡುವ ಉದ್ದೇಶದಿಂದ ಡಿಫೆನ್ಸ್ ಕೌನ್ಸೆಲ್ ಕಚೇರಿ ಆರಂಭಿಸಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳ ಡಿಫೆನ್ಸ್‌ ಕೌನ್ಸೆಲ್‌ ಕಚೇರಿಗಳನ್ನು ಬೆಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಅಧ್ಯಕ್ಷರಾದ ಬಿ ವೀರಪ್ಪ ಅವರು ಏಕಕಾಲಕ್ಕೆ ಲೋಕಾರ್ಪಣೆ ಮಾಡಿದರು. ಬಳಿಕ ಮಂಗಳೂರಿನ ಕಚೇರಿಯನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಜೋಷಿ ಅವರು ಉದ್ಘಾಟಿಸಿದರು.

Also Read
ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಪ್ರದರ್ಶನ ಉದ್ಘಾಟನೆ

ಮಂಗಳೂರಿನ ಹಿರಿಯ ನ್ಯಾಯವಾದಿ ವಾಸುದೇವ ಗೌಡ ಅವರು ಮುಖ್ಯ ಡಿಫೆನ್ಸ್ ಕೌನ್ಸೆಲ್ ಆಗಿ ಅಧಿಕಾರ ವಹಿಸಿಕೊಂಡರು. ಉಪ ಡಿಫೆನ್ಸ್ ಕೌನ್ಸೆಲ್ ಆಗಿ ಶುಕರಾಜ ಕೊಟ್ಟಾರಿ ಹಾಗೂ ಸಹಾಯಕ ಡಿಫೆನ್ಸ್ ಕೌನ್ಸೆಲ್ ಆಗಿ ಕೃಷ್ಣ ಅಧಿಕಾರ ಸ್ವೀಕರಿಸಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ ಜಿ ಶೋಭಾ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ, ಕಾರ್ಯದರ್ಶಿ ಶ್ರೀಧರ ಎಣ್ಮಕಜೆ, ಹಿರಿಯ ವಕೀಲರಾದ ಇಬ್ರಾಹಿಂ ಹಾಗೂ ವಿವಿಧ ನ್ಯಾಯಾಧೀಶರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Kannada Bar & Bench
kannada.barandbench.com