ನ್ಯಾಯಾಂಗ ಅಧಿಕಾರಿಯ ವಜಾ ಆದೇಶ ರದ್ದುಗೊಳಿಸಲು ನಿರಾಕರಿಸಿದ ಕಾಶ್ಮೀರ ಹೈಕೋರ್ಟ್ [ಚುಟುಕು]

Court Room
Court Room

ಮಾರಾಟಗಾರರೊಂದಿಗೆ ಶಾಮೀಲಾಗಿ ₹ 32 ಲಕ್ಷ ಮೊತ್ತದ ಮುದ್ರಾಂಕ ಶುಲ್ಕ ವಂಚನೆಗೆ ಅವಕಾಶ ಮಾಡಿಕೊಟ್ಟ ಆರೋಪ ಎದುರಿಸುತ್ತಿದ್ದ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ಸೇವೆಯಿಂದ ವಜಾಗೊಳಿಸಿರುವ ಆದೇಶ ರದ್ದುಗೊಳಿಸಲು ಕಾಶ್ಮೀರ ಹೈಕೋರ್ಟ್‌ ನಿರಾಕರಿಸಿದೆ. [ಜಾವಿದ್ ಅಹ್ಮದ್ ನಾಯಕ್ ಮತ್ತು ಜಮ್ಮು ಕಾಶ್ಮೀರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ನ್ಯಾಯಾಧೀಶರ ಕೆಲಸದ ಸ್ವರೂಪ ಪ್ರಾಮಾಣಿಕತೆಯನ್ನು ಬೇಡುವುದರಿಂದ ಅವರ ನಡವಳಿಕೆ ಸದಾ ಸಂಶಯಾತೀತವಾಗಿರಬೇಕು ಎಂದು ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿಥಾಲ್ ಮತ್ತು ನ್ಯಾಯಮೂರ್ತಿ ಸಂಜೀವ್ ಕುಮಾರ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. ನ್ಯಾಯಾಧೀಶ ಹುದ್ದೆಯಿಂದ ತನ್ನನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಜಾವಿದ್ ಅಹ್ಮದ್ ನಾಯ್ಕ್ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಈ ತೀರ್ಪು ನೀಡಿದೆ.

ಹೆಚ್ಚಿನ ವಿಚಾರಣೆಗಾಗಿ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ಜಾಲತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com