ನ್ಯಾಯಾಧೀಶರು ಸೆಲೆಬ್ರಿಟಿಗಳಲ್ಲ; ನಮ್ಮೆಲ್ಲಾ ಚಲನವಲನಗಳನ್ನು ಆನ್‌ಲೈನ್ ವೇದಿಕೆಗಳು ವರದಿ ಮಾಡಬೇಕಿಲ್ಲ: ನ್ಯಾ. ಕರೋಲ್

ನ್ಯಾಯಾಧೀಶರ ಮೌಖಿಕ ಅವಲೋಕನ ಇಲ್ಲವೇ ನ್ಯಾಯಾಲಯದಲ್ಲಿ ಕೇಳಿದ ಪ್ರಶ್ನೆಗಳ ವಿಡಿಯೋ ತುಣುಕುಗಳೇ ಅಂತಿಮ ತೀರ್ಪು ಎಂಬಂತೆ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
Justice Sanjay Karol
Justice Sanjay Karol

ನ್ಯಾಯಾಧೀಶರು ಖ್ಯಾತನಾಮರಲ್ಲ. ಆನ್‌ಲೈನ್ ವೇದಿಕೆಗಳು ಅವರ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ವರದಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕರೋಲ್ ಕಿವಿಮಾತು ಹೇಳಿದರು.

ಭಾರತೀಯ ವಕೀಲರ ಪರಿಷತ್‌ ವತಿಯಿಂದ ನವದೆಹಲಿಯಲ್ಲಿ‌ ಅಂತಾರಾಷ್ಟ್ರೀಯ ವಕೀಲರ ಸಮ್ಮೇಳನದ ಅಂಗವಾಗಿ ಶನಿವಾರ ನಡೆದ ವಿಚಾರಗೋಷ್ಠಿಯಲ್ಲಿ “ನ್ಯಾಯದಾನ ವ್ಯವಸ್ಥೆ: ಸಾಮಾಜಿಕ ಮಾಧ್ಯಮಗಳ ಪ್ರಭಾವ” ಎಂಬ ವಿಷಯದ ಕುರಿತು ಅವರು ಮಾತನಾಡಿದರು.

Also Read
ಭಾರತೀಯ ವಕೀಲರ ಕೆಲಸ ಕಸಿಯುವ ಉದ್ದೇಶ ಇಂಗ್ಲೆಂಡ್‌ ಮತ್ತು ವೇಲ್ಸ್‌ ವಕೀಲರಿಗೆ ಇಲ್ಲ: ಬ್ರಿಟನ್ ಲಾ ಸೊಸೈಟಿ ಅಧ್ಯಕ್ಷೆ

ನ್ಯಾಯಾಲಯಗಳ ಕಲಾಪ ಕುರಿತು ಹೇಗೆ ರೋಚಕ ಶೀರ್ಷಿಕೆಗಳನ್ನು ನೀಡಿ ವರದಿ ಮಾಡಬಾರದು ಹಾಗೂ ಸೂಕ್ತ ಸನ್ನಿವೇಶಗಳನ್ನು ಒಳಗೊಳ್ಳದೆ ಪ್ರಸಾರವಾಗುವ ವರದಿಗಳು ಹೇಗೆ ಒಳ್ಳೆಯದಕ್ಕಿಂತ ಕೆಡುಕು ಉಂಟುಮಾಡುತ್ತವೆ ಎಂಬುದರ ಕುರಿತು ನ್ಯಾ. ಕರೋಲ್‌ ವಿವರಿಸಿದರು.

 “ನ್ಯಾಯಾಲಯ ಹೇಳಿದ್ದನ್ನು ಮತ್ತು ಅದರ ಅವಲೋಕನಗಳನ್ನು ಅನುಕ್ಷಣವೂ ಬಿಡದೆ ವರದಿ ಮಾಡುವುದು ಕೆಲಸದ ಸಂದರ್ಭಗಳನ್ನು ಪರಿಗಣಿಸಿದರೆ ಸೂಕ್ತವಾಗುವುದಿಲ್ಲ. ನ್ಯಾಯಾಧೀಶರು ಖ್ಯಾತನಾಮರಲ್ಲ ಎಂದು  ಸಾಮಾಜಿಕ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಸ್ನೇಹಿತರಿಗೆ ನಾನು ಒತ್ತಿಹೇಳಬೇಕಿದೆ. ನಮ್ಮೆಲ್ಲಾ ಚಟುವಟಿಕೆಗಳನ್ನು ವರದಿ ಮಾಡುವಂತಹ ಪಾಪರಾಜಿಗಳಲ್ಲ ಈ ಆನ್‌ಲೈನ್‌ ವೇದಿಕೆಗಳು” ಎಂದು ಅವರು ಎಚ್ಚರಿಕೆ ನೀಡಿದರು.

ನ್ಯಾಯಾಧೀಶರ ಮೌಖಿಕ ಅವಲೋಕನ ಇಲ್ಲವೇ ನ್ಯಾಯಾಲಯದಲ್ಲಿ ಕೇಳಿದ ಪ್ರಶ್ನೆಗಳ ವೀಡಿಯೊ ತುಣುಕುಗಳೇ ಅಂತಿಮ ತೀರ್ಪು ಎಂಬಂತೆ ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ನ್ಯಾಯಾಲಯದ ಕಲಾಪಗಳು ಹೇಗೆ ನಡೆಯುತ್ತವೆ ಅಥವಾ ತೀರ್ಪುಗಳನ್ನು ಹೇಗೆ ನೀಡಲಾಗುತ್ತದೆ ಎಂಬ ಅರಿವಿರದ ಸಾರ್ವಜನಿಕರೊಂದಿಗೆ ಇಂತಹ ಅರೆಬೆಂದ ಮಾಹಿತಿಗಳನ್ನು ಹಂಚಿಕೊಳ್ಳುವುದು ದೊಡ್ಡ ಹಾನಿಯುಂಟುಮಾಡುತ್ತದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಜೆಕೆ ಮಹೇಶ್ವರಿ, ತ್ರಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್, ಹಿರಿಯ ವಕೀಲರಾದ ರಾಣಾ ಮುಖರ್ಜಿ ಹಾಗೂ ಎಸ್‌ ಗುರು ಕೃಷ್ಣಕುಮಾರ್‌ ಪಾಲ್ಗೊಂಡರು.

Related Stories

No stories found.
Kannada Bar & Bench
kannada.barandbench.com