(From L to R) Justices Hemant Gupta and V Ramasubramanian
ತಾಂತ್ರಿಕ ಸಮಸ್ಯೆಗಳ ಬಗ್ಗೆ ತೀರ್ಪು ನೀಡಲು ಅಗತ್ಯ ಪರಿಣತಿಯ ಅವಶ್ಯಕತೆ ಇರುವುದರಿಂದ ಅಂತಹ ಒಪ್ಪಂದಗಳಲ್ಲಿ ಮಧ್ಯಪ್ರವೇಶಿಸುವುದಕ್ಕೆ ನ್ಯಾಯಾಲಯಗಳು ನಿರಾಸಕ್ತಿ ತೋರಬೇಕು. ತಾಂತ್ರಿಕ ಗುತ್ತಿಗೆ, ಟೆಂಡರ್ ಪ್ರಕರಣಗಳ ಬಗ್ಗೆ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಲು ಹೋಗಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ಒಳಿತಿಗಾಗಿ ರೂಪುಗೊಂಡ ಸೇವೆ ಮತ್ತು ಯೋಜನೆಗಳನ್ನು ಹಳಿತಪ್ಪಿಸುವಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮಧ್ಯಂತರ ಆದೇಶ ನೀಡಬಾರದು ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಹೇಳಿದೆ.