Cricketramesh sogemane
ಸುದ್ದಿಗಳು
ಟಿ 20 ಕ್ರಿಕೆಟ್: ಎಸ್‌ಸಿಬಿಎ ಇಲೆವೆನ್ ತಂಡವನ್ನು ಮಣಿಸಿದ ಸಿಜೆಐ ರಮಣ ನೇತೃತ್ವದ ತಂಡ
161 ರನ್‌ಗಳ ಗುರಿ ಬೆನ್ನತ್ತಿದ ಸುಪ್ರೀಂ ಕೋರ್ಟ್ ವಕೀಲರ ಸಂಘದ ತಂಡ 12.4 ಓವರ್‌ಗಳಲ್ಲಿ 88 ರನ್‌ಗಳಿಗೆ ಆಲೌಟ್ ಆಯಿತು.
ಭಾನುವಾರ ನವದೆಹಲಿಯಲ್ಲಿ ನಡೆದ ಟಿ-20 ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅವರ ನೇತೃತ್ವದ ʼಜಡ್ಜಸ್ XIʼ ತಂಡ ಸುಪ್ರೀಂ ಕೋರ್ಟ್ ವಕೀಲರ ಸಂಘದ ತಂಡ ʼಎಸ್‌ಸಿಬಿಎ XIʼಅನ್ನು ಮಣಿಸಿತು.
ಸಿಜೆಐ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. 161 ರನ್‌ಗಳ ಗುರಿ ಬೆನ್ನತ್ತಿದ ಸುಪ್ರೀಂ ಕೋರ್ಟ್ ವಕೀಲರ ಸಂಘದ ತಂಡ 12.4 ಓವರ್‌ಗಳಲ್ಲಿ 88 ರನ್‌ಗಳಿಗೆ ಆಲೌಟ್ ಆಯಿತು.
ನಗರದ ಬಾರಾಖಂಬಾದ ಮಾಡರ್ನ್ ಸ್ಕೂಲ್‌ನಲ್ಲಿ ಪಂದ್ಯ ನಡೆಯಿತು. ಪಂದ್ಯದ ಚಿತ್ರಾವಳಿ ಇಲ್ಲಿದೆ:
CJI NV Ramana in action
CJI led team makes an entry with SCBA President Vikas Singh cheering on
Seen here is CJI Ramana with Justices L Nageswara Rao, Ravindra Bhat, and MM Sundresh along with SCBA President Vikas Singh.