ರಾಜಕೀಯ ಸೂಕ್ಷ್ಮ ಪ್ರಕರಣಗಳಲ್ಲಿ ನ್ಯಾಯಾಂಗ ಸ್ವಾತಂತ್ರ್ಯ ಎಂಬುದು ಆಯ್ಕೆಯದ್ದಾಗಿರುತ್ತದೆ: ಅಭಿಷೇಕ್ ಮನು ಸಿಂಘ್ವಿ

ಇಂತಹ ಪ್ರಕರಣಗಳ ತೀರ್ಪು ಸಾಮಾನ್ಯವಾಗಿ ಪೀಠದ ಸದಸ್ಯರ ಮೇಲೆ ಅವಲಂಬಿತರಾಗಿರುತ್ತದೆ. ಕೆಲ ವೇಳೆ ನಿರ್ಣಾಯಕ ತೀರ್ಪು ತಪ್ಪಿಸುವ ನ್ಯಾಯಾಂಗದ ಪ್ರವೃತಿಯನ್ನು ಹೇಳುತ್ತದೆ ಎಂದು ಅವರು ಟೀಕಿಸಿದರು.
Senior Advocate AM Singhvi
Senior Advocate AM Singhvi
Published on

ರಾಜಕೀಯ ಸೂಕ್ಷ್ಮ ಪ್ರಕರಣಗಳಲ್ಲಿ ನ್ಯಾಯಾಂಗ ಸ್ವಾತಂತ್ರ್ಯ ಎಂಬುದು ಆಯ್ಕೆಯದ್ದಾಗಿರುತ್ತದೆ ಎಂದು ಹಿರಿಯ ನ್ಯಾಯವಾದಿ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರು ಬಣ್ಣಿಸಿದ್ದಾರೆ.

ಭಾರತೀಯ ಸಂವಿಧಾನ ಜಾರಿಗೆ ಬಂದ  75ನೇ ವರ್ಷಾಚರಣೆ ಅಂಗವಾಗಿ ಸೋನಿಪತ್‌ನ ಒ ಪಿ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂತಹ ಪ್ರಕರಣಗಳ ತೀರ್ಪು ಸಾಮಾನ್ಯವಾಗಿ ಪೀಠದ ಭಾಗವಾಗುವ ಸದಸ್ಯರ ಮೇಲೆ ಅವಲಂಬಿತರಾಗಿರುತ್ತದೆ ಎಂದು ಗಮನ ಸೆಳೆದ ಅವರು ಹೀಗಾಗಿ 17 ಪೀಠಗಳಲ್ಲಿ ತೀರ್ಪುಗಳು 10 ರೀತಿಯಲ್ಲಿ ಬದಲಾಗುವುದನ್ನು ಕಾಣಬಹುದು ಎಂದರು.

ಡಾ. ಸಿಂಘ್ವಿ ಅವರ ಭಾಷಣದ ಪ್ರಮುಖಾಂಶಗಳು

  • ಕೆಲವು ಸಂದರ್ಭಗಳಲ್ಲಿ ನಿರ್ಣಾಯಕ ತೀರ್ಪುಗಳನ್ನು ತಪ್ಪಿಸುವ ಪ್ರವೃತ್ತಿ ನ್ಯಾಯಾಂಗದಲ್ಲಿದೆ.  ತೀರ್ಪು ನೀಡದ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಇದೊಂದು ರೀತಿಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುತ್ತದೆ ಆದರೆ ರೋಗಿ ಸಾವನ್ನಪ್ಪಿರುತ್ತಾನೆ ಎಂಬ ಸ್ಥಿತಿಯಾಗಿದೆ.

  • ಭಾರತದಲ್ಲಿ ನ್ಯಾಯಾಂಗ ಪರಾಮರ್ಶೆ ಎಂಬುದು ಅಪರಿಮಿತವಾಗಿರುವುದು ಮುಖ್ಯವಾಗಿ ಪ್ರಯೋಜನಕಾರಿಯಾಗಿದೆ.

  • ವೈಯಕ್ತಿಕ ಹಕ್ಕುಗಳ ರಕ್ಷಣೆ, ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳ ಘಟ್ಟ, ಎಡಿಎಂ ಜಬಾಲ್ಪುರ್‌ ತೀರ್ಪು ಹೀಗೆ ಸುಪ್ರೀಂ ಕೋರ್ಟ್‌ ಕಾಲಾಂತರದಲ್ಲಿ ವಿಕಾಸಗೊಂಡಿದೆ.

  • ನಿಕಟಪೂರ್ವ ಸಿಜೆಐ ಡಿ ವೈ ಚಂದ್ರಚೂಡ್‌ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ ಹೆಚ್ಚು ಉದಾರಿಯಾಗಿತ್ತು. ಅವರು ಅಧಿಕಾರದಲ್ಲಿರುವವರಿಗೆ ಸತ್ಯ ಹೇಳಲು ಯತ್ನಿಸಿದರಾದರೂ ಎಂದಿನಂತೆ ಯಶಸ್ವಿಯಾಗಲಿಲ್ಲ.

  • ಇ- ಮಾಧ್ಯಮಗಳಿಗೆ ಹೋಲಿಸಿದರೆ ಮುದ್ರಣ ಮಾಧ್ಯಮ ಹೆಚ್ಚು ಜವಾಬ್ದಾರಿಯಯತವಾಗಿದೆ.

Kannada Bar & Bench
kannada.barandbench.com