ನ್ಯಾಯಾಂಗ ಅಧಿಕಾರಿಗಳು ತಾವು ನೇಮಕಗೊಂಡಿರುವ, ಕೆಲಸ ಮಾಡುವ ಪ್ರಾಂತ್ಯದ ಸ್ಥಳೀಯ ಭಾಷೆಯನ್ನು ತಿಳಿದಿರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ಕಾನೂನು ವಕೀಲರು ವಿರುದ್ಧ ಬ್ಯಾರಿಸ್ಟರ್ಸ್ ಕಾನೂನು ಸಂಸ್ಥೆ].
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ನ್ಯಾಯಾಂಗ ಅಧಿಕಾರಿಗಳು ಸ್ಥಳೀಯ ಭಾಷೆಗಳಲ್ಲಿ ಸಾಕ್ಷಿಗಳು ಮತ್ತು ಸಾಕ್ಷ್ಯಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಈ ದೃಷ್ಟಿಯಿಂದ ಅವರಿಗೆ ಸ್ಥಳೀಯ ಭಾಷೆಯ ಜ್ಞಾನವು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿತು.
"ಯಾವುದೇ ನ್ಯಾಯಾಂಗ ಅಧಿಕಾರಿ ತಾವು ನೇಮಕೊಂಡಿರುವಲ್ಲಿನ ಸ್ಥಳೀಯ ಭಾಷೆಯ ಮೇಲೆ ನೈಪುಣ್ಯತೆ ಹೊಂದಿರುವುದು ನ್ಯಾಯಯುತವಾದ ಅವಶ್ಯಕತೆಯಾಗಿದೆ. ಒಮ್ಮೆ ನೇಮಕಗೊಂಡ ನಂತರ ನ್ಯಾಯಾಂಗ ಅಧಿಕಾರಿಗಳು ಸ್ಥಳೀಯ ಭಾಷೆಯಲ್ಲಿ ಸಾಕ್ಷಿಗಳು ಮತ್ತು ಸಾಕ್ಷ್ಯಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಹೀಗಾಗಿ ಅಂತಹ ಅವಶ್ಯಕತೆಯು ಸಾಧಾರವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ತರುವಂತಹ ವಿಚಾರವು ನೀತಿನಿರೂಪಣೆಯ ವ್ಯಾಪ್ತಿಗೆ ಬರುತ್ತದೆ" ಎಂದು ಸಿಜೆಐ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠವು ಅಭಿಪ್ರಾಯಪಟ್ಟಿತು.