ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ನ್ಯಾ. ಎ ಐ ಎಸ್ ಚೀಮಾ ನೇಮಕ

2020ರ ಮಾರ್ಚ್ನಿಂದ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ನ್ಯಾ. ಬನ್ಸಿ ಲಾಲ್ ಭಟ್ ಅವರಿಂದ ನ್ಯಾ. ಚೀಮಾ ಅಧಿಕಾರ ಸ್ವೀಕರಿಸಲಿದ್ದಾರೆ.
ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ನ್ಯಾ. ಎ ಐ ಎಸ್ ಚೀಮಾ ನೇಮಕ

ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ನ್ಯಾಯಾಂಗ ವಿಭಾಗದ ಸದಸ್ಯ ನ್ಯಾ. ಎ ಐ ಎಸ್ ಚೀಮಾ ಅವರನ್ನು ಇಂದಿನಿಂದ (ಭಾನುವಾರ) ಅನ್ವಯವಾಗುವಂತೆ ಮಂಡಳಿಯ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಈ ವರ್ಷದ ಆರಂಭದಲ್ಲಿ, ಎನ್‌ಸಿಎಲ್‌ಎಟಿಯ ನ್ಯಾಯಾಂಗ ಸದಸ್ಯರಾಗಿ ನ್ಯಾ. ಚೀಮಾ ಅವರ ಅವಧಿಯನ್ನು 2021ರ ಸೆಪ್ಟೆಂಬರ್ 21 ರಂದು ಅವರಿಗೆ 67 ವರ್ಷ ತುಂಬುವವರೆಗೆ ವಿಸ್ತರಿಸಲಾಗಿತ್ತು.

ಎನ್‌ಸಿಎಲ್‌ಎಟಿಯ ಮೊದಲ ಅಧ್ಯಕ್ಷರಾದ ನ್ಯಾ. ಎಸ್‌ಜೆ ಮುಖೋಪಾಧ್ಯಾಯ ಅವರ ಅಧಿಕಾರಾವಧಿ 2020 ರ ಮಾರ್ಚ್‌ನಲ್ಲಿ ಕೊನೆಗೊಂಡಿತ್ತು. ಅಂದಿನಿಂದ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ನ್ಯಾ. ಬನ್ಸಿ ಲಾಲ್ ಭಟ್ ಅವರು ನ್ಯಾ. ಚೀಮಾ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.

ಅನೇಕ ಬಾರಿ ಅಧಿಕಾರಾವಧಿ ವಿಸ್ತರಿಸಿದ ಬಳಿಕ ಕೇಂದ್ರ ಸರ್ಕಾರ ನ್ಯಾ. ಭಟ್‌ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ 67 ವರ್ಷ ತುಂಬುವವರೆಗೆ ಅಥವಾ ಮುಂದಿನ ಆದೇಶದವರೆಗೆ ಹುದ್ದೆಯಲ್ಲಿ ಮುಂದುವರೆಯುವಂತೆ ಆದೇಶಿಸಿತ್ತು. ನ್ಯಾ. ಭಟ್ ನಾಳೆ (ಏಪ್ರಿಲ್ 19) ನಾಳೆ 67 ನೇ ವರ್ಷಕ್ಕೆ ಕಾಲಿಡಲಿದ್ದಾರೆ.

Related Stories

No stories found.
Kannada Bar & Bench
kannada.barandbench.com