ಒಂದೇ ದಿನದಲ್ಲಿ 608 ಅರ್ಜಿಗಳನ್ನು ಇತ್ಯರ್ಥಪಡಿಸಿ ಹೊಸ ದಾಖಲೆ ಬರೆದ ನ್ಯಾಯಮೂರ್ತಿ ನಾಗಪ್ರಸನ್ನ

ಬಿಡಬ್ಲ್ಯುಎಸ್‌ಎಸ್‌ಬಿ ಕಾಯಿದೆಯ ಸಿಂಧುತ್ವ ಪ್ರಶ್ನಿಸಿ ಒಟ್ಟಾರೆ 603 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಷ್ಟು ಪ್ರಕರಣಗಳು ಒಂದನೇ ಪಟ್ಟಿಯಲ್ಲಿದ್ದರೆ, ಎರಡನೇ ಪಟ್ಟಿಯಲ್ಲಿ 183 ಅರ್ಜಿಗಳಿದ್ದವು.
Justice M Nagaprasanna
Justice M Nagaprasanna

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಇಂದಿನ ಕಲಾಪದ ಅವಧಿಯಲ್ಲಿ ವಿವಿಧ ಪ್ರಕಾರಗಳ 608 ಅರ್ಜಿಗಳನ್ನು ಇಂದೇ ವಿಲೇವಾರಿ ಮಾಡುವ ಮೂಲಕ ಹೈಕೋರ್ಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಹೈಕೋರ್ಟ್‌ನ ಬೆಂಗಳೂರು ಪೀಠದ ಕೋರ್ಟ್‌ ಹಾಲ್‌ ಸಂಖ್ಯೆ 23ರಲ್ಲಿ ಕುಳಿತಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಪ್ರಕರಣದ ಪಟ್ಟಿಯಲ್ಲಿ (ಕಾಸ್‌ ಲಿಸ್ಟ್‌) ನಮೂದಾಗಿದ್ದ ಎಲ್ಲಾ 608 ಅರ್ಜಿಗಳನ್ನೂ ದಿನದ ಕಲಾಪದ ಅವಧಿಯಲ್ಲಿ ವಿಲೇವಾರಿ ಮಾಡಿದರು.

ಇದರಲ್ಲಿ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಕಾಯಿದೆಯ ಸಿಂಧುತ್ವ ಪ್ರಶ್ನಿಸಿ ಒಟ್ಟಾರೆ 603 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಷ್ಟು ಪ್ರಕರಣಗಳು ಒಂದನೇ ಪಟ್ಟಿಯಲ್ಲಿದ್ದರೆ, ಎರಡನೇ ಪಟ್ಟಿಯಲ್ಲಿ 183 ಅರ್ಜಿಗಳಿದ್ದವು. ಮೂರನೇ ಪಟ್ಟಿಯು ಕಾಯ್ದಿರಿಸಿದ್ದ ಅರ್ಜಿಗಳ ತೀರ್ಪಿಗೆ ಸಂಬಂಧಿಸಿದ್ದಾಗಿದ್ದವು.

ಹೈಕೋರ್ಟ್‌ನಲ್ಲಿ ಇತರೆ ನ್ಯಾಯಮೂರ್ತಿಗಳ ಅರ್ಜಿ ವಿಲೇವಾರಿ ಪ್ರಮಾಣ ವರ್ಷವೊಂದಕ್ಕೆ ಸರಾಸರಿ 750 ಅರ್ಜಿಗಳಷ್ಟಿದೆ ಎನ್ನಲಾಗಿದ್ದು, ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕಳೆದ 15 ವಾರಗಳಲ್ಲಿ 2 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ.

Also Read
ಇಂದು 522 ಪ್ರಕರಣಗಳನ್ನು ವಿಚಾರಣೆ ನಡೆಸಲಿರುವ ನ್ಯಾ. ನಾಗಪ್ರಸನ್ನ

2023ರ ಜೂನ್‌ 12ರ ವಿಚಾರಣೆಯಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಭರ್ತಿ 522 ಪ್ರಕರಣಗಳನ್ನು ವಿಚಾರಣೆ ನಡೆಸಿದ್ದರು. ಅದಕ್ಕೂ ಕೆಲವು ತಿಂಗಳ ಹಿಂದೆ ಇದೇ ನ್ಯಾಯಮೂರ್ತಿಗಳ ಮುಂದೆ 480ಕ್ಕೂ ಅಧಿಕ ಪ್ರಕರಣಗಳನ್ನು ಪಟ್ಟಿ ಮಾಡಲಾಗಿತ್ತು. ಬಹುತೇಕ ಎಲ್ಲಾ ಪ್ರಕರಣಗಳನ್ನು ಅಂದು ನ್ಯಾ. ನಾಗಪ್ರಸನ್ನ ಅವರು ವಿಚಾರಣೆ ನಡೆಸಿದ್ದರು.

ನಾಗಪ್ರಸನ್ನ ಅವರು 2019ರ ನವೆಂಬರ್ 26ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2021ರ ಸೆಪ್ಟಂಬರ್ 8ರಂದು ಕಾಯಂಗೊಂಡಿದ್ದಾರೆ.

Related Stories

No stories found.
Kannada Bar & Bench
kannada.barandbench.com