ಒಂದೇ ದಿನದಲ್ಲಿ 215 ಪ್ರಕರಣಗಳ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ ನ್ಯಾ. ಎಸ್‌ ಎಸ್ ಶಿಂಧೆ [ಚುಟುಕು]

ಒಂದೇ ದಿನದಲ್ಲಿ 215 ಪ್ರಕರಣಗಳ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ ನ್ಯಾ. ಎಸ್‌ ಎಸ್ ಶಿಂಧೆ [ಚುಟುಕು]
Published on

ನ್ಯಾಯಾಲಯದ ಕರ್ತವ್ಯ ಅವಧಿ ಮೀರಿ ಸತತ ಎರಡನೇ ದಿನ ಬಾಂಬೆ ಹೈಕೋರ್ಟ್‌ ನ್ಯಾ. ಎಸ್‌ ಎಸ್‌ ಶಿಂಧೆ ನೇತೃತ್ವದ ಪೀಠ ಪ್ರಕರಣಗಳ ವಿಚಾರಣೆ ನಡೆಸಿತು.

ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರನ್ನೂ ಒಳಗೊಂಡ ಪೀಠ ವಿಚಾರಣೆಗಾಗಿ ಪಟ್ಟಿ ಮಾಡಲಾಗಿದ್ದ 265 ಪ್ರಕರಣಗಳಲ್ಲಿ 215 ಪ್ರಕರಣಗಳನ್ನು ರಾತ್ರಿ 8.30ರವರೆಗೆ ಆಲಿಸಿತು. ದಿನವಿಡೀ ಹೊರಡಿಸಿದ ಆದೇಶಗಳನ್ನು ಸರಿಯಾಗಿ ಅಪ್‌ಲೋಡ್ ಮಾಡಲಾಗಿದೆಯೇ ಎಂಬುದನ್ನು ನೋಡಿಕೊಳ್ಳಲು ನ್ಯಾಯಾಲಯದ ಕೆಲ ಸಿಬ್ಬಂದಿ ನ್ಯಾಯಮೂರ್ತಿಗಳು ತೆರಳಿದ ನಂತರವೂ ಕರ್ತವ್ಯ ನಿರ್ವಹಿಸಿದರು. ಗುರುವಾರ ಇದೇ ಪೀಠ 190 ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಸಿತ್ತು.

ಹೆಚ್ಚಿನ ಮಾಹಿತಿಗಾಗಿ ಬಾರ್‌ ಅಂಡ್‌ ಬೆಂಚ್‌ ಇಂಗ್ಲಿಷ್‌ ಜಾಲತಾಣದ ʼಲಿಂಕ್‌ʼ ಗಮನಿಸಿ.

Kannada Bar & Bench
kannada.barandbench.com