ನಾಲ್ಸಾ ಸದಸ್ಯರಾಗಿ ನಿವೃತ್ತ ನ್ಯಾಯಮೂರ್ತಿ ಎಸ್‌ ಮುರಳೀಧರ್, ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ ಮತ್ತಿತರರ ನೇಮಕ

ಶಿಕ್ಷಣತಜ್ಞರಾದ ಡಾ. ಮೃಣಾಲ್ ಸತೀಶ್ ಮತ್ತು ಪ್ರೊಫೆಸರ್ ಆಶಾ ಬಾಜಪೇಯ್ ಅವರನ್ನೂ ಸಹ ನಾಲ್ಸಾಗೆ ನಾಮನಿರ್ದೇಶನ ಮಾಡಲಾಗಿದೆ.
Justice S Muralidhar, Justice Arun Palli
Justice S Muralidhar, Justice Arun Palli

ಒಡಿಶಾ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಹಿರಿಯ ವಕೀಲ ಡಾ. ಎಸ್‌ ಮುರಳೀಧರ್‌ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಹಾಲಿ  ನ್ಯಾಯಮೂರ್ತಿ ಅರುಣ್ ಪಳ್ಳಿ ಅವರನ್ನು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ (ಎನ್‌ಎಎಲ್‌ಎಸ್‌ಎ-ನಾಲ್ಸಾ) ಸದಸ್ಯರನ್ನಾಗಿ ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡಿದೆ.

ಅಲ್ಲದೆ ಹಿರಿಯ ವಕೀಲರಾದ ಸಿದ್ಧಾರ್ಥ್ ಲೂತ್ರಾ, ಮೀನಾಕ್ಷಿ ಅರೋರಾ ಮತ್ತು ಸಿದ್ಧಾರ್ಥ್ ಅಗರ್ವಾಲ್, ಭಾರತೀಯ ವಕೀಲರ ಪರಿಷತ್‌ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಶಿಕ್ಷಣತಜ್ಞರಾದ ಡಾ. ಮೃಣಾಲ್ ಸತೀಶ್ ಮತ್ತು ಪ್ರೊ. ಆಶಾ ಬಾಜಪೇಯ್ ಅವರನ್ನೂ ನಾಲ್ಸಾಗೆ ನಾಮನಿರ್ದೇಶನ ಮಾಡಲಾಗಿದೆ.

ಈ ಕುರಿತ ಅಧಿಸೂಚನೆಯನ್ನು ಕೇಂದ್ರ ಕಾನೂನು ಸಚಿವಾಲಯದ ನ್ಯಾಯಾಂಗ ಇಲಾಖೆ ಅಕ್ಟೋಬರ್ 31ರಂದು ಪ್ರಕಟಿಸಿದೆ.

ನ್ಯಾ. ಮುರಳೀಧರ್ ಅವರು ಆಗಸ್ಟ್  ರಂದು ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ಬಳಿಕ ಸುಪ್ರೀಂ ಕೋರ್ಟ್‌ ಅವರನ್ನು ಹಿರಿಯ ವಕೀಲರಾಗಿ ನೇಮಿಸಿತ್ತು.

Kannada Bar & Bench
kannada.barandbench.com