[ಚುಟುಕು] ಐಸಿಸ್‌ ಶಂಕಿತನಿಂದ ಜಾಮೀನು ಕೋರಿಕೆ; ಎನ್‌ಐಎಗೆ ನೋಟಿಸ್‌ ಜಾರಿಗೊಳಿಸಿದ ದೆಹಲಿ ಹೈಕೋರ್ಟ್‌

Delhi High Court

Delhi High Court

ಶಂಕಿತ ಐಸಿಸ್‌ ಭಯೋತ್ಪಾದಕ ಅಬ್ದುಲ್‌ ಖಾದಿರ್‌ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ದೆಹಲಿ ಹೈಕೋರ್ಟ್‌ ಎನ್‌ಐಎಗೆ ನೋಟಿಸ್‌ ಜಾರಿಗೊಳಿಸಿದೆ. ತಾನು ಅಪ್ರಾಪ್ತನಾಗಿದ್ದಾಗ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಗೊಂಡಿದ್ದಾಗಿ ಖಾದಿರ್‌ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾನೆ. ಐಸಿಸ್‌ ಪರ ವಿಚಾರಧಾರೆಯನ್ನು ಪ್ರಚುರ ಪಡಿಸುತ್ತಿದ್ದ ಆರೋಪದಡಿ ಎನ್‌ಐಎ ಆರೋಪಿಯನ್ನು 2018ರಲ್ಲಿ ಬಂಧಿಸಿತ್ತು. ನ್ಯಾಯಮೂರ್ತಿಗಳಾದ ಸಿದ್ಧಾರ್ಥ್‌ ಮೃದುಲ್‌ ಮತ್ತು ಅನೂಪ್‌ ಜೈರಾಮ್‌ ಬಂಭಾನಿ ನೇತೃತ್ವದ ವಿಭಾಗೀಯ ಪೀಠವು ಫೆಬ್ರವರಿ 2 ರಂದು ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಎನ್‌ಐಎಗೆ ನಿರ್ದೇಶಿಸಿದೆ.

ಹೆಚ್ಚಿನ ಮಾಹಿತಿಗೆ ಬಾರ್‌ ಅಂಡ್ ಬೆಂಚ್‌ ಆಂಗ್ಲ ತಾಣದ ಲಿಂಕ್‌ ಕ್ಲಿಕ್ಕಿಸಿ.

Related Stories

No stories found.
Kannada Bar & Bench
kannada.barandbench.com