ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಆಯ್ಕೆ

ಸಮೀಪದ ಪ್ರತಿಸ್ಪರ್ಧಿ ಪ್ರದೀಪ್‌ ಕುಮಾರ್‌ ರೈ ಅವರನ್ನು ಸಿಬಲ್‌ ಪರಾಭವಗೊಳಿಸಿದರು.
Kapil Sibal
Kapil Sibal

ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಸುಪ್ರೀಂ ಕೋರ್ಟ್‌ ವಕೀಲರ ಸಂಘದ (ಎಸ್‌ಸಿಬಿಎ) ನೂತನ ಅಧ್ಯಕ್ಷರಾಗಿ ಗುರುವಾರ ಚುನಾಯಿತರಾಗಿದ್ದಾರೆ.

1,066 ಮತಗಳನ್ನು ಪಡೆದ ಸಿಬಲ್‌ ಅವರು ಸಮೀಪ ಪ್ರತಿಸ್ಪರ್ಧಿ 689 ಮತ ಪಡೆದ ಪ್ರದೀಪ್‌ ರೈ ಅವರನ್ನು ಪರಾಭವಗೊಳಿಸಿದರು. ಎಸ್‌ಸಿಬಿಎ ಅಧ್ಯಕ್ಷರಾಗಿ ಸಿಬಲ್‌ ಅವರು 2001-02ರಲ್ಲಿ ಕೊನೆಯ ಬಾರಿಗೆ ಕೆಲಸ ಮಾಡಿದ್ದರು. ಇದಕ್ಕೂ ಮುನ್ನ, 1995–1996, 1997–1998ರಲ್ಲಿ ಅವರು ಎರಡು ಬಾರಿ ಅಧ್ಯಕ್ಷರಾಗಿದ್ದರು.

ಮತ ಎಣಿಕೆ ಇನ್ನೂ ನಡೆಯುತ್ತಿದ್ದು, ಸಿಬಲ್‌ ಭಾರಿ ಮುನ್ನಡೆ ಸಾಧಿಸಿದ್ದಾರೆ. ಸಿಬಲ್‌ 1,066, ಪ್ರದೀಪ್‌ ಕುಮಾರ್‌ ರೈ 689, ಆದೀಷ್‌ ಅಗರ್ವಾಲ್‌, ಪ್ರಿಯಾ ಹಿಂಗೊರಾನಿ, ನೀರಜ್‌ ಶ್ರೀವಾಸ್ತವ ಮತ್ತು ತ್ರಿಪುರಾರಿ ರೇ ಪಡೆದಿರುವ ಮತಗಳು ಇನ್ನು ತಿಳಿದಿಲ್ಲ.

Related Stories

No stories found.
Kannada Bar & Bench
kannada.barandbench.com