'ಕರಣ್ ಔರ್ ಜೋಹರ್' ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಕರಣ್ ಜೋಹರ್

ಚಿತ್ರ ಜೂನ್ 14ರಂದು (ನಾಳೆ) ಬಿಡುಗಡೆಯಾಗಲಿದ್ದುಈ ಹಿನ್ನೆಲೆಯಲ್ಲಿ ತುರ್ತು ವಿಚಾರಣೆ ಕೋರಿರುವ ಮನವಿಯನ್ನು ನ್ಯಾ. ಆರ್ ಐ ಚಾಗ್ಲಾ ಅವರಿರುವ ಪೀಠ ಇಂದು ಆಲಿಸಲಿದೆ.
Karan Johar
Karan Johar Facebook

"ಶಾದಿ ಕೆ ಡೈರೆಕ್ಟರ್ ಕರಣ್ ಔರ್ ಜೋಹರ್" ಹಿಂದಿ ಚಲನಚಿತ್ರದ ನಿರ್ಮಾಪಕರ ವಿರುದ್ಧ ಬಾಲಿವುಡ್ ಚಲನಚಿತ್ರ ನಿರ್ದೇಶಕ ಕರಣ್ ಜೋಹರ್ ಅವರು ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ [ಕರಣ್ ಜೋಹರ್ ಮತ್ತು ಇಂಡಿಯಾ ಪ್ರೈಡ್ ಅಡ್ವೈಸರಿ ಪ್ರೈ. ಲಿ. ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].

ಸಿನಿಮಾದ ನಿರ್ಮಾಪಕರಾದ ಇಂಡಿಯಾ ಪ್ರೈಡ್ ಅಡ್ವೈಸರಿ,  ಸಂಜಯ್ ಸಿಂಗ್ ಹಾಗೂ ಬರಹಗಾರ ಮತ್ತು ನಿರ್ದೇಶಕ ಬಬ್ಲು ಸಿಂಗ್  ವಿರುದ್ಧ ಡಿಎಸ್‌ಕೆ ಲೀಗಲ್ ಕಾನೂನು ಸಂಸ್ಥೆ ಮೂಲಕ ಮೊಕದ್ದಮೆ ಹೂಡಲಾಗಿದೆ.

ಚಿತ್ರದ ಶೀರ್ಷಿಕೆಯಲ್ಲಿ ತಮ್ಮ ಹೆಸರನ್ನು ಬಳಸದಂತೆ ಶಾಶ್ವತ ತಡೆಯಾಜ್ಞೆ ನೀಡಬೇಕೆಂದು ಕರಣ್‌ ಕೋರಿದ್ದಾರೆ.

ಸಿನಿಮಾ ಜೂನ್‌ 14 ರಂದು (ನಾಳೆ) ಬಿಡುಗಡೆಯಾಗಲಿದ್ದುಈ ಹಿನ್ನೆಲೆಯಲ್ಲಿ ತುರ್ತು ವಿಚಾರಣೆ ಕೋರಿರುವ ಮನವಿಯನ್ನು ನ್ಯಾ. ಆರ್‌ ಐ ಚಾಗ್ಲಾ ಅವರಿರುವ ಪೀಠ ಇಂದು ಆಲಿಸಲಿದೆ.  

ಕರಣ್‌ ಅರ್ಜಿಯ ಪ್ರಮುಖಾಂಶಗಳು

  • ಸಿನಿಮಾದ ಶೀರ್ಷಿಕೆಯಲ್ಲಿ ಕಾನೂನುಬಾಹಿರವಾಗಿ ತಮ್ಮ ಹೆಸರನ್ನು ಬಳಸಲಾಗಿದ್ದು ಚಿತ್ರ ಮತ್ತು ಅದರ ನಿರ್ಮಾಪಕರೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ.

  • ಚಿತ್ರದ ಶೀರ್ಷಿಕೆ ನೇರವಾಗಿ ತಮ್ಮ ಹೆಸರನ್ನು ಉಲ್ಲೇಖಿಸಿದ್ದು, ಆ ಮೂಲಕ ತಮ್ಮ ವ್ಯಕ್ತಿತ್ವ ಹಕ್ಕು, ಪ್ರಚಾರ ಮತ್ತು ಗೌಪ್ಯತೆಯ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ.

  • ತಮ್ಮ ಬ್ರಾಂಡ್‌ ನಾಮಧೇಯವನ್ನು ಅನಧಿಕೃತ ರೀತಿಯಲ್ಲಿ ಬಳಸುವುದರ ಮೂಲಕ ಚಿತ್ರ ನಿರ್ಮಾಪಕರು ತಮ್ಮ ಬಗೆಗಿನ ಸದಾಶಯ ಮತ್ತು ಖ್ಯಾತಿಯ ಮೇಲೆ ಚಿತ್ರ ತಯಾರಕರು ಸವಾರಿ ಮಾಡುತ್ತಿದ್ದಾರೆ    

  • ಸಿನಿಮಾ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಮತ್ತು ಪೋಸ್ಟರ್‌ಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ತಮ್ಮ ಸದಿಚ್ಛೆ ಮತ್ತು ಖ್ಯಾತಿ ಸರಿದೂಗಿಸಲಾಗದಂತಹ ನಷ್ಟ ಉಂಟುಮಾಡುತ್ತದೆ.

Kannada Bar & Bench
kannada.barandbench.com