ನ್ಯಾಯಾಂಗ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಕೀಲರಿಗೆ ಕೋವಿಡ್ ಚಿಕಿತ್ಸೆ: ರಾಜ್ಯ ಸರ್ಕಾರದಿಂದ ನೋಡಲ್ ಅಧಿಕಾರಿಗಳ ನೇಮಕ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ.
ನ್ಯಾಯಾಂಗ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಕೀಲರಿಗೆ ಕೋವಿಡ್ ಚಿಕಿತ್ಸೆ: ರಾಜ್ಯ ಸರ್ಕಾರದಿಂದ ನೋಡಲ್ ಅಧಿಕಾರಿಗಳ ನೇಮಕ

ರಾಜ್ಯದ ಮತ್ತು ಬೆಂಗಳೂರು ನಗರದ ನ್ಯಾಯಾಂಗ ಇಲಾಖೆಯ ಕೋವಿಡ್‌ ಬಾಧಿತ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಕೀಲರ ಚಿಕಿತ್ಸೆಗೆ ಸ್ಪಂದಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನೋಡಲ್‌ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳು ನೋಡಲ್‌ ಅಧಿಕಾರಿಗಳಾಗಿರುತ್ತಾರೆ. ಇವರಿಗೆ ಇಬ್ಬರು ಸಹಾಯಕ ನೋಡಲ್‌ ಅಧಿಕಾರಿಗಳು, ಒಬ್ಬ ವೈದ್ಯರನ್ನು ನೀಡಲಾಗಿದೆ. 2005ರ ವಿಪತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್‌ 24ರ ಅಡಿ ನೀಡಲಾದ ಅಧಿಕಾರ ಬಳಸಿಕೊಂಡು ಈ ಆದೇಶ ನೀಡಲಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ನೋಡಲ್‌ ಅಧಿಕಾರಿಗಳಾಗಿರುತ್ತಾರೆ. ಇವರಿಗೆ ಸಹಾಯ ಮಾಡಲು ಜಿಲ್ಲಾ ವ್ಯಾಪ್ತಿಯ ಇಬ್ಬರು ಕಿರಿಯ ಶ್ರೇಣಿಯ ಕೆ ಎಎಸ್‌ ಅಧಿಕಾರಿಗಳು, ಬಿಬಿಎಂಪಿ ವ್ಯಾಪ್ತಿಯ ಇಬ್ಬರು ವೈದ್ಯಾಧಿಕಾರಿಗಳು ಹಾಗೂ ಇಬ್ಬರು ಸಹಾಯಕ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ತಂಡದ ಸದಸ್ಯರನ್ನು ಮತ್ತು ಸಹಾಯಕ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ನೋಡಲ್‌ ಅಧಿಕಾರಿಗಳಿಗೇ ಜವಾಬ್ದಾರಿ ನೀಡಲಾಗಿದೆ.

ಆಯಾ ಜಿಲ್ಲೆಗಳ ನೋಡಲ್‌ ಅಧಿಕಾರಿಗಳ ಹೆಸರು ಸ್ಥಿರ ದೂರವಾಣಿಹಾಗೂ ಮೊಬೈಲ್‌ ಫೋನ್‌ ವಿವರಗಳ ಪಟ್ಟಿಯನ್ನು ಇಲ್ಲಿ ಓದಬಹುದು:

Attachment
PDF
Judiciary Nodal Officer -06052021 (1).pdf
Preview
No stories found.
Kannada Bar & Bench
kannada.barandbench.com