ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾಗಿ ಸೂರ್ಯ ಮುಕುಂದರಾಜ್‌, ಅನೂಪ್‌ ಕುಮಾರ್‌ ನೇಮಕ

ವಕೀಲರಾದ ಸೂರ್ಯ ಮುಕುಂದರಾಜ್‌ ಮತ್ತು ಅನೂಪ್‌ ಕುಮಾರ್‌ ಅವರನ್ನು ಹೆಚ್ಚುವರಿ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಲಾಗಿದೆ.
ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾಗಿ ಸೂರ್ಯ ಮುಕುಂದರಾಜ್‌, ಅನೂಪ್‌ ಕುಮಾರ್‌ ನೇಮಕ
Published on

ಕರ್ನಾಟಕ ಸರ್ಕಾರದ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾಗಿ ವಕೀಲರಾದ ಸೂರ್ಯ ಮುಕುಂದರಾಜ್‌ ಮತ್ತು ಅನೂಪ್‌ ಕುಮಾರ್‌ ಅವರನ್ನು ಶುಕ್ರವಾರ ನೇಮಕ ಮಾಡಲಾಗಿದೆ.

ರಾಜ್ಯ ಸರ್ಕಾರಿ ಅಭಿಯೋಜಕರಾಗಿ ನೇಮಕವಾಗಿರುವ ಬಿ ಎನ್‌ ಜಗದೀಶ್‌ ಅವರ ಸ್ಥಾನಕ್ಕೆ ಸೂರ್ಯ ಮುಕುಂದರಾಜ್‌ ಅವರನ್ನು, ಪುಷ್ಪಲತಾ ಅವರ ಸ್ಥಾನಕ್ಕೆ ಅನೂಪ್‌ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ.

ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರ ನೇಮಕಾತಿಗಳ ಜೊತೆಗೆ ಸರ್ಕಾರಿ ವಕೀಲರು, ಹೆಚ್ಚುವರಿ ಸರ್ಕಾರಿ ವಕೀಲರು ಮತ್ತು ಏಳು ಹೈಕೋರ್ಟ್‌ ಪ್ಲೀಡರ್‌ಗಳನ್ನು ಹೈಕೋರ್ಟ್‌ನ ಪ್ರಧಾನ ಪೀಠಕ್ಕೆ ನೇಮಕ ಮಾಡಲಾಗಿದೆ. ಅಂತೆಯೇ ತಲಾ ಒಬ್ಬೊಬ್ಬರು ಎಚ್‌ಸಿಜಿಪಿಯನ್ನು ಧಾರವಾಡ ಮತ್ತು ಕಲಬುರ್ಗಿ ಪೀಠಕ್ಕೆ ನೇಮಕ ಮಾಡಲಾಗಿದೆ.

ಕರ್ನಾಟಕ ಕಾನೂನು ಅಧಿಕಾರಿಗಳು (ನೇಮಕಾತಿ ಮತ್ತು ಸೇವಾ ಷರತ್ತು) ನಿಯಮ 1977ರ ಅಡಿ ನೇಮಕ ಮಾಡಲಾಗಿದೆ. ನೇಮಕಾತಿಯು ಒಂದು ವರ್ಷ ಅಥವಾ ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರಲಿದೆ.

Attachment
PDF
LAW LAG 53 2026 NOTIFICATION DATED 17 07 2026 AGA AND HCGP
Preview
Kannada Bar & Bench
kannada.barandbench.com