ಮುಂದಿನ ವರ್ಷದ ಜನವರಿ 1ರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಅವುಗಳಿಂದ ಮಾನ್ಯತೆ ಪಡೆದಿರುವ ಎಲ್ಲಾ ಕಚೇರಿಗಳು ತಮ್ಮ ಪ್ರಕರಣ/ಮನವಿಗಳು/ ಕೋರಿಕೆ ಮತ್ತು ದಾಖಲೆಗಳನ್ನು ಇ-ಫೈಲಿಂಗ್ ವ್ಯವಸ್ಥೆ ಮೂಲಕ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಎಲೆಕ್ಟ್ರಾನಿಕ್ ಫೈಲಿಂಗ್ (ಇ-ಫೈಲಿಂಗ್) ನಿಯಮಗಳು 2021 ಅಧಿಸೂಚನೆ ಹೊರಡಿಸುವವರೆಗೆ https://efiling.ecourts.gov.in ಮೂಲಕ ಇ-ಫೈಲಿಂಗ್ ಮಾಡಬಹುದಾಗಿದೆ. ಇ-ಫೈಲಿಂಗ್ ಬಗ್ಗೆ ತಿಳಿದುಕೊಳ್ಳಲು https://efiling.ecourts.gov.in/help ಗೆ ಭೇಟಿ ನೀಡಬಹುದಾಗಿದೆ ಎಂದು ಹೈಕೋರ್ಟ್ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸರ್ಕಾರ ದಾಖಲಿಸುವ ಹೊಸ ಪ್ರಕರಣಗಳು/ಮನವಿಗಳು/ಕೋರಿಕೆಗಳು ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ಇ-ಫೈಲಿಂಗ್ ವ್ಯವಸ್ಥೆ ಮೂಲಕ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಇ-ಸಮಿತಿಯು ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.