ವಕೀಲ ಗುಮಾಸ್ತರ ನೆರವಿಗೆ ಧಾವಿಸಿದ ಕರ್ನಾಟಕ ಹೈಕೋರ್ಟ್: ಹಣಕಾಸು ನೆರವಿಗಾಗಿ ಬ್ಯಾಂಕ್ ಖಾತೆ ತೆರೆಯುವಂತೆ ಆದೇಶ

ಖಾತೆಗೆ ರೂ.10 ಲಕ್ಷ ವರ್ಗಾಯಿಸುವುದಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ನ್ಯಾಯಾಲಯಕ್ಕೆ ತಿಳಿಸಿತು.
ವಕೀಲ ಗುಮಾಸ್ತರ ನೆರವಿಗೆ ಧಾವಿಸಿದ ಕರ್ನಾಟಕ ಹೈಕೋರ್ಟ್: ಹಣಕಾಸು ನೆರವಿಗಾಗಿ ಬ್ಯಾಂಕ್ ಖಾತೆ ತೆರೆಯುವಂತೆ ಆದೇಶ

ಕೋವಿಡ್‌ ಅನಿಶ್ಚಿತತೆ ಕಾರಣಕ್ಕೆ ವಕೀಲ ಗುಮಾಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ʼರಾಜ್ಯ ನೋಂದಾಯಿತ ಗುಮಾಸ್ತರ ಕಲ್ಯಾಣ ನಿಧಿʼ ಹೆಸರಿನಲ್ಲಿ ಕೂಡಲೇ ಬ್ಯಾಂಕ್‌ ಖಾತೆ ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಈ ನಿಟ್ಟಿನಲ್ಲಿ, ಕರ್ನಾಟಕ ರಾಜ್ಯ ಕಲ್ಯಾಣ ನಿಧಿ ನಿಯಮಗಳ ಅಡಿಯಲ್ಲಿ ನಿಧಿ ನಿರ್ವಹಿಸುವ ಅಧಿಕಾರವಿರುವ ಸಮಿತಿಯೊಂದನ್ನು ರಚಿಸುವಂತೆ ಕೂಡ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ನಿರ್ದೇಶಿಸಿತು.

Also Read
ಕೆಎಸ್‌ಬಿಸಿ ವಿರುದ್ಧ ಭ್ರಷ್ಟಾಚಾರ ಆರೋಪ: ವಿಚಾರಣೆ ಮುಗಿಯುವವರೆಗೆ ಮಂಜುನಾಥ್‌ ವಕೀಲಿಕೆಗೆ ಪರಿಷತ್ ತಡೆ‌

ರೂ 10 ಲಕ್ಷ ವರ್ಗಾಯಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ (ಕೆಎಸ್‌ಬಿಸಿ) ಖಾತೆಯ ವಿವರಗಳನ್ನು ತಿಳಿಸುವಂತೆ ನ್ಯಾಯಾಲಯ ಸೂಚಿಸಿದೆ.

ಕೆಎಸ್‌ಬಿಸಿ ನಿಧಿಗೆ ಹಣ ವರ್ಗಾಯಿಸಲು ನಿರ್ಧರಿಸಿದ್ದರೂ ನಿಧಿ ನಿಭಾಯಿಸಬೇಕಾದ ಸಮಿತಿ ನಿಷ್ಕ್ರಿಯವಾಗಿದೆ ಎಂದು ಅರ್ಜಿದಾರರಾದ ವಕೀಲ ಮೂರ್ತಿ ಡಿ ನಾಯಕ್ ದೂರಿದ್ದರು. ಪ್ರಕರಣದ ಮುಂದಿನ ವಿಚಾರಣೆ ಜೂನ್ 10ಕ್ಕೆ ನಿಗದಿಯಾಗಿದೆ.

Related Stories

No stories found.
Kannada Bar & Bench
kannada.barandbench.com