![ಕಾಶ್ಮೀರ ಫೈಲ್ಸ್ ಚಿತ್ರ ಬಿಡುಗಡೆಗೆ ತಡೆ ಕೋರಿದ್ದ ಮನವಿಯ ವಿಚಾರಣೆ ನಾಳೆ ನಡೆಸಲು ಬಾಂಬೆ ಹೈಕೋರ್ಟ್ ಒಪ್ಪಿಗೆ [ಚುಟುಕು]](http://media.assettype.com/barandbench-kannada%2F2022-03%2F69cf0608-e4cf-4e1e-a140-a3647bb2dd4e%2Fbarandbench_2022_03_c4901a41_69da_43c6_9192_697cebf98cb7_WhatsApp_Image_2022_03_07_at_8_30_49_AM.avif?w=480&auto=format%2Ccompress&fit=max)
ʼಕಾಶ್ಮೀರ ಫೈಲ್ಸ್ʼ ಚಿತ್ರದ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ಸಂಜೆ 4 ಗಂಟೆಗೆ ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ಮುಂದೆ ತುರ್ತು ಪಟ್ಟಿಗಾಗಿ ಸೋಮವಾರ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ಅವರು ಮಂಗಳವಾರ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಲು ಸಮ್ಮತಿ ಸೂಚಿಸಿದರು. ಚಿತ್ರ ಮಾರ್ಚ್ 11, ಶುಕ್ರವಾರ ಬಿಡುಗಡೆಯಾಗಲಿದೆ. ಮುಸ್ಲಿಮರು ಕಾಶ್ಮೀರ ಪಂಡಿತರನ್ನು ಕೊಲ್ಲುವಂತೆ ಚಿತ್ರಿಸಿರುವುದು ಏಕಪಕ್ಷೀಯವಾಗಿದ್ದು ದೇಶಾದ್ಯಂತ ಹಿಂಸಾಚಾರ ಸಂಭವಿಸಬಹುದು ಎಂದು ಅರ್ಜಿದಾರರಾದ ಉತ್ತರ ಪ್ರದೇಶ ನಿವಾಸಿ ಇಂತೆಜಾರ್ ಹುಸೇನ್ ಸಯ್ಯದ್ ಆತಂಕ ವ್ಯಕ್ತಪಡಿಸಿದ್ದಾರೆ.