ಫಾಸ್ಟ್ಯಾಗ್ ಇಲ್ಲದೆ ಲೇನ್‌ ಬಳಕೆ: ದಂಡ ವಿಧಿಸುವ ಸಾಧ್ಯತೆ ಪರಿಗಣಿಸಲು ಕೇಂದ್ರಕ್ಕೆ ಕೇರಳ ಹೈಕೋರ್ಟ್‌ ನಿರ್ದೇಶನ

ಟೋಲ್‌ ಪ್ಲಾಜಗಳಲ್ಲಿ ಸರಾಗ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ವಾಹನಗಳಿಗೆ ದಂಡ ವಿಧಿಸಲು ಮೋಟಾರು ವಾಹನಗಳ ಕಾಯಿದೆ 1988ಕ್ಕೆ ತಿದ್ದುಪಡಿ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲು ಕೇಂದ್ರಕ್ಕೆ ನಿರ್ದೇಶಿಸಿದ ನ್ಯಾಯಾಲಯ.
ಫಾಸ್ಟ್ಯಾಗ್ ಇಲ್ಲದೆ ಲೇನ್‌ ಬಳಕೆ: ದಂಡ ವಿಧಿಸುವ ಸಾಧ್ಯತೆ ಪರಿಗಣಿಸಲು ಕೇಂದ್ರಕ್ಕೆ ಕೇರಳ ಹೈಕೋರ್ಟ್‌ ನಿರ್ದೇಶನ

ಟೋಲ್‌ ಪ್ಲಾಜಗಳಲ್ಲಿ ಫಾಸ್ಟ್ಯಾಗ್ ಹಾಕಿರುವ ವಾಹನಗಳು ಸಂಚರಿಸಲು ಮೀಸಲಿಟ್ಟಿರುವ ಲೇನ್‌ಗಳನ್ನು ಅದನ್ನು ಹೊಂದಿಲ್ಲದೆ ಇರುವ ವಾಹನಗಳ ಚಾಲಕರು ಬಳಸಿದರೆ ದಂಡ ವಿಧಿಸಲು ಸಾಧ್ಯವೇ ಎಂಬುದನ್ನು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ [ನಿತಿನ್‌ ರಾಮಕೃಷ್ಣನ್‌ ವರ್ಸಸ್‌ ಭಾರತ ಸರ್ಕಾರ].

ತ್ರಿಶ್ಯೂರ್‌ನ ಪಲಿಯೆಕ್ಕರ್‌ ಟೋಲ್‌ ಪ್ಲಾಜದಲ್ಲಿ ತಮ್ಮ ಅಮೂಲ್ಯ ಸಮಯ ನಷ್ಟವಾಯಿತು ಎಂದು ಆಕ್ಷೇಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ವಿ ಜಿ ಅರುಣ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಟೋಲ್‌ ಪ್ಲಾಜಗಳಲ್ಲಿ ಸರಾಗ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ವಾಹನಗಳಿಗೆ ದಂಡ ವಿಧಿಸಲು ಮೋಟಾರು ವಾಹನಗಳ ಕಾಯಿದೆ 1988ಕ್ಕೆ ತಿದ್ದುಪಡಿ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲು ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

“ಫಾಸ್ಟ್ಯಾಗ್ ಹೊಂದಿರುವ ವಾಹನಗಳಿಗೆ ಮೀಸಲಾಗಿರುವ ಲೇನ್‌ಗಳನ್ನು ಅವಧಿ ಮುಗಿದಿರುವ ಫಾಸ್ಟ್‌ಟ್ಯಾಗ್‌ ಹೊಂದಿರುವ ಅಥವಾ ಫಾಸ್ಟ್ಯಾಗ್ ಇಲ್ಲದ ವಾಹನಗಳ ಚಾಲಕರು ಬಳಸಿದರೆ ಅವರಿಗೆ ದಂಡ ವಿಧಿಸಲು ಸಾಧ್ಯವೇ ಎಂಬುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಟೋಲ್‌ ಪ್ಲಾಜಗಳಲ್ಲಿ ಸರಾಗ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ವಾಹನಗಳಿಗೆ ದಂಡ ವಿಧಿಸಲು ಮೋಟಾರು ವಾಹನಗಳ ಕಾಯಿದೆ 1988ರ ಸೆಕ್ಷನ್‌ 201ಕ್ಕೆ ಸೂಕ್ತ ತಿದ್ದುಪಡಿಸಲು ಸಾಧ್ಯವೇ ಎಂಬುದನ್ನು ಪರಿಗಣಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಟೋಲ್‌ ಬೂತ್‌ಗಳಲ್ಲಿ ಅನಗತ್ಯ ಸಮಸ್ಯೆ ಉಂಟು ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾಯಿದೆ ಸೆಕ್ಷನ್‌ 120 ಅಥವಾ ಕೇರಳ ಪೊಲೀಸ್‌ ಕಾಯಿದೆ 2011ರ ಅಡಿ ಕ್ರಮಕೈಗೊಳ್ಳಲು ಪರಿಗಣಿಸುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ನ್ಯಾಯಾಲಯ ನಿರ್ದೇಶಿಸಿದೆ.

Related Stories

No stories found.
Kannada Bar & Bench
kannada.barandbench.com