ಭತ್ತ ಸಂಗ್ರಹ ಯೋಜನೆ ವ್ಯಾಪ್ತಿಯ ರೈತರನ್ನು ಬ್ಯಾಂಕ್‌ಗಳು ಸಾಲಗಾರರಂತೆ ನೋಡುವಂತಿಲ್ಲ: ಕೇರಳ ಹೈಕೋರ್ಟ್

"ಭತ್ತ ಸಂಗ್ರಹ ಯೋಜನೆಯಡಿ ಸರ್ಕಾರಕ್ಕೆ ಧಾನ್ಯ ಮಾರಾಟ ಮಾಡುವ ರೈತರನ್ನು ಸಾಲಗಾರರು ಎಂದು ಬ್ಯಾಂಕ್‌ಗಳು ಅರ್ಥೈಸುವಂತಿಲ್ಲ" ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
Farmer
Farmer

ಕೇರಳ ಸರ್ಕಾರದ ಭತ್ತ ಸ್ವೀಕಾರ ಯೋಜನೆಯ ಮೂಲಕ ಭತ್ತ ಖರೀದಿಗಾಗಿ ಸರ್ಕಾರದಿಂದ ಹಣ ಪಡೆಯುವ ರೈತರನ್ನು ಬ್ಯಾಂಕ್‌ಗಳು ಸಾಲಗಾರರು ಎಂದು ಪರಿಗಣಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ಈಚೆಗೆ ಸ್ಪಷ್ಟಪಡಿಸಿದೆ.

ಯೋಜನೆಯಲ್ಲಿ ರೈತ ಭಾಗಿಯಾಗಿರುವುದು ಆತನ ಸಾಲ ಮೌಲ್ಯಾಂಕದ ಮೇಲೆ ಪರಿಣಾಮ ಬೀರಬಾರದು ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಹೇಳಿದರು.

ಭತ್ತ ಖರೀದಿಗೆ ಹಣ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಮತ್ತು ರೈತನನ್ನು ಬ್ಯಾಂಕ್‌ ನಡೆಸಿಕೊಂಡ ರೀತಿಯಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಸ್ಪಷ್ಟನೆ ನೀಡಿದೆ.

“ಭತ್ತ ಸಂಗ್ರಹ ಯೋಜನೆಯಡಿ ಸರ್ಕಾರಕ್ಕೆ ಪರಿಣಾಮಕಾರಿಯಾಗಿ ಧಾನ್ಯ ಮಾರಾಟ ಮಾಡುವ ರೈತರನ್ನು ಯಾವುದೇ ಬ್ಯಾಂಕ್‌ ಸಾಲಗಾರರೆಂದು ಪರಿಗಣಿಸುವಂತಿಲ್ಲ. ಏಕೆಂದರೆ ಹಣ ಪಾವತಿಸಲು ಸರ್ಕಾರಕ್ಕೆ ಸಮಯ ಹಿಡಿಯುವುದರಿಂದ ರೈತರು ಅಂತಹ ಸೌಲಭ್ಯ ಪಡೆಯಲು ಒತ್ತಡಕ್ಕೀಡಾಗುತ್ತಾರೆ. ಈ ಹಿನ್ನೆಲೆಯಲ್ಲಿ ಅದು ಅವರ ಸಾಲ ಮೌಲ್ಯಾಂಕದ ಮೇಲೆ ಪರಿಣಾಮ ಬೀರುವಂತಿಲ್ಲ” ಎಂದು ನ, 15ರಂದು ನೀಡಿದ ಆದೇಶದಲ್ಲಿ ಅದು ವಿವರಿಸಿದೆ.

Also Read
ರೈತರ ಭೂಮಿ ಕಿತ್ತುಕೊಂಡು ಮಹಾಶಿವರಾತ್ರಿ ಉತ್ಸವ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್

ಯೋಜನೆಗೆ ಸಂಬಂಧಿಸಿದ ರೈತರನ್ನೂ ಬ್ಯಾಂಕ್‌ಗಳು ಸಾಲಗಾರರೆಂದು ಪರಿಗಣಿಸುತ್ತಿದ್ದು ಇದರಿಂದ ರೈತರ ಸಾಲ ಮೌಲ್ಯಾಂಕಗಳ ಮೇಲೆ ಪರಿಣಾಮ ಉಂಟಾಗಿದೆ ಎಂದು ನ್ಯಾ. ರಾಮಚಂದ್ರನ್‌ ಕಳವಳ ವ್ಯಕ್ತಪಡಿಸಿದರು.

ಸಂಗ್ರಹಿಸಿದ ಭತ್ತಕ್ಕೆ ಸರ್ಕಾರ ವಿಳಂಬವಾಗಿ ಹಣ ನೀಡುತ್ತಿರುವುದರಿಂದ ಪಿಆರ್‌ಎಸ್ ಸೌಲಭ್ಯಗಳನ್ನು ಪಡೆಯಲು ಒತ್ತಾಯಿಸಲ್ಪಟ್ಟ ರೈತರ ಸಾಲದ ಮೌಲ್ಯಾಂಕಗಳ ಮೇಲೆ ಪರಿಣಾಮ ಬೀರಬಾರದು. ಇದನ್ನು ನ್ಯಾಯಾಲಯದ ಹಿಂದಿನ ತೀರ್ಪಿನಲ್ಲಿ ಈಗಾಗಲೇ ವಿವರಿಸಲಾಗಿದೆ ಎಂದು ನ್ಯಾಯಮೂರ್ತಿಗಳು ಒತ್ತಿ ಹೇಳಿದರು.  ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 22ರಂದು ನಡೆಯಲಿದೆ.

Kannada Bar & Bench
kannada.barandbench.com