ಚಿನ್ನ ಕಳ್ಳಸಾಗಣೆ ಆರೋಪಿ ಸ್ವಪ್ನಾ ಸುರೇಶ್ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ವಿಮಾನದಲ್ಲಿ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದ ಇಬ್ಬರು ಭಾರತೀಯ ಯುವ ಕಾಂಗ್ರೆಸ್ ಸದಸ್ಯರಿಗೆ ಕೇರಳ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.
ಇಬ್ಬರೂ ಆರೋಪಿಗಳ ಕೃತ್ಯ ಕೇವಲ ರಾಜಕೀಯ ಪ್ರತಿಭಟನೆಯ ಭಾಗವಾಗಿದ್ದು ಮುಖ್ಯಮಂತ್ರಿ ವಿರುದ್ಧ ಅವರಿಗೆ ವೈಯಕ್ತಿಕ ದ್ವೇಷವಿತ್ತು ಎಂಬ ಆರೋಪ ಕೇಳಿಬಂದಿಲ್ಲ ಎಂದು ನ್ಯಾ. ವಿಜು ಅಬ್ರಹಾಂ ತಿಳಿಸಿದರು.
"ವಿಮಾನದಂತಹ ಅತೀವ ಭದ್ರತೆಯ ವಲಯದಲ್ಲಿ ಯಾವುದಾದರೂ ಆಯುಧಗಳನ್ನು ಅರ್ಜಿದಾರರು ಹೊಂದಿದ್ದರು ಎನ್ನುವ ಅಂಶವನ್ನು ಹೇಳಲು ಪ್ರಾಸಿಕ್ಯೂಷನ್‌ಗೆ ಆಸ್ಪದವಿಲ್ಲ. ಯಾವೊಬ್ಬ ಅರ್ಜಿದಾರರಿಗೂ ಅಲ್ಲಿ ಆಯುಧವನ್ನು ಒಯ್ಯಲು ಆಗದು. ಯಾವುದೇ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಪ್ರಕರಣ ಘಟಿಸಿದೆ ಎನ್ನಲು ತನಿಖಾ ಸಂಸ್ಥೆಗೆ ಯಾವುದೇ ಸಾಧಾರವಿಲ್ಲ. ಅರ್ಜಿದಾರರು ಸಹ ಇದು ನಿರ್ದಿಷ್ಟವಾಗಿ ರಾಜಕೀಯ ಪ್ರತಿಭಟನೆಯ ಭಾಗ ಎಂದಿದ್ದಾರೆ," ಎಂದು ನ್ಯಾಯಾಲಯವು ಆದೇಶದ ವೇಳೆ ವಿವರಿಸಿತು.
ಹೆಚ್ಚಿನ ಮಾಹಿತಿಗಾಗಿ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ಜಾಲತಾಣದ ಲಿಂಕ್ ಗಮನಿಸಿ.