ಹಲ್ಲೆ ಪ್ರಕರಣದ ತನಿಖೆ ರದ್ದತಿಗೆ ನಟ ದಿಲೀಪ್ ಮನವಿ: ಸಂತ್ರಸ್ತ ನಟಿ ಪಕ್ಷಕಾರಳಾಗಲು ಕೇರಳ ಹೈಕೋರ್ಟ್ ಅಸ್ತು [ಚುಟುಕು]

ಹಲ್ಲೆ ಪ್ರಕರಣದ ತನಿಖೆ ರದ್ದತಿಗೆ ನಟ ದಿಲೀಪ್ ಮನವಿ: ಸಂತ್ರಸ್ತ ನಟಿ ಪಕ್ಷಕಾರಳಾಗಲು ಕೇರಳ ಹೈಕೋರ್ಟ್ ಅಸ್ತು [ಚುಟುಕು]

ಬಹುಭಾಷಾ ನಟಿಯೊಬ್ಬರ ಅಪಹರಣ ಮತ್ತು ಹಲ್ಲೆ ಪ್ರಕರಣದ ತನಿಖೆ ರದ್ದುಗೊಳಿಸುವಂತೆ ನಟ ದಿಲೀಪ್‌ ಕೋರಿರುವ ಮನವಿಗೆ ಸಂಬಂಧಿಸಿದಂತೆ ತನ್ನನ್ನು ಪ್ರಕರಣದಲ್ಲಿ ಹೆಚ್ಚುವರಿ ಪ್ರತಿವಾದಿಯಾಗಿ ಸೇರಿಸಿಕೊಳ್ಳಬೇಕು ಎಂದು ಸಂತ್ರಸ್ತೆ ನಟಿ ಮಾಡಿದ್ದ ಮನವಿಗೆ ಕೇರಳ ಹೈಕೋರ್ಟ್‌ ಸೋಮವಾರ ಸಮ್ಮತಿ ಸೂಚಿಸಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ರದ್ದುಗೊಳಿಸಬೇಕು ಇಲ್ಲವೇ ತನಿಖೆಯನ್ನು ಸಿಬಿಐಗೆ ವಹಿಸಬೇಕು ದಿಲೀಪ್ ನ್ಯಾಯಾಲಯದ ಮೊರೆ ಹೋಗಿದ್ದರು. ಸಂತ್ರಸ್ತೆ ಪ್ರಕರಣದ ಭಾಗವಾಗಲು ಅವಕಾಶ ನೀಡುವುದನ್ನು ದಿಲೀಪ್‌ ಪರ ವಕೀಲರು ವಿರೋಧಿಸಿದರೂ ನ್ಯಾ. ಕೌಸರ್‌ ಎಡಪ್ಪಗತ್‌ ಅವರು ಆಕೆ ಸಂತ್ರಸ್ತೆಯಾಗಿರುವುದರಿಂದ ಖಂಡಿತವಾಗಿಯೂ ಆಕೆ ಪ್ರಕರಣದಲ್ಲಿ ಭಾಗಿಯಾಗಬಹುದು ಎಂದು ತಿಳಿಸಿ ಮನವಿಯನ್ನು ಅನುಮತಿಸಿದರು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.