ರಸ್ತೆ ರಂಪ: ವಕೀಲರೊಬ್ಬರನ್ನು ರಕ್ಷಿಸಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ

ರಸ್ತೆ ರಂಪ: ವಕೀಲರೊಬ್ಬರನ್ನು ರಕ್ಷಿಸಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ
A1

ರಸ್ತೆ ರಂಪ ಘಟನೆಯೊಂದರಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಹಲ್ಲೆಗೊಳಗಾಗುತ್ತಿದ್ದ ವಕೀಲರೊಬ್ಬರನ್ನು ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಎನ್‌ ನಗರೇಶ್‌ ಇತ್ತೀಚೆಗೆ ರಕ್ಷಿಸಿರುವುದಾಗಿ ವರದಿಯಾಗಿದೆ.

Also Read
ರಸ್ತೆ ರಂಪ ಪ್ರಕರಣ: ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್

ಕೊಚ್ಚಿಯ ಫೋರ್‌ಶೋರ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ತೊಡುಪುಳ ಮೂಲದ ಜಿಜೋ ಸೆಬಾಸ್ಟಿಯನ್ ಎಂಬವವರು ವಕೀಲ ಲಿಯೋ ಲೂಕೋಸ್ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದರು. ಬಳಿಕ ಜಿಜೋ ರಸ್ತೆಯ ಮಧ್ಯೆ ಲಿಯೋ ಅವರ ಮೇಲೆ ಹಲ್ಲೆ ಮಾಡಲಾರಂಭಿಸಿದರು.

Also Read
ರಸ್ತೆ ರಂಪ ಪ್ರಕರಣ: ದಂಡ ಇರಲಿ, ಜೈಲು ಬೇಡ ಎಂದು ಸಿಧು ಸುಪ್ರೀಂ ಕೋರ್ಟ್‌ಗೆ ಮನವಿ

ತಮ್ಮ ಕಾರಿನಲ್ಲಿ ಹೊರಟಿದ್ದ ನ್ಯಾ. ನಾಗರೇಶ್ ಅವರು ಹಲ್ಲೆಯನ್ನು ಗಮನಿಸಿ, ತಮ್ಮ ಜೊತೆಗಿದ್ದ ಪೊಲೀಸ್ ಸಿಬ್ಬಂದಿಗೆ ಗಲಾಟೆ ಬಿಡಿಸುವಂತೆ ಕೇಳಿದರು. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ವಕೀಲ ಲಿಯೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related Stories

No stories found.
Kannada Bar & Bench
kannada.barandbench.com