ಕೇರಳ ಸಾರಿಗೆ ನಿಗಮಕ್ಕೆ ರೀಟೇಲ್‌ ದರದಲ್ಲಿ ತೈಲ ಪೂರೈಸಲು ನೀಡಿದ್ದ ಆದೇಶ ಬದಿಗೆ ಸರಿಸಿದ ಕೇರಳ ಹೈಕೋರ್ಟ್‌

ಕೆಎಸ್‌ಆರ್‌ಟಿಸಿ ಪರವಾಗಿ ಮಧ್ಯಂತರ ಆದೇಶವನ್ನು ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸರ್ಕಾರಿ ಸ್ವಾಮ್ಯದ ಮೂರು ಕಂಪೆನಿಗಳು ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯವು ಆಲಿಸಿತು.
KSRTC buses & petrol diesel price hike
KSRTC buses & petrol diesel price hike india.com

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಚಿಲ್ಲರೆ ಮಾರಾಟ ದರದಲ್ಲಿ ಬೃಹತ್‌ ಪ್ರಮಾಣದಲ್ಲಿ ಡೀಸೆಲ್‌ ಪೂರೈಸುವಂತೆ ತೈಲ ಮಾರಾಟ ಕಂಪೆನಿಗಳಿಗೆ (ಒಎಂಸಿ) ಏಕಸದಸ್ಯ ಪೀಠವು ಮಾಡಿದ್ದ ಆದೇಶವನ್ನು ಶುಕ್ರವಾರ ಕೇರಳ ಹೈಕೋರ್ಟ್‌ ಬದಿಗೆ ಸರಿಸಿದೆ [ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ. ವರ್ಸಸ್‌ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ].

ಅರ್ಜಿದಾರ ಕೆಎಸ್‌ಆರ್‌ಟಿಸಿ ಪರವಾಗಿ ಮಧ್ಯಂತರ ಆದೇಶವನ್ನು ನೀಡಿದ್ದ ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸರ್ಕಾರಿ ಸ್ವಾಮ್ಯದ ಮೂರು ಕಂಪೆನಿಗಳು ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಸಿ ಎಸ್‌ ಡಿಯಾಸ್ ಮತ್ತು ಬಸಂತ್‌ ಬಾಲಾಜಿ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿತು.

"ಅರ್ಜಿದಾರರು ತಮ್ಮ ಸಮಸ್ಯೆಯನ್ನು ಒಎಂಸಿಗಳ ಮುಂದಿರಿಸಿಲ್ಲ: ಬದಲಿಗೆ ನ್ಯಾಯಾಲಯದ ಮುಂದೆ ಧಾವಿಸಿದ್ದಾರೆ. ಹಾಗಾಗಿ 2-4ರ ವರೆಗಿನ ಪ್ರತಿವಾದಿಗಳ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆಪಾದಿಸಲಾಗದು. ಅಲ್ಲದೆ, ಅರ್ಜಿಯಲ್ಲಿ ಕೇಳಲಾಗಿರುವ ಅಂತಿಮ ಪರಿಹಾರವನ್ನು ಮಧ್ಯಂತರ ಕ್ರಮವಾಗಿಯೇ ನೀಡಲಾಗಿದೆ. ಇದು ಕಾನೂನು ಸಮ್ಮತವಲ್ಲ" ಎಂದು ತನ್ನ ಆದೇಶದಲ್ಲಿ ಹೇಳಿದ ನ್ಯಾಯಾಲಯವು ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸಿತು.

ಪ್ರಕರಣದ ಹಿನ್ನೆಲೆ

ಕೇರಳ ರಸ್ತೆ ಸಾರಿಗೆ ನಿಗಮಕ್ಕೆ ತೈಲ ಮಾರಾಟ ಸಂಸ್ಥೆಗಳು ರೀಟೇಲ್‌ ಮಾರುಕಟ್ಟೆಯಲ್ಲಿ ವಿಧಿಸಲಾಗುವ ಡೀಸೆಲ್‌ ದರಕ್ಕಿಂತ ಹೆಚ್ಚಿನ ದರದಲ್ಲಿ ತೈಲ ಮಾರಾಟಕ್ಕೆ ಮುಂದಾಗಿವೆ. ಬೃಹತ್‌ ಪ್ರಮಾಣದಲ್ಲಿ ನಿಗಮವು ತೈಲ ಖರೀದಿಸುವುದು ಇದಕ್ಕೆ ಕಾರಣವಾಗಿದೆ. ತೈಲ ಸಂಸ್ಥೆಗಳ ಈ ನಿರ್ಧಾರವನ್ನು ವಿರೋಧಿಸಿ, ರೀಟೇಲ್ ದರದಲ್ಲಿಯೇ ತನಗೆ ಡೀಸೆಲ್‌ ಒದಗಿಸಲು ಕೋರಿ ನಿಗಮವು ನ್ಯಾಯಾಲಯದ ಮೆಟ್ಟಿಲೇರಿತ್ತು. ಏಕಸದಸ್ಯ ಪೀಠವು ಮಧ್ಯಂತರ ಪರಿಹಾರವಾಗಿ ರೀಟೇಲ್‌ ದರದಲ್ಲಿ ಡೀಸೆಲ್‌ ಒದಗಿಸಲು ಆದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com