ಜಾನಕಿ ಹೆಸರಿನ ವಿವಾದ: ಸಿನಿಮಾ ವೀಕ್ಷಿಸಲಿದೆ ಕೇರಳ ಹೈಕೋರ್ಟ್

ಕಲಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಸಿಬಿಎಫ್‌ಸಿ ಹಸ್ತಕ್ಷೇಪ ಮಾಡುತ್ತಿದೆ ಎಂದು ನ್ಯಾಯಮೂರ್ತಿ ನಗರೇಶ್ ಈ ಹಿಂದಿನ ವಿಚಾರಣೆ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.
JSK movie
JSK movie
Published on

ಕೇಂದ್ರ ಸಚಿವ ಸುರೇಶ್ ಗೋಪಿ ನಟಿಸಿರುವ ಇನ್ನಷ್ಟೇ ತೆರೆ ಕಾಣಬೇಕಿರುವ ಜೆ ಎಸ್ ಕೆ ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ ಚಿತ್ರದ ಪ್ರಧಾನ ಪಾತ್ರದ ಹೆಸರಿಗೆ ಸಂಬಂಧಿಸಿದಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಎತ್ತಿದ ಆಕ್ಷೇಪಣೆ ಕುರಿತು ತೀರ್ಪು ನೀಡುವುದಕ್ಕಾಗಿ ಸಿನಿಮಾ ವೀಕ್ಷಿಸುವುದು ಸೂಕ್ತ ಎಂದು ಕೇರಳ ಹೈಕೋರ್ಟ್ ಬುಧವಾರ ಹೇಳಿದೆ [ಕಾಸ್ಮೋಸ್ ಎಂಟರ್ಟೇನ್ಮೆಂಟ್ ಮತ್ತು ಪ್ರಾದೇಶಿಕ ಅಧಿಕಾರಿ ನಡುವಣ ಪ್ರಕರಣ].

ಚಿತ್ರ ನಿರ್ಮಾಣ ಸಂಸ್ಥೆ ಕಾಸ್ಮೋಸ್ ಎಂಟರ್ ಟೈನ್ಮೆಂಟ್ ತಿಳಿಸಲಿರುವ ಸ್ಟುಡಿಯೋದಲ್ಲಿ ನ್ಯಾಯಮೂರ್ತಿ ಎನ್ ನಗರೇಶ್ ಜುಲೈ 5ರಂದು ಚಿತ್ರ ವೀಕ್ಷಿಸಲಿದ್ದಾರೆ.

Also Read
ʼಸಿನಿಮಾದಲ್ಲಿ ಅತ್ಯಾಚಾರ ಸಂತ್ರಸ್ತೆ ಪಾತ್ರಕ್ಕೆ ಜಾನಕಿ ಎಂದು ಹೆಸರಿಸಬಾರದೆ?ʼ ಕೇರಳ ಹೈಕೋರ್ಟ್ ಪ್ರಶ್ನೆ

ನ್ಯಾಯಕ್ಕಾಗಿ ಹೋರಾಡುತ್ತಿರುವ ಅತ್ಯಾಚಾರ ಸಂತ್ರಸ್ತೆಯ ಪಾತ್ರಕ್ಕೆ ಜಾನಕಿ ಎಂದು ಏಕೆ ಹೆಸರಿಸಬಾರದು ಎಂದು ಅರ್ಥವಾಗುತ್ತಿಲ್ಲ ಎಂಬುದಾಗಿ ನ್ಯಾಯಮೂರ್ತಿಗಳು ಈ ಹಿಂದಿನ ವಿಚಾರಣೆ ಹೇಳಿದ್ದರು. ಕಲಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಸಿಬಿಎಫ್‌ಸಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

Also Read
ಚಿತ್ರೋತ್ಸವಕ್ಕೆ ಚಲನಚಿತ್ರ ಪರಿಗಣನೆಯಲ್ಲಿ ಪಕ್ಷಪಾತ ಆರೋಪ: ಸರ್ಕಾರ, ಅಕಾಡೆಮಿಗೆ ಹೈಕೋರ್ಟ್‌ ತುರ್ತು ನೋಟಿಸ್‌

'ಜಾನಕಿ ' ಹೆಸರಿನ ಅತ್ಯಾಚಾರ ಸಂತ್ರಸ್ತೆಯ ಕಥೆಯನ್ನು ಹೇಳುವ ಈ ಚಿತ್ರ ಜೂನ್ 27ರಂದು ವಿಶ್ವಾದ್ಯಂತ ಬಿಡುಗಡೆಯಾಗಬೇಕಿತ್ತು.

ಜೂನ್ 12 ರಂದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರೂ ಸಿಬಿಎಫ್‌ಸಿ ಸೆನ್ಸಾರ್ ಪ್ರಮಾಣಪತ್ರವನ್ನು ನೀಡದ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿತ್ತು.

Kannada Bar & Bench
kannada.barandbench.com