ವೈದ್ಯರ ಮೇಲಿನ ದಾಳಿ ತಡೆ ಕಾನೂನು ಜಾರಿಯಲ್ಲಿ ಕೇರಳ ಮುಂದು: ರಾಜ್ಯ ಹೈಕೋರ್ಟ್

ಕೊರೊನಾ ಸಾಂಕ್ರಾಮಿಕ ರೋಗ ದಾಳಿ ಮಾಡುವ ಮುನ್ನ ಜಾರಿಗೆ ಬಂದ ಕೇರಳ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಆರೋಗ್ಯ ಸೇವಾ ಸಂಸ್ಥೆಗಳ (ಹಿಂಸಾಚಾರ ಮತ್ತು ಆಸ್ತಿ ಹಾನಿ ತಡೆ) ಕಾಯಿದೆಯು ಅಂತಹ ಶಾಸನಗಳ ಅಗತ್ಯತೆಯನ್ನು ಒತ್ತಿ ಹೇಳುತ್ತದೆ ಎಂದಿದೆ ಪೀಠ.
doctors with Kerala HC
doctors with Kerala HC
Published on

ವೈದ್ಯರು ಮತ್ತಿತರ ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸುವ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಕೇರಳ ಸರ್ಕಾರ ಮುಂದಿದೆ ಎಂದು ಕೇರಳ ಹೈಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.

2012ರಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ದಾಳಿ ಮಾಡುವ ಮುನ್ನ ಜಾರಿಗೆ ಬಂದ ಕೇರಳ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಆರೋಗ್ಯ ಸೇವಾ ಸಂಸ್ಥೆಗಳ (ಹಿಂಸಾಚಾರ ಮತ್ತು ಆಸ್ತಿ ಹಾನಿ ತಡೆ) ಕಾಯಿದೆಯು ಅಂತಹ ಶಾಸನಗಳ ಅಗತ್ಯತೆಯನ್ನು ಒತ್ತಿ ಹೇಳುತ್ತದೆ ಎಂದು ನ್ಯಾ. ಬೆಚು ಕುರಿಯನ್‌ ಥಾಮಸ್‌ ತಿಳಿಸಿದರು.

Also Read
ಕೋವಿಡ್‌ ಲಸಿಕೆಗೆ ಒತ್ತಾಯ ಹೇರುವಂತಿಲ್ಲ, ದೈಹಿಕ ಸ್ವಾಯತ್ತತೆ ನಿಯಂತ್ರಿಸಬಹುದು: ಲಸಿಕೆ ನೀತಿ ಎತ್ತಿಹಿಡಿದ ಸುಪ್ರೀಂ

"ವೈದ್ಯರ ಮೇಲೆ ದಾಳಿ ಮಾಡುವಂತಿಲ್ಲ ಎಂಬ ಸಂದೇಶ ತಲುಪಬೇಕಿದೆ. ಅದಕ್ಕಾಗಿಯೇ ಕಾಯಿದೆ ರೂಪಿಸಲಾಗಿದೆ. ಈ ಕಾಯಿದೆಯಲ್ಲಿ (ಜಾರಿಗೆ ತರುವಲ್ಲಿ) ಕೇರಳ ಪ್ರವರ್ತಕವಾಗಿದೆ, ಇದು ಮಾದರಿಯಾದುದು," ಎಂದು ನ್ಯಾಯಾಧೀಶರು ಮೌಖಿಕವಾಗಿ ವಿವರಿಸಿದರು.

ವೈದ್ಯರು ಮತ್ತು ಸಿಬ್ಬಂದಿಯನ್ನು ನಿಂದಿಸಿ ಆಸ್ಪತ್ರೆಯ ಆಸ್ತಿಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Kannada Bar & Bench
kannada.barandbench.com