ಕೇಂದ್ರ ಸರ್ಕಾರದ ನೂತನ ಕಾನೂನು ಸಚಿವರಾಗಿ ಕಿರಣ್ ರಿಜಿಜು ನೇಮಕ

ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್‌ನಿಂದ ರಿಜಿಜು ಕಾನೂನು ಪದವಿ ಪಡೆದಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕಾನೂನು ಸಚಿವರಾಗಿ ಕಿರಣ್ ರಿಜಿಜು ನೇಮಕ

ಅರುಣಾಚಲ ಪ್ರದೇಶದ ಸಂಸದ ಕಿರಣ್‌ ರಿಜಿಜು ಅವರನ್ನು ಕೇಂದ್ರ ಸರ್ಕಾರದ ನೂತನ ಕಾನೂನು ಸಚಿವರನ್ನಾಗಿ ನೇಮಿಸಲಾಗಿದೆ. ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್‌ನಿಂದ ರಿಜಿಜು ಕಾನೂನು ಪದವಿ ಪಡೆದಿದ್ದಾರೆ.

ಕಾನೂನು ಸಚಿವರಾಗಿ ನೇಮಕಗೊಳ್ಳುವ ಮೊದಲು ಅವರು ಕೇಂದ್ರ ಆಯುಷ್, ಕ್ರೀಡೆ ಮತ್ತು ಯುವಜನ ವ್ಯವಹಾರ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರೊ. ಎಸ್‌ ಪಿ ಸಿಂಗ್ ಭಗೇಲ್‌ ಅವರು ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಾನೂನು ಸಚಿವರಾಗಿದ್ದ ರವಿಶಂಕರ್‌ ಪ್ರಸಾದ್‌ ಬುಧವಾರ ನಡೆದ ಮೋದಿ ಸರ್ಕಾರದ ಸಂಪುಟ ಪುನಾರಚನೆ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

No stories found.
Kannada Bar & Bench
kannada.barandbench.com