ಕೇಂದ್ರ ಕಾನೂನು ಸಚಿವ ಸ್ಥಾನದಿಂದ ಕಿರೆನ್ ರಿಜಿಜು ನಿರ್ಗಮನ; ಅರ್ಜುನ್ ರಾಮ್ ಮೇಘ್ವಾಲ್ ನೂತನ ಕಾನೂನು ಸಚಿವ

ರಿಜಿಜು ಅವರು ಭೂ ವಿಜ್ಞಾನ ಖಾತೆ ವಹಿಸಿಕೊಳ್ಳಲಿದ್ದಾರೆ ಎಂದು ರಾಷ್ಟ್ರಪತಿಗಳ ಪತ್ರಿಕಾ ಪ್ರಕಟಣೆ ತಿಳಿಸಿದೆ.
Arjun Ram Meghwal
Arjun Ram Meghwal

ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು ಕೇಂದ್ರ ಕಾನೂನು ಸಚಿವ ಸ್ಥಾನದಿಂದ ನಿರ್ಗಮಿಸಿದ್ದು, ನೂತನ ಕಾನೂನು ಸಚಿವರಾಗಿ ಅರ್ಜುನ್‌ ರಾಮ್‌ ಮೇಘ್ವಾನ್‌ ಅವರು ನೇಮಿಸಲ್ಪಟ್ಟಿದ್ದಾರೆ.

ರಿಜಿಜು ಅವರು ಇನ್ನು ಮುಂದೆ ಭೂ ವಿಜ್ಞಾನ ಖಾತೆ ನಿರ್ವಹಿಸಲಿದ್ದಾರೆ ಎಂದು ರಾಷ್ಟ್ರಪತಿಗಳ ಪತ್ರಿಕಾ ಹೇಳಿಕೆ ತಿಳಿಸಿದೆ.  

ರಿಜಿಜು ಅವರ ಬದಲಿಗೆ , ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವರಾಗಿರುವ ಅರ್ಜುನ್ ರಾಮ್ ಮೇಘ್ವಾಲ್‌ ಅವರು ಪ್ರಸಕ್ತ ತಮ್ಮ ಬಳಿ ಇರುವ ಖಾತೆಗಳ ಜೊತೆಗೆ ಸ್ವತಂತ್ರ ಖಾತೆಯಾಗಿ ಕಾನೂನು ಸಚಿವಾಲಯವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.   

ಕೇಂದ್ರ ಸರ್ಕಾರ ಜಾಲತಾಣದಲ್ಲಿ ಪ್ರಕಟವಾಗಿರುವ ಪತ್ರಿಕಾ ಪ್ರಕಟಣೆಯಲ್ಲಿ “ಪ್ರಧಾನಿ ಸಲಹೆ ಮೇರೆಗೆ ರಾಷ್ಟ್ರಪತಿಗಳು ಕೇಂದ್ರ ಸಚಿವ ಸಂಪುಟದಲ್ಲಿರುವ ಸಚಿವರ ಖಾತೆಗಳನ್ನು ಮರುಹಂಚಿಕೆ ಮಾಡಲು ಹರ್ಷಿಸುತ್ತಿದ್ದಾರೆ” ಎಂದು ತಿಳಿಸಿದೆ.

(i) ಭೂ ವಿಜ್ಞಾನ ಸಚಿವಾಲಯ ಖಾತೆಯನ್ನುಯ ಕಿರೆನ್‌ ರಿಜಿಜು ಅವರಿಗೆ ವಹಿಸಲಾಗಿದೆ.

(ii) ಕಾನೂನು ಇಲಾಖೆ ರಾಜ್ಯಸಚಿವರಾದ ಅರ್ಜುನ್‌ ಮೇಘ್ವಾಲ್ ಅವರನ್ನು ಕಿರೆನ್‌ ರಿಜಿಜು ಅವರ ಸ್ಥಾನಕ್ಕೆ ತಮ್ಮ ಬಳಿ ಇರುವ ಖಾತೆಗಳ ಜೊತೆಗೆ ಸ್ವತಂತ್ರ ಪ್ರಭಾರದೊಂದಿಗೆ ಕಾನೂನು ಸಚಿವರನ್ನಾಗಿ ನೇಮಕ ಮಾಡಲಾಗಿದೆ.

Kannada Bar & Bench
kannada.barandbench.com