ಅಟಾರ್ನಿ ಜನರಲ್ ಹುದ್ದೆಯಲ್ಲಿ ಮುಂದುವರೆಯಲಿರುವ ಕೆ ಕೆ ವೇಣುಗೋಪಾಲ್; ಮೂರು ತಿಂಗಳು ಸೇವಾವಧಿ ವಿಸ್ತರಣೆ

KK Venugopal
KK Venugopal

ಹಿರಿಯ ನ್ಯಾಯವಾದಿ ಕೆ ಕೆ ವೇಣುಗೋಪಾಲ್ ಅವರು ಭಾರತದ ಅಟಾರ್ನಿ ಜನರಲ್‌ ಹುದ್ದೆಯಲ್ಲಿ ಇನ್ನೂ ಮೂರು ತಿಂಗಳು ಮುಂದುವರಿಯಲಿದ್ದಾರೆ. ವೇಣುಗೋಪಾಲ್ ಅವರ ಅಧಿಕಾರಾವಧಿ ನಾಳೆ ಕೊನೆಗೊಳ್ಳಲಿದ್ದು, ಅವರ ಸೇವಾವಧಿ ವಿಸ್ತರಿಸಲಾಗುವುದು ಎಂದು ಮೂಲಗಳು ʼಬಾರ್ & ಬೆಂಚ್‌ʼಗೆ ತಿಳಿಸಿವೆ.

ವೇಣುಗೋಪಾಲ್ ಅವರನ್ನು ಜುಲೈ 1, 2017 ರಂದು ಮೂರು ವರ್ಷಗಳ ಅವಧಿಗೆ ಅಟಾರ್ನಿ ಜನರಲ್ ಆಗಿ ನೇಮಿಸಲಾಯಿತು, ಇದನ್ನು ತಲಾ ಒಂದು ವರ್ಷದಂತೆ ಎರಡು ಬಾರಿ ವಿಸ್ತರಿಸಲಾಗಿತ್ತು.

ಸಾಂವಿಧಾನಿಕ ಕಾನೂನಿನಲ್ಲಿ ನ್ಯಾಯವೇತ್ತರಾಗಿ ಗುರುತಿಸಿಕೊಂಡಿರುವ ವೇಣುಗೋಪಾಲ್ ಅವರು ಸುದೀರ್ಘ ಆರು ದಶಕಗಳ ಕಾಲ ಕಾನೂನು ಕ್ಷೇತ್ರದಲ್ಲಿ ಸೇವೆಯಲ್ಲಿದ್ದಾರೆ. ಮೊರಾರ್ಜಿ ದೇಸಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿಯೂ ಅವರು ಸೇವೆ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com