
ರಾಜ್ಯದಲ್ಲಿ 1961ರಿಂದ 2010ರವರೆಗೆ ಕಾನೂನು ಪದವಿ ಪಡೆದವರಿಗೆ ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್‌ಗಾಗಿ (ಸಿಒಪಿ) ಅರ್ಜಿ ಸಲ್ಲಿಸಲು ಮೇ 31ರವರೆಗೆ ಕರ್ನಾಟಕ ವಕೀಲರ ಪರಿಷತ್ ಕೊನೆಯ ಅವಕಾಶ ನೀಡಿದೆ.
1961ರಿಂದ 2010ರ ಜೂನ್ 12ರೊಳಗೆ ಕಾನೂನು ಪದವಿ ಪಡೆದಿರುವ ಆದರೆ ಸಿಒಪಿ ಪಡೆಯದಿರುವವರು ₹300 ಸಾಮಾನ್ಯ ಶುಲ್ಕ ಮತ್ತು ₹1,200 ವಿಳಂಬ ಶುಲ್ಕ ಸೇರಿ ಒಟ್ಟು ₹1,500 ಪಾವತಿಸಿ ಸಿಒಪಿಗೆ ಅರ್ಜಿ ಸಲ್ಲಿಸಬಹುದು. ಭೌತಿಕವಾಗಿ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ, ಪೋಸ್ಟ್ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ ಎಂದು ಕೆಎಸ್‌ಬಿಸಿ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ ತಿಳಿಸಿದ್ದಾರೆ.
ಇದೇ ವೇಳೆ 2010ರ ಜೂನ್ 12ರ ಬಳಿಕ ಅಖಿಲ ಭಾರತ ವಕೀಲರ ಪರಿಷತ್ ಪರೀಕ್ಷೆ (ಎಐಬಿಇ) ಉತ್ತೀರ್ಣರಾಗಿ, ನೋಂದಾಣಿ ಮಾಡಿಕೊಂಡಿರುವವರು ಘೋಷಣಾ ಫಾರಂ ಅನ್ನು ಸಲ್ಲಿಸಿರದಿದ್ದರೆ ಆನ್‌ಲೈನ್ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿದೆ.