ವಕೀಲರ ಪ್ರಾಕ್ಟೀಸ್ ಪ್ರಮಾಣಪತ್ರ: ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ವಿಸ್ತರಿಸಿದ ರಾಜ್ಯ ವಕೀಲರ ಪರಿಷತ್

ಮತ್ತೊಂದೆಡೆ ಪರಿಷತ್‌ನಲ್ಲಿ ಖಾಲಿ ಇರುವ ವಿವಿಧ ಉದ್ಯೋಗಗಳಿಗೆ ಸಂಬಂಧಿಸಿದಂತೆ ಅರ್ಹರಿಂದ ಅರ್ಜಿ ಕೂಡ ಆಹ್ವಾನಿಸಲಾಗಿದೆ.
ವಕೀಲರ ಪ್ರಾಕ್ಟೀಸ್ ಪ್ರಮಾಣಪತ್ರ: ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ವಿಸ್ತರಿಸಿದ ರಾಜ್ಯ ವಕೀಲರ ಪರಿಷತ್
Published on

ತಾತ್ಕಾಲಿಕ ನೋಂದಣಿ ಮಾಡಿಕೊಂಡ ಮೂರು ವರ್ಷದೊಳಗೆ ಎಲ್ಲಾ ವಕೀಲರು ಪಡೆಯಬೇಕಿರುವ ಪ್ರಾಕ್ಟೀಸ್‌ ಪ್ರಮಾಣಪತ್ರಕ್ಕಾಗಿ (ಸರ್ಟಿಫಿಕೇಟ್‌ ಆಫ್‌ ಪ್ರಾಕ್ಟೀಸ್‌- ಸಿಒಪಿ) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಕರ್ನಾಟಕ ವಕೀಲರ ಪರಿಷತ್ ವಿಸ್ತರಿಸಿದೆ. ಪರಿಷತ್‌ ಪ್ರಕಟಣೆಯ ಪ್ರಕಾರ  30 ಜೂನ್‌ 2025 ಕೊನೆಯ ದಿನಾಂಕವಾಗಿದೆ

ಭಾರತೀಯ ವಕೀಲರ ಪರಿಷತ್‌ ಆದೇಶದಂತೆ ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ ಅರ್ಹರಾದ ವಕೀಲರು ಮಾತ್ರ ದೇಶದ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್‌ ಮುಂದುವರೆಸಲು ಸಿಒಪಿ ಪಡೆಯಬೇಕಾಗುತ್ತದೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ 1,19,179 ವಕೀಲರು ನೋಂದಾವಣಿಯಾಗಿದ್ದು, ಅದರಲ್ಲಿ ವಕೀಲರು ಈಗಾಗಲೇ ಸಿ.ಓ.ಪಿ ಅರ್ಜಿಗಳನ್ನು 2016, 2019 ಮತ್ತು 2023 ರಲ್ಲಿ ಸ್ವೀಕರಿಸಲಾಗಿದೆ.  ಇದೂವರೆಗೂ ಅಂದರೆ 2025 ರವರೆಗೂ 66,747 ಅರ್ಜಿಗಳು ಮಾತ್ರ ಸ್ವೀಕೃತವಾಗಿವೆ ಎಂದು ಪರಿಷತ್‌ ತಿಳಿಸಿದೆ.

ತಮ್ಮ ವಕೀಲರ ಸಂಘದ ಎಲ್ಲಾ ವಕೀಲರಿಗೆ ಸಿ.ಓ.ಪಿ ಅರ್ಜಿಯನ್ನು ಸಲ್ಲಿಸುವಾಗ ಹಾಲಿ ಇರುವ ಅಂದರೆ ಯಾವ ವಕೀಲರ ಸಂಘದಲ್ಲಿ ನೋಂದಾವಣಿ ಪಡೆದುಕೊಂಡಿರುವ ತಮ್ಮ ವಾಸಸ್ಥಳದ ವಿಳಾಸವನ್ನು ನಮೂದಿಸತಕ್ಕದ್ದು. ಯಾರು ಸಿ.ಓ.ಪಿ ಅರ್ಜಿಯನ್ನು ಸಲ್ಲಿಸುವುದಿಲ್ಲವೋ ಅಂತಹವರಿಗೆ ವಕೀಲರ ಸಂಘದಲ್ಲಿ ನಡೆಯುವ ಚುನಾವಣೆಯಲ್ಲಿ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಚುನಾವಣೆಯಲ್ಲಿ ಮತದಾನದ ಹಕ್ಕು ಇರುವುದಿಲ್ಲ ಅಲ್ಲದೇ ಅಂತಹವರ ವಿರುದ್ಧ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕಾನೂನು ಕ್ರಮಕೈಗೊಳ್ಳಲಾಗುವುದು ಅಲ್ಲದೇ ವಕೀಲರ ಕಲ್ಯಾಣ ನಿಧಿಯಿಂದ ಯಾವುದೇ ರೀತಿಯ ಸೌಲಭ್ಯಗಳು ದೊರುಕುವುದಿಲ್ಲ ಎಂದು ಪರಿಷತ್‌ ಅಧ್ಯಕ್ಷ ಮಿಟ್ಟಲಕೋಡ ಎಸ್‌ ಎಸ್‌ ಅವರು ಹೊರಡಿಸಿರುವ ಪ್ರಕಟಣೆ ತಿಳಿಸಿದೆ.  

ಪರಿಷತ್‌ನಲ್ಲಿ ಉದ್ಯೋಗಾವಕಾಶ

ಪರಿಷತ್‌ನಲ್ಲಿ ವಿವಿಧ ಉದ್ಯೋಗಗಳಿಗೆ ಸಂಬಂಧಿಸಿದಂತೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗ ಬಯಸುವವರು ಕಾರ್ಯದರ್ಶಿ, ಅಪರ ಕಾರ್ಯದರ್ಶಿ, ವ್ಯವಸ್ಥಾಪಕರು, ತಾಂತ್ರಿಕ ಸಿಬ್ಬಂದಿ, ಶೀಘ್ರ ಲಿಪಿಕಾರರು, ಅಟೆಂಡರ್‌ ಹಾಗೂ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇವು ತಲಾ ಒಂದು ಹುದ್ದೆಯಾಗಿವೆ.  ಅಂತೆಯೇ ದ್ವಿತೀಯ ದರ್ಜೆ ಸಹಾಯಕರ ಎರಡು ಹುದ್ದೆಗಳು ಖಾಲಿ ಇವೆ. ಉದ್ಯೋಗಿಗಳಿಗೆ ಸಂಚಿತ ವೇತನ ನೀಡಲಾಗುತ್ತದೆ.

ಇವುಗಳಲ್ಲಿ ಕಾರ್ಯದರ್ಶಿ, ಅಪರ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕಾನೂನು ಪದವಿ ಪಡೆದಿರಬೇಕು. ವ್ಯವಸ್ಥಾಪಕರ ಹುದ್ದೆಗೆ ಬಿಕಾಂ ಪದವಿ ಪಡೆದಿರಬೇಕು. ಎಸ್‌ಡಿಎ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂ ಕಾಂ ಇಲ್ಲವೇ ಬಿ ಕಾಂ ಪದವಿ ಹಾಗೂ ಸಂಬಂಧಿತ ಕ್ಷೇತ್ರಕ್ಕೆ ಪೂರಕವಾದ ಜ್ಞಾನ ಪಡೆದಿರಬೇಕು.

[ಸಿಒಪಿ ಕುರಿತ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್‌ ಕ್ಲಿಕ್ಕಿಸಿ]

Attachment
PDF
Lttr Bar Associations (1)
Preview

[ಉದ್ಯೋಗಾವಕಾಶಗಳ ಕುರಿತ ವಿವರ ಇಲ್ಲಿದೆ]

Attachment
PDF
vacancy (1)
Preview
Kannada Bar & Bench
kannada.barandbench.com