ಲಖಿಂಪುರ್ ಖೇರಿ ಭಯಾನಕ ಕೃತ್ಯದಿಂದ ಐವರ ಪ್ರಾಣಹಾನಿ: ನಾಲ್ವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಅಲಾಹಾಬಾದ್ ಹೈಕೋರ್ಟ್

ಲಖೀಂಪುರ್ ಖೇರಿಯಿಂದ ರೈತರನ್ನು ಹೊರದಬ್ಬಬೇಕು ಮತ್ತು ಓಡಿಸಬೇಕು ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಹೇಳಿಕೆ ನೀಡದಿದ್ದರೆ ಈ ಘಟನೆ ಬಹುಶಃ ನಡೆಯುತ್ತಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಲಖಿಂಪುರ್ ಖೇರಿ ಭಯಾನಕ ಕೃತ್ಯದಿಂದ ಐವರ ಪ್ರಾಣಹಾನಿ: ನಾಲ್ವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಅಲಾಹಾಬಾದ್ ಹೈಕೋರ್ಟ್
Lakhimpur Kheri violence

ಲಖಿಂಪುರ್ ಖೇರಿ ಭಯಾನಕ ಕೃತ್ಯದಿಂದ ಐವರು ಪ್ರಾಣ ಕಳೆದುಕೊಂಡಿದ್ದಾರೆ ಎಂದ ಅಲಾಹಾಬಾದ್‌ ಹೈಕೋರ್ಟ್‌ ಸೋಮವಾರ ನಾಲ್ವರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿತು.

ರೈತರನ್ನು ಖೇರಿ ಜಿಲ್ಲೆಯಿಂದ ಹೊರದಬ್ಬಬೇಕು ಮತ್ತು ಓಡಿಸಬೇಕು ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಹೇಳಿಕೆ ನೀಡದಿದ್ದರೆ ಈ ಘಟನೆ ಬಹುಶಃ ನಡೆಯುತ್ತಿರಲಿಲ್ಲ ಎಂದು ನ್ಯಾ. ದಿನೇಶ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟರು.

"ಉನ್ನತ ಹುದ್ದೆಗಳಲ್ಲಿರುವ ರಾಜಕೀಯ ವ್ಯಕ್ತಿಗಳು ಸಮಾಜದಲ್ಲಿ ಉಂಟಾಗುವ ಪರಿಣಾಮಗಳನ್ನು ಗಮನಿಸಿ ಯೋಗ್ಯ ಭಾಷೆಯಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನೀಡಬೇಕು" ಎಂದು ಅವರು ತಿಳಿಸಿದರು.

Also Read
ಲಖೀಂಪುರ್ ಖೇರಿ: ಆಶಿಶ್ ಮಿಶ್ರಾಗೆ ಅಲಾಹಾಬಾದ್ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಸೆಕ್ಷನ್‌ 144 ಹೇರಿದ್ದರೂ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ತನ್ನ ತಂದೆ ಅಜಯ್ ಮಿಶ್ರಾ ಹೆಸರಿನಲ್ಲಿ ಪಟ್ಟಣದಲ್ಲಿ ಕುಸ್ತಿ ಸ್ಪರ್ಧೆ ಏರ್ಪಡಿಸಿ ಅದರಲ್ಲಿ ಕೇಂದ್ರ ಸಚಿವರು ಅಂತೆಯೇ ರಾಜ್ಯದ ಉಪ ಮುಖ್ಯಮಂತ್ರಿ ಭಾಗವಹಿಸಲು ನಿರ್ಧರಿಸಿದ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಕಾನೂನು ರೂಪಿಸುವವರನ್ನು ಕಾನೂನು ಉಲ್ಲಂಘಿಸುವವರು ಎಂದು ನೋಡಲಾಗದು. ಯಾವುದೇ ಸಭೆ ಸಮಾರಂಭ ನಡೆಸದಂತೆ ಸೆಕ್ಷನ್‌ 144 ವಿಧಿಸಿರುವುದು ಉಪ ಮುಖ್ಯಮಂತ್ರಿಗಳ ಅರಿವಿಗೆ ಬಂದಿರಲಿಲ್ಲ ಎಂಬುದನ್ನು ನಂಬಲಾಗದು” ಎಂದು ನ್ಯಾಯಾಲಯ ಕುಟುಕಿತು.

ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಗೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿತ್ತು.

Related Stories

No stories found.