ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದಿ. ಫಾತಿಮಾ ಬೀವಿ ಅವರ ಸಾಧನೆಯ ಹಾದಿಯ ಇಣುಕು ನೋಟ

ನ್ಯಾಯಮೂರ್ತಿ ಬೀವಿ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡ ದೇಶದ ಮೊದಲ ಮಹಿಳೆ, ಆ ಹುದ್ದೆಗೇರಿದ ಏಷ್ಯಾದ ಮೊದಲ ಮಹಿಳೆ ಎಂಬ ಶ್ರೇಯವೂ ಅವರದ್ದಾಗಿದೆ. ಉನ್ನತ ನ್ಯಾಯಾಂಗ ಸೇವೆಗೆ ಸೇರಿದ ದೇಶದ ಮೊದಲ ಮುಸ್ಲಿಂ ಮಹಿಳೆ ಕೂಡ.
ನ್ಯಾಯಮೂರ್ತಿ ಎಂ ಫಾತಿಮಾ ಬೀವಿ
ನ್ಯಾಯಮೂರ್ತಿ ಎಂ ಫಾತಿಮಾ ಬೀವಿ

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ದಿವಂಗತ ಎಂ ಫಾತಿಮಾ ಬೀವಿ ಅವರಿಗೆ ಗುರುವಾರ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಆ ಮೂಲಕ, ಸಾರ್ವಜನಿಕ ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಅವರು ಪಾತ್ರರಾಗಿದ್ದಾರೆ.

ಕಳೆದ ನವೆಂಬರ್‌ನಲ್ಲಿ ತಮ್ಮ 96ನೇ ವಯಸ್ಸಿನಲ್ಲಿ ನಿಧನರಾದ ಅವರು ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕಗೊಂಡ ಮೊದಲ ಮಹಿಳೆಯಾಗಿದ್ದರು. ಅಲ್ಲದೆ, ದೇಶದ ಉನ್ನತ ನ್ಯಾಯಾಂಗ ಸೇವೆಗೆ ಸೇರಿದ ಮೊದಲ ಮುಸ್ಲಿಂ ಮಹಿಳೆ ಕೂಡ ಆಗಿದ್ದರು.

ಕೇರಳದಲ್ಲಿ 1927ರಲ್ಲಿ ಜನಿಸಿದ ನ್ಯಾ. ಬೀವಿ ಅವರ ಕಾನೂನು ಅಧ್ಯಯನಕ್ಕೆ ತಂದೆಯ ಪ್ರೋತ್ಸಾಹವಿತ್ತು. 1950ರ ವಕೀಲರ ಪರಿಷತ್‌ ಪರೀಕ್ಷೆಯಲ್ಲಿ ಅಗ್ರಸ್ಥಾನ ಅವರದ್ದಾಗಿತ್ತು. ವಕೀಲರ ಪರಿಷತ್‌ನ ಚಿನ್ನದ ಪದಕ ಪಡೆದ ಮೊದಲ ಮಹಿಳೆ ಎಂಬ ಅಗ್ಗಳಿಕೆಯೂ ಅವರ ಹೆಸರಿನಲ್ಲೇ ಇದೆ.

ಕೇರಳದಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಅವರು 1974ರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದರು. 1980ರಲ್ಲಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದ ಬಳಿಕ 1983ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

1989ರಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಷ್ಟು ಮಾತ್ರವೇ ಅಲ್ಲ ಆ ಹುದ್ದೆಗೇರಿದ ಏಷ್ಯಾದ ಮೊದಲ ಮಹಿಳೆ ಎನ್ನುವ ಶ್ರೇಯ ಕೂಡ ಅವರದ್ದಾಗಿದೆ.

1993ರಲ್ಲಿ ನಿವೃತ್ತರಾದ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ, ತಮಿಳುನಾಡಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ನಾಲ್ವರು ಕೈದಿಗಳ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ಅವರು ಬಳಿಕ ತಮಿಳುನಾಡು ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದರು.

[2024ರ ಪದ್ಮ ಪ್ರಶಸ್ತಿ ಪುರಸ್ಕೃತರ ವಿವರಗಳನ್ನು ಇಲ್ಲಿ ಓದಿ]

Attachment
PDF
Padma Award 2024 list.pdf
Preview

Related Stories

No stories found.
Kannada Bar & Bench
kannada.barandbench.com