ಐಟಿ ನಿಯಮಗಳ ತಿದ್ದುಪಡಿ ಕರಡು: ದೂರು ನಿರ್ವಹಣೆಯಲ್ಲಿ ಬದಲಾವಣೆ, ಮಧ್ಯಸ್ಥ ವೇದಿಕೆಗಳ ಜವಾಬ್ದಾರಿ ಹೆಚ್ಚಳ

ಭಾರತದ ಸಂವಿಧಾನದ ಅಡಿ ಪ್ರಜೆಗಳಿಗೆ ನೀಡಲಾಗಿರುವ ಹಕ್ಕುಗಳನ್ನು ಗೌರವಿಸುವುದು ಸೇರಿದಂತೆ ಮಧ್ಯಸ್ಥ ವೇದಿಕೆಗಳಿಗೆ ಸಂಬಂಧಿಸಿದ ಕಲಂ ಅನ್ನು ಪ್ರಸ್ತಾಪಿತ ತಿದ್ದುಪಡಿ ಒಳಗೊಂಡಿದೆ.
IT Rules 2021
IT Rules 2021

ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್‌ ಮಾಧ್ಯಮ ಸಂಹಿತೆ) ನಿಯಮಗಳು 2021ಕ್ಕೆ ತರಲಾಗಿರುವ ತಿದ್ದುಪಡಿ ಕರಡಿಗೆ ಸಂಬಂಧಿಸಿದ ಮಾಧ್ಯಮ ಹೇಳಿಕೆಯನ್ನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಪ್ರಕಟಿಸಿದೆ.

ದೂರು ಮೇಲ್ಮನವಿ ಸಮಿತಿಯನ್ನು ಹೊಸದಾಗಿ ಸೇರ್ಪಡೆಗೊಳಿಸುವ ಮೂಲಕ ಮಹತ್ವದ ಬದಲಾವಣೆ ಮಾಡಲಾಗಿದೆ. ಇದರ ಮುಂದೆ ಇಂಟರ್‌ನೆಟ್ ಬಳಕೆದಾರರು ಮಧ್ಯಸ್ಥ ವೇದಿಕೆಗಳ ದೂರು ಪರಿಹಾರ ಪ್ರಕ್ರಿಯೆಯ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು.

2021ರ ಅಹವಾಲು ಪರಿಹಾರ ವ್ಯವಸ್ಥೆಯಲ್ಲಿನ ಬದಲಾವಣೆ ಹಾಗೂ ಭಾರತದ ಸಂವಿಧಾನದ ಅಡಿ ಪ್ರಜೆಗಳಿಗೆ ನೀಡಲಾಗಿರುವ ಹಕ್ಕುಗಳನ್ನು ಗೌರವಿಸುವುದು ಸೇರಿದಂತೆ ಮಧ್ಯಸ್ಥಿಕೆಗಳಿಗೆ ಸಂಬಂಧಿಸಿದ ಕಲಂ ಅನ್ನು ಪ್ರಸ್ತಾಪಿತ ತಿದ್ದುಪಡಿ ಒಳಗೊಂಡಿದೆ.

ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಮುಂತಾದ ಬೃಹತ್‌ ತಂತ್ರಜ್ಞಾನ ವೇದಿಕೆಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ನಿಯಮಗಳಲ್ಲಿ ಇರುವ ದೌರ್ಬಲ್ಯ ಮತ್ತು ಅಂತರಗಳನ್ನು ಪರಿಹರಿಸಲು ತಿದ್ದುಪಡಿ ಮಾಡಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಇಲಾಖೆಯು ವಿವರಿಸಿದೆ.

ಭಾರತದ ಎಲ್ಲಾ ಇಂಟರ್‌ನೆಟ್‌ ಬಳಕೆದಾರರಿಗೆ ಮತ್ತು ಡಿಜಿಟಲ್‌ ನಾಗರಿಕರಿಗೆ ಮುಕ್ತ, ಸುರಕ್ಷತೆ ಹೊಂದಿರುವ, ವಿಶ್ವಾಸಾರ್ಹ ಮತ್ತು ಹೊಣೆಗಾರಿಕೆ ಖಾತರಿಪಡಿಸುವ ಉದ್ದೇಶವನ್ನು ಈ ನಿಯಮಗಳು ಹೊಂದಿವೆ. ಈ ನಿಯಮಗಳು ಮಧ್ಯಸ್ಥ ವೇದಿಕೆಗಳು, ವಿಶೇಷವಾಗಿ ಬೃಹತ್‌ ತಂತ್ರಜ್ಞಾನ ವೇದಿಕೆಗಳು ತಮ್ಮ ಬಳಕೆದಾರರೊಂದಿಗೆ ಹೊಸ ರೀತಿಯ ಹೊಣೆಗಾರಿಕೆ ರೂಪಿಸಿಕೊಳ್ಳಲು ಕಾರಣವಾಗಿವೆ” ಎಂದು ಹೇಳಲಾಗಿದೆ.

Also Read
ನೂತನ ಐಟಿ ನಿಯಮಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪಿಟಿಐ ಸುದ್ದಿಸಂಸ್ಥೆ

ತಿದ್ದುಪಡಿ ಕರಡು ಜುಲೈ 5ರವರೆಗೆ ಸಾರ್ವಜನಿಕ ಅಭಿಪ್ರಾಯಕ್ಕಾಗಿ ಮುಕ್ತವಾಗಿರಲಿದ್ದು, ಜೂನ್‌ ಮಧ್ಯದಲ್ಲಿ ಸಾರ್ವಜನಿಕರ ಜೊತೆ ಸಮಾಲೋಚನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com