

ವಕಾಲತ್ತು ಎಂಬುದು ಪ್ರದರ್ಶನದ ವಸ್ತುವಾಗಬಾರದು. ಕೇವಲ ವೈಯಕ್ತಿಕ ಲಾಭಕ್ಕಾಗಿ ಬಳಸುವ ಸಾಧನವಾಗಬಾರದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಬುದ್ಧಿಮಾತು ಹೇಳಿದರು.
ರಾಜಸ್ಥಾನದ ಜೋಧಪುರದಲ್ಲಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಎನ್‌ಎಲ್‌ಯು) ಶನಿವಾರ ನಡೆದ ಘಟಿಕೋತ್ಸವ ಭಾಷಣದಲ್ಲಿ ಅವರು ಮಾತನಾಡಿದರು.
“ವಕೀಲರು ಪ್ರಕರಣದ ಸಾರದ ಬದಲು ಪ್ರದರ್ಶನಕ್ಕೆ, ಸ್ಪಷ್ಟತೆಯ ಬದಲು ಸಂಕೀರ್ಣತೆಗೆ, ಅಂತಃಕರಣದ ಬದಲು ಅನುಕೂಲತೆಗೆ ಆದ್ಯತೆ ನೀಡಿದಾಗ, ಪ್ರಜಾಪ್ರಭುತ್ವ ಮೀರಿ ಹೋಗಲು ಯತ್ನಿಸಿದ ಅದೇ ಕೋಟೆಯಂತಹ ಮನೋಭಾವವನ್ನು ಮತ್ತೆ ನಿರ್ಮಿಸುತ್ತಾರೆ” ಎಂದು ಹೇಳಿದರು.
ಸಿಜೆಐ ಭಾಷಣದ ಪ್ರಮುಖಾಂಶಗಳು
ವಕಾಲತ್ತು ಎಂಬುದು ಪ್ರದರ್ಶನದ ವಸ್ತುವಾಗಬಾರದು. ಕೇವಲ ವೈಯಕ್ತಿಕ ಲಾಭಕ್ಕಾಗಿ ಬಳಸುವ ಸಾಧನವಾಗಬಾರದು.
ವಕೀಲರು ಪ್ರಕರಣದ ಸಾರದ ಬದಲು ಪ್ರದರ್ಶನಕ್ಕೆ, ಸ್ಪಷ್ಟತೆಯ ಬದಲು ಸಂಕೀರ್ಣತೆಗೆ, ಅಂತಃಕರಣದ ಬದಲು ಅನುಕೂಲತೆಗೆ ಆದ್ಯತೆ ನೀಡಿದಾಗ, ಪ್ರಜಾಪ್ರಭುತ್ವ ಮೀರಿ ಹೋಗಲು ಯತ್ನಿಸಿದ ಅದೇ ಕೋಟೆಯಂತಹ ಮನೋಭಾವವನ್ನು ಮತ್ತೆ ನಿರ್ಮಿಸುತ್ತಾರೆ.
ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಕಾನೂನು ಮುಚ್ಚಿದ ವ್ಯವಸ್ಥೆಯಾಗಿರದೆ ಭಾಗವಹಿಸುವಿಕೆ ಮತ್ತು ಯುಕ್ತಿಚಿಂತನೆಗೆ ತೆರೆದ ವೇದಿಕೆಯಂತೆ ಕಾರ್ಯ ನಿರ್ವಹಿಸಬೇಕು.
ಅತಿಸಂಕೀರ್ಣ ಭಾಷೆ ಮತ್ತು ತಾಂತ್ರಿಕ ಪದಜಾಲ ಕಾನೂನಿನ ಮುಕ್ತತೆಯನ್ನು ಹಾಳುಮಾಡುವ ಅಪಾಯವಿದೆ.
ಪ್ರತಿ ತಲೆಮಾರಿನಲ್ಲೂ ಕಾನೂನು ಜನರಿಂದ ದೂರವಾಗುವ ಸಾಧ್ಯತೆ ಇರುತ್ತದೆ. ಅದನ್ನು ತಪ್ಪಿಸುವ ಅಗತ್ಯವಿದೆ.
ಕಾನೂನು ವಿದ್ಯಾರ್ಥಿಗಳ ಕರ್ತವ್ಯ ಕಾನೂನನ್ನು ಇನ್ನಷ್ಟು ಜಟಿಲಗೊಳಿಸದೆ ಗ್ರಾಹ್ಯ ಮತ್ತು ಸ್ಪಷ್ಟಗೊಳಿಸುವುದಾಗಿದೆ.
ಕಾನೂನು ಎಂಬುದು ಕೇವಲ ವೃತ್ತಿಜೀವನದ ಮೆಟ್ಟಿಲು ಅಥವಾ ಮಾರುಕಟ್ಟೆ ಸರಕಲ್ಲ. ಅದು ಸಾರ್ವಜನಿಕ ನಂಬಿಕೆಯಾಗಿದ್ದು ವೈಯಕ್ತಿಕ ಲಾಭಕ್ಕೆ ಅದನ್ನು ಬಳಸಬಾರದು.
ನ್ಯಾಯಾಲಯಗಳ ವಿಶ್ವಾಸಾರ್ಹತೆ ನ್ಯಾಯಪೀಠದಂತೆಯೇ ವಕೀಲರ ಮೇಲೂ ಅವಲಂಬಿತವಾಗಿದೆ.