ಐಡಿಐಎ ಕರ್ನಾಟಕ ವತಿಯಿಂದ ಪ್ರಬಂಧ ಸ್ಪರ್ಧೆ: ಖೇತಾನ್ ಅಂಡ್ ಕೋ ಕಾನೂನು ಸಂಸ್ಥೆಯ ಸಹಯೋಗ

ವಾಣಿಜ್ಯ ಅಥವಾ ಕಾರ್ಪೊರೇಟ್ ಕಾನೂನು ವಿಷಯದ ಬಗ್ಗೆ ಅರಿಯಲು ಮತ್ತು ಪ್ರತಿಷ್ಠಿತ ಖೇತಾನ್ ಅಂಡ್ ಕೋ ಕಂಪೆನಿಯಲ್ಲಿ ಇಂಟರ್ನ್‌ಶಿಪ್‌ ಪಡೆಯಲು ಪ್ರಬಂಧ ಸ್ಪರ್ಧೆ ಅವಕಾಶ ಕಲ್ಪಿಸಲಿದೆ.
ಐಡಿಐಎ ಕರ್ನಾಟಕ ವತಿಯಿಂದ ಪ್ರಬಂಧ ಸ್ಪರ್ಧೆ: ಖೇತಾನ್ ಅಂಡ್ ಕೋ ಕಾನೂನು ಸಂಸ್ಥೆಯ ಸಹಯೋಗ
Published on

ಕಾನೂನು ಶಿಕ್ಷಣ ಹೆಚ್ಚು ಕೈಗೆಟಕುವಂತೆ ಮಾಡುವ ಮೂಲಕ ವೈವಿಧ್ಯತೆ ತರುವ ಸಲುವಾಗಿ ಐಡಿಐಎ ಸಂಘಟನೆಯ ಕರ್ನಾಟಕ ವಿಭಾಗ ಖೇತಾನ್‌ ಅಂಡ್‌ ಕೊ ಸಹಯೋಗದೊಂದಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.

ಐಡಿಐಎ ಎಂಬುದು ಲಾಭರಹಿತವಾದ ವಿದ್ಯಾರ್ಥಿಗಳಿಂದ ನಡೆಯುವ ಸಂಘಟನೆಯಾಗಿದ್ದು ಕಾನೂನು ಶಿಕ್ಷಣದ ಮೂಲಕ ಹಿಂದುಳಿದ ಮತ್ತು ಸಮಾಜದಂಚಿನಲ್ಲಿರುವ ವಿದ್ಯಾರ್ಥಿಗಳ ಸಬಲೀಕರಣದ ಗುರಿ ಅದರದ್ದಾಗಿದೆ.

Also Read
ಐಡಿಐಎ ವಿದ್ಯಾರ್ಥಿಗಳ ಸಾಧನೆ: ಅಗ್ರ ರಾಷ್ಟ್ರೀಯ ಕಾನೂನು ಶಾಲೆಗಳಲ್ಲಿ ಪ್ರವೇಶ ಪಡೆದ 12 ವಿದ್ಯಾರ್ಥಿಗಳು

ತನ್ನ ಯೋಜನೆ ಬೆಂಬಲಿಸುವುದಕ್ಕಾಗಿ ನಿಧಿ ಸಂಗ್ರಹಣೆಯ ಚಟುವಟಿಕೆ ಭಾಗವಾಗಿ ಈ ಪ್ರಬಂಧ ಸ್ಪರ್ಧೆಯನ್ನು ಅದು ನಡೆಸುತ್ತಿದೆ. ಸ್ಪರ್ಧೆಯನ್ನು ಆಯೋಜಿಸುವಲ್ಲಿ ಐಡಿಐಎಗೆ ಬೆಂಬಲ ನೀಡುತ್ತಿರುವ ಖೇತಾನ್‌ ಅಂಡ್‌ ಕೋ ಭಾರತದ ಅತ್ಯಂತ ಹಳೆಯ ಮತ್ತು ದೊಡ್ಡ ಕಾನೂನು ಸಂಸ್ಥೆಗಳಲ್ಲಿ ಒಂದಾಗಿದೆ.

ಐದು ವರ್ಷಗಳ ಸಂಯೋಜಿತ ಕಾನೂನು ಪದವಿ ಅಥವಾ ಸ್ವ ಮೂರು ವರ್ಷಗಳ ಸ್ವತಂತ್ರ ಕಾನೂನು ಪದವಿ ಅಧ್ಯಯನ ಮಾಡುತ್ತಿರುವ ಎಲ್ಲಾ ಕಾನೂನು ಪದವಿ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಬಹುಮಾನಗಳ ವಿವರ

ಪ್ರಥಮ  ಸ್ಥಾನ: ಖೇತಾನ್‌ & ಕಂಪನಿಯಲ್ಲಿ ಇಂಟರ್ನ್‌ಶಿಪ್ ಅವಕಾಶ, ಜೊತೆಗೆ ₹5,000 ನಗದು ಬಹುಮಾನ ಮತ್ತು ಪ್ರಮಾಣಪತ್ರ.

ಎರಡನೇ ಸ್ಥಾನ :  ₹3,000 ನಗದು ಹಾಗೂ ಪ್ರಮಾಣಪತ್ರ.

ಒಟ್ಟಾರೆಯಾಗಿ ಟಾಪ್ 5 ಪ್ರಬಂಧಗಳಿಗೆ ಮೆರಿಟ್ ಪ್ರಮಾಣಪತ್ರಗಳು

ಪ್ರಬಂಧದ ವಿಷಯ

ಸ್ಪರ್ಧೆಯಲ್ಲಿ ಭಾಗವಹಿಸುವವರು ವಾಣಿಜ್ಯ ಅಥವಾ ಕಾರ್ಪೊರೇಟ್ ಕಾನೂನಿನ ಕ್ಷೇತ್ರದೊಂದಿಗೆ ಗಣನೀಯವಾಗಿ ವ್ಯವಹರಿಸುವ ವಿಷಯಗಳ ಕುರಿತು ಪ್ರಬಂಧ ರಚಿಸಬೇಕು ಎಂದು ಕೋರಲಾಗಿದೆ. ಸ್ಪರ್ಧಾ ಕಾನೂನು, ಒಪ್ಪಂದ ಕಾನೂನು, ಕಾರ್ಪೊರೇಟ್ ಆಡಳಿತ, ದಿವಾಳಿತನ ಕಾನೂನು, ವಿಮಾ ಕಾನೂನು ಹಾಗೂ ಷೇರು ಕಾನೂನಿನ ಸುತ್ತಲಿನ ವಿಚಾರಗಳನ್ನು ಪ್ರಬಂಧ ಒಳಗೊಂಡಿರಬಹುದು. ಈ ವ್ಯಾಪ್ತಿಯಾಚೆಗಿನ ಪ್ರಬಂಧಗಳನ್ನು ತಿರಸ್ಕರಿಸಲಾಗುತ್ತದೆ. ಪ್ರಬಂಧಗಳ ವಿಷಯ ಹೀಗಿದೆ:

ಭಾರತದಲ್ಲಿ ದತ್ತಾಂಶ ಗೌಪ್ಯತೆ ಮತ್ತು ಸ್ಪರ್ಧಾ ಕಾನೂನಿನ ಛೇದಕ

ಸೆಬಿ ಮತ್ತು ಆರ್ಥಿಕ ಪ್ರಭಾವಿಯ ನಿಯಂತ್ರಣ

ಭಾರತದಲ್ಲಿ ಕಾರ್ಪೊರೇಟ್ ಉದ್ದೇಶದ ಚರ್ಚೆಯ ಮರುನೋಟ

ಭಾರತದಲ್ಲಿ ಪ್ರವರ್ತಕರ ವಿಶ್ವಾಸಾರ್ಹ ಕರ್ತವ್ಯ

ಡಿಜಿಟಲ್ ಕ್ಷೇತ್ರದಲ್ಲಿ ಸ್ಪರ್ಧೆಯ ನಿಯಂತ್ರಣ

ಆಂತರಿಕ ವ್ಯಾಪಾರ ನಿರ್ಬಂಧಕ ನಿಯಂತ್ರಣಗಳಲ್ಲಿ "ಸಂಪರ್ಕಿತ ವ್ಯಕ್ತಿಗಳು" ವ್ಯಾಖ್ಯಾನಕ್ಕೆ ಸೆಬಿ ಮಾಡಿರುವ ತಿದ್ದುಪಡಿ

ಪ್ರಬಂಧ ಸಲ್ಲಿಸಬೇಕಾದ ವಿಧಾನ

ಪದಮಿತಿ: 5000-7000 ಪದಗಳು, ಅಡಿಟಿಪ್ಪಣಿಗಳನ್ನು ಹೊರತುಪಡಿಸಿ.

ಲೇಖಕರ ಸಂಖ್ಯೆ: ಒಬ್ಬರೇ ಬರೆದ ಪ್ರಬಂಧ ಮತ್ತು ಸಹ-ಲೇಖಕರೊಂದಿಗೆ ಬರೆದ ಪ್ರಬಂಧ ಎರಡಕ್ಕೂ ಅವಕಾಶ ಇದೆ.

ಉಲ್ಲೇಖ ಶೈಲಿ:  OSCOLA ನ 4ನೇ ಆವೃತ್ತಿ

ಲಿಪಿ: ಟೈಮ್ಸ್ ನ್ಯೂ ರೋಮನ್; ಲಿಪಿ ಗಾತ್ರ: 12

ಸಾಲಿನ ಅಂತರ: 1.5

ಹೆಸರುಗಳನ್ನು ಪ್ರತ್ಯೇಕವಾಗಿ ನೀಡಿ: ಹೆಸರು, ಇಮೇಲ್ ವಿಳಾಸ, ವಿಶ್ವವಿದ್ಯಾಲಯ ಅಥವಾ ಇನ್ನಾವುದೇ ಗುರುತಿನ ವಿವರಗಳನ್ನು ಉಲ್ಲೇಖಿಸುವಂತಿಲ್ಲ.  ಯಾವುದೇ ಗುರುತಿನ ವಿವರಗಳು ಇದ್ದಲ್ಲಿ ಪ್ರಬಂಧ ತನ್ನಿಂತಾನೇ ತಿರಸ್ಕೃತವಾಗುತ್ತದೆ.

ನೋಂದಣಿ ಮತ್ತು ಪ್ರಬಂಧ ಸಲ್ಲಿಕೆಗೆ ಕೊನೆಯ ದಿನ

ಫೆಬ್ರವರಿ ರಿಂದ ನೋಂದಣಿ ಆರಂಭವಾಗಿದ್ದು ಮಾರ್ಚ್ 10, 2025 ಕೊನೆಯ ದಿನ.

ಮಾರ್ಚ್ 15, 2025 ಪ್ರಬಂಧ ಸಲ್ಲಿಸುವ ಕೊನೆಯ ದಿನ.

ನೋಂದಣಿ ಶುಲ್ಕ

ಒಬ್ಬರೇ ಬರೆದ ಪ್ರಬಂಧಕ್ಕೆ ನೋಂದಣಿ ಶುಲ್ಕ ₹250 ಮತ್ತು ಸಹ-ಲೇಖಕರ ಪ್ರಬಂಧಕ್ಕೆ ನೋಂದಣಿ ಶುಲ್ಕ ₹450.

ನೋಂದಣಿ ಮತ್ತು ಪ್ರಬಂಧ ಸಲ್ಲಿಕೆಯ ಲಿಂಕ್‌

ಸ್ಪರ್ಧೆಗೆ ನೋಂದಾಯಿಸಲು, ಇಲ್ಲಿ ಕ್ಲಿಕ್ಕಿಸಿ

ಪ್ರಬಂಧ ಸಲ್ಲಿಸಲು, ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು idia@nls.ac.in ಗೆ ಇಮೇಲ್ ಮಾಡಿ ಅಥವಾ ಸೈಫ್ ಅಲಿ (ಐಡಿಐಎ ಕರ್ನಾಟಕ ವಿಭಾಗದ ಮುಖ್ಯಸ್ಥರು) ಅವರಿಗೆ +91 8739036060ಗೆ ಸಂದೇಶ ಕಳುಹಿಸಬಹುದಾಗಿದೆ.

[ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
IDIA_Essay_Competition_Brochure
Preview
Kannada Bar & Bench
kannada.barandbench.com