ಮನೆಗೆಲಸದಾಕೆ ಮೇಲೆ ಹಲ್ಲೆ ನಡೆಸಿದ ಆರೋಪ: ವಕೀಲೆಯನ್ನು ಬಂಧಿಸಿದ ನೋಯ್ಡಾ ಪೊಲೀಸರು

ಕೆಲವು ದಿನಗಳ ಹಿಂದೆ ಅನಿತಾ ಎಂಬ ಮಹಿಳೆಯನ್ನು ವಕೀಲೆ ಲಿಫ್ಟ್‌ನಿಂದ ಹೊರಗೆ ಎಳೆದುಕೊಂಡು ಹೋಗುತ್ತಿರುವ ಸಿಸಿಟಿವಿ ದೃಶ್ಯ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಅನಿತಾ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿತ್ತು.
Arrest
Arrest

ಮನೆಗೆಲಸದಾಕೆಯ ಮೇಲೆ ದೌರ್ಜನ್ಯ ಎಸಗಿ ಆಕೆಯನ್ನು ಅಕ್ರಮ ಬಂಧನದಲ್ಲಿರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವಕೀಲೆ ಶೆಫಾಲಿ ಕೌಲ್ ಎಂಬುವರನ್ನು ನೋಯ್ಡಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕೆಲದಿನಗಳ ಹಿಂದೆ ಮನೆಗೆಲಸದಾಕೆಯಾದ ಅನಿತಾ ಎಂಬ ಮಹಿಳೆಯನ್ನು ವಕೀಲೆ ಲಿಫ್ಟ್‌ನಿಂದ ಹೊರಗೆ ಎಳೆದುಕೊಂಡು ಹೋಗುತ್ತಿರುವ ಸಿಸಿಟಿವಿ ದೃಶ್ಯ ಅಂತರ್ಜಾಲದಲ್ಲಿ ವೈರಲ್‌ ಆಗಿತ್ತು. ಅನಿತಾ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶೆಫಾಲಿ ಅವರನ್ನು ಬಂಧಿಸಲಾಗಿದ್ದು ಅವರ ವಿರುದ್ದ ಐಪಿಸಿ ಸೆಕ್ಷನ್‌ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 344 (ಅಕ್ರಮ ಬಂಧನ) ಮತ್ತು 504 (ಯಾರನ್ನಾದರೂ ಪ್ರಚೋದಿಸುವುದು ಅಥವಾ ಅವಮಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read
ವಕೀಲ ಜಗದೀಶ್‌ ಬಂಧನ: ʼಭ್ರಷ್ಟಾಚಾರದ ವಿರುದ್ಧ ನಾವುʼ ವೇದಿಕೆ ಅಡಿ ಪ್ರತಿಭಟನೆ; ಪ್ರಕರಣಗಳನ್ನು ಕೈಬಿಡಲು ಮನವಿ

ಶೆಫಾಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ನೋಯ್ಡಾ ಪೊಲೀಸರು ಮಂಗಳವಾರ ಟ್ವಿಟರ್‌ ಮೂಲಕ ದೃಢಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶೆಫಾಲಿ ಅವರದ್ದೆನ್ನಲಾದ ಮತ್ತೊಂದು ಟ್ವಿಟರ್‌ ಖಾತೆಯಲ್ಲಿ ಎರಡು ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಳ್ಳಲಾಗಿದ್ದು ಕೆಲಸದಾಕೆ ಅನಿತಾ ಕಳ್ಳತನ ಮಾಡಿದ್ದು ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದಾರೆ ಎಂದು ದೂರಲಾಗಿದೆ.

"ಅವಳು ಕಳ್ಳತನ ಮಾಡಿದ್ದಾಳೆ. ನನ್ನ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದಾಳೆ ಎಂಬುದಕ್ಕೆ ನನ್ನ ಬಳಿ ಎಲ್ಲಾ ಸಿಸಿಟಿವಿ ದೃಶ್ಯಗಳು ಮತ್ತು ಸ್ವತಂತ್ರ ಸಾಕ್ಷಿಗಳಿವೆ" ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಈ ವರ್ಷ ಆಗಸ್ಟ್‌ನಲ್ಲಿ ನೋಯ್ಡಾದ ವಕೀಲರೊಬ್ಬರು ಭದ್ರತಾ ಸಿಬ್ಬಂದಿಯ ಮೇಲೆ ದೌರ್ಜನ್ಯ ಎಸಗಿ ಬಂಧನಕ್ಕೊಳಗಾಗಿದ್ದರು.

Related Stories

No stories found.
Kannada Bar & Bench
kannada.barandbench.com