ಸ್ಪರ್ಧಾ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಕ್ ದೈತ್ಯ ಸಂಸ್ಥೆ ಗೂಗಲ್ ವಿರುದ್ಧದ ತನಿಖೆಗೆ ಸಂಬಂಧಿಸಿದ ಪ್ರತಿಕೂಲ ವರದಿಯನ್ನು ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಸೋರಿಕೆ ಮಾಡಿದೆ ಎಂಬ ಗೂಗಲ್‌ನ ಹೇಳಿಕೆಯನ್ನು ಸಿಸಿಐ ನಿರಾಕರಿಸಿದೆ.
“ಗೌಪ್ಯ ವರದಿಯನ್ನು ಸಿಸಿಐ ಸೋರಿಕೆ ಮಾಡಿಲ್ಲ. ಈ ಸಂಬಂಧ ಗೂಗಲ್‌ಗೆ ಅಹವಾಲುಗಳಿದ್ದರೆ ಅವರು ವರದಿ ಪ್ರಕಟಿಸಿದ ಮಾಧ್ಯಮ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದು ಸಿಸಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್ ಹೇಳಿದರು. “ಟೈಮ್ಸ್ ಆಫ್ ಇಂಡಿಯಾ ಇದು ವಿಶೇಷ ವರದಿ ಎಂದು ಹೇಳಿದೆ. ಸಿಸಿಐನಿಂದ ವರದಿ ಪಡೆದಿರುವುದಾಗಿ ವರದಿಯಲ್ಲಿ ಹೇಳಲಾಗಿದೆಯೇ? ಗೂಗಲ್‌ಗೆ ಸಮಸ್ಯೆ ಇದ್ದರೆ ಅವರು ಟೈಮ್ಸ್ ಆಫ್ ಇಂಡಿಯಾ ವಿರುದ್ಧ ಪ್ರಕರಣ ದಾಖಲಿಬೇಕು” ಎಂದರು.
ದೆಹಲಿಯ ಜಂತರ್‌ಮಂತರ್‌ನಲ್ಲಿ ಕಳೆದ ತಿಂಗಳು ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಮುಸ್ಲಿಮ್ ವಿರೋಧಿ ಘೋಷಣೆಗಳನ್ನು ಕೂಗಿದ್ದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ ಪ್ರೀತ್ ಸಿಂಗ್‌ಗೆ ದೆಹಲಿ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
“ಕಳೆದ ಆಗಸ್ಟ್ 9/10ರಿಂದ ಅರ್ಜಿದಾರರು ಕಸ್ಟಡಿಯಲ್ಲಿದ್ದಾರೆ. ವಿಚಾರಣೆಗಾಗಿ ಅವರು ಇನ್ನು ಕಸ್ಟಡಿಯಲ್ಲಿರುವ ಅಗತ್ಯವಿಲ್ಲ. ಅರ್ಜಿದಾರರಿಂದ ₹50,000 ಬಾಂಡ್ ಮತ್ತು ಇಬ್ಬರ ಭದ್ರತೆ ಪಡೆದು ಅವರನ್ನು ಬಿಡುಗಡೆ ಮಾಡಬೇಕು” ಎಂದು ನ್ಯಾಯಮೂರ್ತಿ ಮುಕ್ತ ಗುಪ್ತಾ ಆದೇಶದಲ್ಲಿ ತಿಳಿಸಿದ್ದಾರೆ.