ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 31-5-2021

>> ದೇಶದ್ರೋಹ ಕಾನೂನಿನ ಮರು ವ್ಯಾಖ್ಯಾನ ಅಗತ್ಯ ಎಂದ ಸುಪ್ರೀಂ >> ದೆಹಲಿ ಔಷಧ ನಿಯಂತ್ರಕರಿಗೆ ಹೈಕೋರ್ಟ್‌ ತರಾಟೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 31-5-2021

[ಮುಕ್ತ ಮಾಧ್ಯಮ] “ದೇಶದ್ರೋಹ ಕಾನೂನಿನ ಮರು ವ್ಯಾಖ್ಯಾನ ಅಗತ್ಯ:” ಸುಪ್ರೀಂ ಕೋರ್ಟ್‌

ದೇಶದ್ರೋಹವನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ, ಮಾಧ್ಯಮ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಅದನ್ನು ಅನ್ವಯಿಸುವುದಕ್ಕೆ ಸಂಬಂಧಿಸಿದಂತೆ ಕಾನೂನಿನ ಮರು ವ್ಯಾಖ್ಯಾನದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಕನುಮುರಿ ರಘುರಾಮ ಕೃಷ್ಣ ರಾಜು ಅವರ ನಿಂದನಾತ್ಮಕ ಭಾಷಣವನ್ನು ಪ್ರಸಾರ ಮಾಡಿದ ಆಂಧ್ರ ಸುದ್ದಿ ವಾಹಿನಿಗಳಾದ ಟಿವಿ5 ಮತ್ತು ಎಬಿಎನ್‌ ವಿರುದ್ಧ ಆಂಧ್ರ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಆಧರಿಸಿ ವಾಹಿನಿಗಳ ವಿರುದ್ಧ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ತ್ರಿಸದಸ್ಯ ಪೀಠವು ಹೇಳಿದೆ.

Supreme Court
Supreme Court

“ಭಾರತೀಯ ದಂಡ ಸಂಹಿತೆ 1860ರ ಸೆಕ್ಷನ್ 124ಎ, 153ಎ ಮತ್ತು 505ರ ನಿಬಂಧನೆಗಳ ವ್ಯಾಪ್ತಿಯ ಬಗ್ಗೆ ವ್ಯಾಖ್ಯಾನ ಅಗತ್ಯವಿರುತ್ತದೆ ಎಂಬುದು ನಮ್ಮ ಅಭಿಪ್ರಾಯ. ವಿಶೇಷವಾಗಿ ಸುದ್ದಿ, ಮಾಹಿತಿ ಮತ್ತು ಸಂವಹನ ನಡೆಸಲು ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಿಗೆ ರಾಷ್ಟ್ರದ ಯಾವುದೇ ಭಾಗದಲ್ಲಿರುವ ಸರ್ಕಾರವನ್ನು ಟೀಕಿಸುವ ಹಕ್ಕಿನ ವ್ಯಾಖ್ಯಾನ ಮಾಡಬೇಕಿದೆ” ಎಂದು ಪೀಠದ ನೇತೃತ್ವವಹಿಸಿದ್ದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದರು.

“ನಿಮ್ಮನ್ನು ಅಮಾನತು ಮಾಡುತ್ತೇವೆ:” ಔಷಧ ನಿಯಂತ್ರಕರಿಗೆ ದೆಹಲಿ ಹೈಕೋರ್ಟ್‌ ತರಾಟೆ

ಲೋಕಸಭಾ ಸದಸ್ಯ ಗೌತಮ್‌ ಗಂಭೀರ್‌ ಅವರು ಫ್ಯಾಬಿಫ್ಲೂ ಖರೀದಿಸಿ, ಅದನ್ನು ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ತೃಪ್ತಿಕರವಾದ ರೀತಿಯಲ್ಲಿ ತನಿಖೆ ನಡೆಸಿಲ್ಲ ಎಂದು ದೆಹಲಿ ಔಷಧ ನಿಯಂತ್ರಕರನ್ನು ದೆಹಲಿ ಹೈಕೋರ್ಟ್‌ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

Gautam Gambhir
Gautam Gambhir Indian Express

ಔಷಧ ನಿಯಂತ್ರಕರು ಸಲ್ಲಿಸಿರುವ ಸ್ಥಿತಿಗತಿಗತಿ ವರದಿಯನ್ನು ಅರ್ಥಹೀನ ಎಂದಿರುವ ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ಜಸ್ಮೀತ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ ನಿಬಂಧನೆಗಳಿದ್ದರೂ ಗೌತಮ್‌ ಗಂಭೀರ್‌ ಫೌಂಡೇಶನ್ ಫ್ಯಾಬಿಫ್ಲೂ ಔಷಧವನ್ನು ಡೀಲರ್‌ಗಳು, ಚಿಲ್ಲರೆ ವ್ಯಾಪಾರಿಗಳಿಂದ ಅಪಾರ ಪ್ರಮಾಣದಲ್ಲಿ ಹೇಗೆ ಔಷಧ ಖರೀದಿಸಿತು ಎಂಬುದನ್ನು ಔಷಧ ನಿಯಂತ್ರಕರು ಪರಿಶೀಲಿಸಿಲ್ಲ. “ನಾವು ಮುಗ್ಧರು, ನಮ್ಮನ್ನು ವಂಚಿಸಬಹುದು ಎಂದು ತಿಳಿದುಕೊಂಡಿದ್ದರೆ, ಅದು ತಪ್ಪು.… ನೀವು ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿ. ನಿಮ್ಮನ್ನು ಅಮಾನತು ಮಾಡಿ, ನಿಮ್ಮ ಕೆಲಸವನ್ನು ಬೇರೊಬ್ಬರಿಗೆ ಮಾಡಲು ಸೂಚಿಸುತ್ತೇವೆ. ಇದರಿಂದಾಗಿ (ಅಕ್ರಮವಾಗಿ ಸಂಗ್ರಹಿಸಿದ್ದರಿಂದ) ಫ್ಯಾಬಿಫ್ಲೂ ಲಭ್ಯತೆ ಮಾರುಕಟ್ಟೆಯಲ್ಲಿ ಕಡಿಮೆ ಇರಲಿಲ್ಲ ಎಂದು ಹೇಳುವುದು ತಪ್ಪು. ನಾವು ಕಣ್ಮುಚ್ಚಿ ಕುಳಿತುಕೊಳ್ಳಬೇಕು ಎಂಬುದು ನೀವು ಬಯಸುತ್ತೀರಾ. ಇದರಿಂದ ಪಾರಾಗಬಹುದು ಎಂದು ತಿಳಿದುಕೊಂಡಿದ್ದೀರಾ” ಎಂದು ತರಾಟೆಗೆ ತೆಗೆದುಕೊಂಡಿತು.

Related Stories

No stories found.