ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 5-08-2021

>> ಸಮಾಜ ಮಾನಸಿಕ ಸಮಸ್ಯೆಯನ್ನು ಅನಾರೋಗ್ಯ ಎಂದು ಪರಿಗಣಿಸುತ್ತಿಲ್ಲ ಎಂದ ಹಿಮಾಚಲ ಪ್ರದೇಶ ಹೈಕೋರ್ಟ್‌ >> ಬಾಕಿ ಇರುವ ವಿದೇಶಿ ಕಾರು ತೆರಿಗೆ ಪಾವತಿಸುವಂತೆ ನಟ ಧನುಷ್‌ಗೆ ಸೂಚನೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 5-08-2021

ಸಮಾಜ ಮಾನಸಿಕ ಸಮಸ್ಯೆಯನ್ನು ಅನಾರೋಗ್ಯ ಎಂದು ಪರಿಗಣಿಸುತ್ತಿಲ್ಲ:  ಹಿಮಾಚಲ ಪ್ರದೇಶ ಹೈಕೋರ್ಟ್‌ ಜಾಮೀನು

ಮಾನಸಿಕ ಅಸ್ವಸ್ಥತೆಯ ಆಧಾರದ ಮೇಲೆ ಆರೋಪಿಯೊಬ್ಬನಿಗೆ ಜಾಮೀನು ನೀಡಿರುವ, ಹಿಮಾಚಲ ಪ್ರದೇಶ ಹೈಕೋರ್ಟ್ ಜನರಲ್ಲಿ ಹಾಗೂ ಸಮಾಜದಲ್ಲಿ ಮಾನಸಿಕ ಸಮಸ್ಯೆಗಳನ್ನು ಅನಾರೋಗ್ಯವೆಂದು ಪರಿಗಣಿಸದೆ ಅದನ್ನು ನಿರ್ಲಕ್ಷಿಸುವ ಅಥವಾ ಧಾರ್ಮಿಕ ಪರಿಹಾರ ಆರಿಸಿಕೊಳ್ಳುವ ಪ್ರವೃತ್ತಿ ಇದೆ ಎಂದು ಟೀಕಿಸಿತು.

Himachal Pradesh HC, Mental Illness
Himachal Pradesh HC, Mental Illness

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಅರ್ಜಿದಾರ ಅಜಯ್‌ ಮೇಲಿತ್ತು. ಅಜಯ್‌ ಮಾನಸಿಕ ಅಸ್ವಸ್ಥನಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದ ಎಂಬ ವಿಚಾರವನ್ನು ಸರ್ಕಾರ ಕೂಡ ನಿರಾಕರಿಸಿರಲಿಲ್ಲ. ಇದನ್ನು ಗಮನಿಸಿದ ನ್ಯಾಯಾಲಯ “ಎಲ್ಲಕ್ಕಿಂತ ಹೆಚ್ಚಾಗಿ ಅವರ ಕುಟುಂಬ ಖುದ್ದಾಗಿ ಚಿಕಿತ್ಸೆ ನೀಡಲು ಮುಂದಾಗಿರುವಾಗ ಗಂಭೀರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಅರ್ಜಿದಾರನನ್ನು ಈ ಹಂತದಲ್ಲಿ ಜೈಲಿನಲ್ಲಿ ಬಿಡಲಾಗದು" ಎಂದು ಪೀಠ ತಿಳಿಸಿತು.

ನಲವತ್ತೆಂಟು ಗಂಟೆಗಳಲ್ಲಿ ಬಾಕಿ ಇರುವ ವಿದೇಶಿ ಕಾರು ತೆರಿಗೆ ಪಾವತಿಸುವಂತೆ ನಟ ಧನುಷ್‌ಗೆ ಮದ್ರಾಸ್‌ ಹೈಕೋರ್ಟ್‌ ಸೂಚನೆ

ಇಂಗ್ಲೆಂಡ್‌ನಿಂದ ಆಮದು ಮಾಡಿಕೊಂಡ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಪ್ರವೇಶ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಬಾಕಿ ಇರುವ ₹ 30,30,757 (ಸುಮಾರು ₹ 30.3 ಲಕ್ಷಗಳು) ಮೊತ್ತವನ್ನು ಪಾವತಿಸುವಂತೆ ಕಾಲಿವುಡ್ ನಟ ಧನುಷ್‌ಗೆ ಮದ್ರಾಸ್‌ ಹೈಕೋರ್ಟ್‌ ಗುರುವಾರ ನಿರ್ದೇಶಿಸಿದೆ. ಈ ಕುರಿತಂತೆ ಧನುಷ್‌ 2015ರಲ್ಲಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಾಲಯ ವಿಲೇವಾರಿ ಮಾಡಿದೆ. ತಾನು ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ನಟ ತನ್ನ ವೃತ್ತಿಯನ್ನು ಬಹಿರಂಗಪಡಿಸಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಟೀಕಿಸಿತು.

Dhanush
Dhanush Facebook

ತಾವು ಸೋಮವಾರದೊಳಗೆ ಉಳಿದ ತೆರಿಗೆ ಪಾವತಿಸಲು ಸಿದ್ಧವಿದ್ದು 2015ರ ರಿಟ್ ಅರ್ಜಿಯನ್ನು ಹಿಂಪಡೆಯಲು ಹಿಂಪಡೆಯಲು ಬಯಸಿರುವುದಾಗಿ ಧನುಷ್‌ ಪರ ವಕೀಲರು ತಿಳಿಸಿದರು. ಆದರೆ ತಕ್ಷಣ ಪ್ರಕರಣ ಹಿಂಪಡೆಯಲು ಒಪ್ಪದ ಪೀಠ ಪ್ರಕರಣವನ್ನು ಸುಪ್ರೀಂಕೋರ್ಟ್‌ ವರ್ಷಗಳ ಹಿಂದೆಯೇ ಇತ್ಯರ್ಥಪಡಿಸಿರುವಾಗ ನಟ ಈ ಮೊದಲೇ ಯಾಕೆ ತೆರಿಗೆ ಪಾವತಿಸದೆ ಅರ್ಜಿ ಹಿಂಪಡೆಯಲು ಮುಂದಾದರು ಎಂದು ಪ್ರಶ್ನಿಸಿತು. ತೆರಿಗೆ ಪಾವತಿ ಮಾಡದ ಸಂಬಂಧ ಈ ಹಿಂದಿನ ವಿಚಾರಣೆ ವೇಳೆ ಪೀಠ ಧನುಷ್‌ಗೆ ರೂ ಒಂದು ಲಕ್ಷ ದಂಡವನ್ನು ನ್ಯಾಯಾಲಯವ ವಿಧಿಸಿತ್ತು.

Related Stories

No stories found.
Kannada Bar & Bench
kannada.barandbench.com