ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |02-07-2021

> ಜಯಲಲಿತಾ ನಿಧನದ ತನಿಖೆ ನಡೆಸುತ್ತಿರುವ ಆಯೋಗ ಮುಚ್ಚಲು ಅರ್ಜಿ > ರಥಯಾತ್ರೆ ನಿರ್ಬಂಧಿಸಿರುವ ಒಡಿಶಾ ಸರ್ಕಾರದ ಆದೇಶದ ವಿರುದ್ಧ ಸುಪ್ರೀಂನಲ್ಲಿ ಮನವಿ > ಆಯಿಷಾ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಲು ಹೈಕೋರ್ಟ್‌ ನಕಾರ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |02-07-2021

ಜಯಲಲಿತಾ ನಿಧನದ ಕುರಿತ ತನಿಖೆ ನಡೆಸುತ್ತಿರುವ ಅರುಮುಘಸ್ವಾಮಿ ಆಯೋಗ ಮುಚ್ಚುವಂತೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ಪಿಐಎಲ್‌

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ಕುರಿತು ತನಿಖೆ ನಡೆಸಲು ರಚಿಲಾಗಿದ್ದ ನ್ಯಾ.ಎ ಅರುಮುಘಸ್ವಾಮಿ ಆಯೋಗವನ್ನು ಮುಚ್ಚುವಂತೆ ಕೋರಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಪಿಐಎಲ್‌ ದಾಖಲಾಗಿದ್ದು ಈ ಸಂಬಂಧ ಪ್ರತಿಕ್ರಿಯಿಸುವಂತೆ ನ್ಯಾಯಾಲಯವು ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ (ತೋಂಡನ್‌ ಸುಬ್ರಮಣಿ ವರ್ಸಸ್‌ ತಮಿಳುನಾಡು ಸರ್ಕಾರ ಮತ್ತು ಇತರರು).

Former Chief Minister of Tamil Nadu, J Jayalalithaa
Former Chief Minister of Tamil Nadu, J Jayalalithaa

ಜಯಲಲಿತಾ ಅವರು ಮೃತರಾಗುವುದಕ್ಕೂ ಮುನ್ನ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಅಪೊಲೋ ಆಸ್ಪತ್ರೆಯು ತನಿಖೆಗೆ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಆಯೋಗವು ನಿಷ್ಕ್ರಿಯವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಅಸ್ತಿತ್ವವು ತೆರಿಗೆದಾರರ ಹಣದ ಪೋಲಿಗೆ ಕಾರಣವಾಗಲಿದೆ ಎಂದಿರುವ ಅರ್ಜಿಯು ಆಯೋಗವನ್ನು ಕೊನೆಗಾಣಿಸುವಂತೆ ಕೋರಿದೆ.

ರಥಯಾತ್ರೆಯನ್ನು ಪುರಿಗೆ ಸೀಮಿತಗೊಳಿಸಿರುವ ಒಡಿಶಾ ಸರ್ಕಾರದ ಆದೇಶದ ವಿರುದ್ಧ ಸುಪ್ರೀಂನಲ್ಲಿ ಮನವಿ

ಪುರಿ ಜಗನ್ನಾಥ ರಥ ಯಾತ್ರೆಯನ್ನು ಹೊರತುಪಡಿಸಿ ಉಳಿದಂತೆ ಒಡಿಶಾ ರಾಜ್ಯಾದ್ಯಂತ ವಿವಿಧ ರಥ ಯಾತ್ರೆಗಳನ್ನು ನಿರ್ಬಂಧಿಸಿರುವ ಅಲ್ಲಿನ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ದಾಖಲಾಗಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವು ಪುರಿ ಜಗನ್ನಾಥ ರಥಯಾತ್ರೆಯನ್ನು ಹೊರತುಪಡಿಸಿ ಉಳಿದ ರಥಯಾತ್ರೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಆದರೆ, ಅರ್ಜಿದಾರರು ತಮ್ಮ ಸ್ಥಳದಲ್ಲಿ ಪುರಿಗಿಂತಲೂ ಕಡಿಮೆ ಕೋವಿಡ್‌ ಸಾಂಕ್ರಾಮಿಕತೆ ಇರುವುದಾಗಿ ವಾದಿಸಿದ್ದಾರೆ. “ರಥಯಾತ್ರೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಧಾರ್ಮಿಕ ಹಕ್ಕಿನ ವಿರುದ್ಧವಾದದ್ದು” ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಆಯಿಷಾ ಸುಲ್ತಾನ ವಿರುದ್ಧ ದೇಶದ್ರೋಹದ ಎಫ್‌ಐಆರ್‌ಗೆ ತಡೆ ನೀಡಲು ನಿರಾಕರಿಸಿದ ಕೇರಳ ಹೈಕೋರ್ಟ್‌

ಲಕ್ಷದ್ವೀಪ ಮೂಲದ ಚಿತ್ರನಟಿ ಆಯಿಷಾ ಸುಲ್ತಾನ ವಿರುದ್ಧ ಲಕ್ಷದ್ವೀಪ ಪೊಲೀಸರು ದಾಖಲಿಸಿರುವ ದೇಶದ್ರೋಹದ ಪ್ರಕರಣದ ಕುರಿತಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಲು ಕೇರಳ ಹೈಕೋರ್ಟ್‌ ನಿರಾಕರಿಸಿದೆ. ಆಯಿಷಾ ವಿರುದ್ಧ ವಿಭಿನ್ನ ಧರ್ಮಗಳ ನಡುವೆ ದ್ವೇಷವನ್ನು ಹರಡಲು ಪ್ರಚೋದಿಸಿದ ಆರೋಪವಿದೆ.

Aisha Sultana, Sedition
Aisha Sultana, Sedition

ತಮ್ಮ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ ಕೋರಿದ್ದ ಆಯಿಷಾ ಮನವಿಯನ್ನು ಆಲಿಸಿದ ನ್ಯಾ. ಅಶೋಕ್‌ ಮೆನನ್‌ ನೇತೃತ್ವದ ಪೀಠವು ಪ್ರಕರಣದ ಸಂಬಂಧ ಸಾಕ್ಷ್ಯಗಳನ್ನು ಕಲೆಹಾಕಲು ಹಾಗೂ ಪೂರ್ಣ ತನಿಖೆ ನಡೆಸಲು ಪ್ರಾಸಿಕ್ಯೂಷನ್‌ಗೆ ಸಮಯದ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿತು. ತನಿಖೆಯ ಈ ಹಂತದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸುವುದು ಅಸಮಂಜಸ ಎಂದು ಪೀಠವು ಅಭಿಪ್ರಾಯಪಟ್ಟಿತು.

Related Stories

No stories found.
Kannada Bar & Bench
kannada.barandbench.com