ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |10-07-2021

>> ಕೋವಿಡ್‌ನಿಂದ ನಿಧನ ಹೊಂದಿದ ವ್ಯಕ್ತಿಗಳ ಕುಟುಂಬಗಳಿಗೆ ಸೂಕ್ತ ಪ್ರಮಾಣಪತ್ರ ನೀಡಿ: ಮದ್ರಾಸ್‌ ಹೈಕೋರ್ಟ್‌ >> ಸುಪ್ರೀಂ ಮೊರೆ ಹೋದ ಗ್ರಾಹಕ ವೇದಿಕೆಗಳ ತಾಂತ್ರಿಕ ಸಿಬ್ಬಂದಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |10-07-2021

ಕೋವಿಡ್‌ನಿಂದ ನಿಧನ ಹೊಂದಿದ ಸದಸ್ಯರ ಕುಟುಂಬಗಳಿಗೆ ಸೂಕ್ತ ಪ್ರಮಾಣಪತ್ರಗಳನ್ನು ನೀಡಿ: ಮದ್ರಾಸ್‌ ಹೈಕೋರ್ಟ್‌

ಕೋವಿಡ್‌ನಿಂದ ಮೃತರಾದ ವ್ಯಕ್ತಿಗಳ ಕುಟುಂಬಗಳಿಗೆ ಪರಿಹಾರವನ್ನು ಪಡೆಯಲು ಅನುಕೂಲವಾಗುವ ರೀತಿ ಸೂಕ್ತ ದಾಖಲಾತಿಗಳನ್ನು ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಸೂಚಿಸಿದೆ (ಎಚ್‌ ಎ ಶ್ರೀರಾಜಲಕ್ಷ್ಮಿ ವರ್ಸಸ್‌ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಇತರರು).

COVID-19
COVID-19

ಸುಪ್ರೀಂಕೋರ್ಟ್‌ ತನ್ನ ಜೂನ್‌ 30ರ ಆದೇಶದಲ್ಲಿ ಕೋವಿಡ್‌ನಿಂದ ಮೃತರಾದ ಸದಸ್ಯರ ಕುಟುಂಬಗಳಿಗೆ ಮೃತ ವ್ಯಕ್ತಿಯ ಸಾವು ಕೋವಿಡ್‌ನಿಂದ ಸಂಭವಿಸಿದೆ ಎಂದು ಸೂಚಿಸುವ ಅಧಿಕೃತ ದಾಖಲೆಯೊಂದನ್ನು ರಾಜ್ಯಗಳು ನೀಡಬೇಕು ಎಂದು ನಿರ್ದೇಶಿಸಿರುವುದನ್ನು ಕೇಂದ್ರ ಸರ್ಕಾರವು ತನ್ನ ಹೇಳಿಕೆಯಲ್ಲಿ ತಿಳಿಸಿರುವುದನ್ನು ನ್ಯಾಯಾಲಯವು ಗಮನಿಸಿತು. ಕೋವಿಡ್‌ನಿಂದ ಉಂಟಾದ ಸಾವುಗಳನ್ನು ವರದಿ ಮಾಡುವ ಸಂಬಂಧ ಉಂಟಾಗಿರುವ ಶಂಕೆಗಳ ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸಿತು.

ಗ್ರಾಹಕ ವೇದಿಕೆಗಳ ಸಿಬ್ಬಂದಿಗಳಿಂದ ತಮ್ಮನ್ನು ಇತರೆ ನ್ಯಾಯಾಲಯಗಳ ಸಿಬ್ಬಂದಿಗೆ ಸರಿಸಮನಾಗಿ ಪರಿಗಣಿಸಲು ಸುಪ್ರೀಂ ಕೋರ್ಟ್‌ಗೆ ಅರ್ಜಿ

ದೇಶಾದ್ಯಂತ ಇರುವ ವಿವಿಧ ಗ್ರಾಹಕ ವೇದಿಕೆಗಳು, ಆಯೋಗಗಳಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ 234 ಸಿಬ್ಬಂದಿಗಳು ತಮ್ಮನ್ನು ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯಗಳು ಹಾಗೂ ವಿವಿಧ ನ್ಯಾಯಾಧಿಕರಣಗಳ ಅಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸರಿಸಮನಾಗಿ ಪರಿಗಣಿಸಲು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

Supreme Court and Bars
Supreme Court and Bars

ಇತರ ನ್ಯಾಯಿಕ ವೇದಿಕೆಗಳಡಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಸಿಬ್ಬಂದಿಗಳ ಹೋಲಿಕೆಯಲ್ಲಿ ತಮ್ಮ ವಿರುದ್ಧ “ಮಲತಾಯಿ ಧೋರಣೆ” ಅನುಸರಿಸಲಾಗುತ್ತಿದೆ ಎಂದು ಹೊರಗುತ್ತಿಗೆ ಮೂಲಕ ಕೆಲಸಕ್ಕೆ ನೇಮಿಸಿಕೊಳ್ಳಲಾದ ಈ ಸಿಬ್ಬಂದಿಗಳು ಆರೋಪಿಸಿದ್ದಾರೆ. ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯಗಳು ಸೇರಿದಂತೆ ವಿವಿಧ ನ್ಯಾಯಿಕ ವೇದಿಕೆಗಳಲ್ಲಿ ತಾಂತ್ರಿಕ ಸಿಬ್ಬಂದಿಯನ್ನು ಖಾಯಂಗೊಳಿಸಲಾಗಿದೆ. ಆದರೆ, ಗ್ರಾಹಕರ ವೇದಿಕೆಗಳಲ್ಲಿ ಮಾತ್ರ ತಾಂತ್ರಿಕ ಸಿಬ್ಬಂದಿಗಳನ್ನು ಹೊರಗುತ್ತಿಗೆ ಮುಖೇನ ಮೂರನೇ ಪಕ್ಷಕಾರರ ಮೂಲಕ ನೇಮಿಸಿಕೊಳ್ಳಲಾಗುತ್ತಿದೆ. ಪ್ರತಿವರ್ಷವೂ ಈ ಗುತ್ತಿಗೆಯನ್ನು ಪರಿಷ್ಕರಿಸಲಾಗುತ್ತಿದ್ದು ನೌಕರರನ್ನು ಪ್ರತಿ ವರ್ಷವೂ ಒಂದು ವರ್ಷದ ಅವಧಿಗೆ ಕರಾರಿನ ಮೂಲಕ ತೆಗೆದುಕೊಳ್ಳಲಾಗುತ್ತಿದೆ. ಹೀಗೆ ಸಿಬ್ಬಂದಿಗಳನ್ನು ಮುಂದುವರೆಸುವುದೂ ಸಹ ಸಂಬಂಧಪಟ್ಟ ಗುತ್ತಿಗೆದಾರರ ಇಷ್ಟಾನಿಷ್ಟಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com