ಗುಣಮಟ್ಟದ ಶಿಕ್ಷಣದ ಮೂಲಕ ದುರ್ಬಲ ವರ್ಗಗಳ ಸಬಲೀಕರಣ: ಐಡಿಯಾ ಜೊತೆಗೂಡಿದ ಲೀಗಲ್ಎಡ್ಜ್

ಕಳೆದ ಅನೇಕ ವರ್ಷಗಳಿಂದ ಲೀಗಲ್‌ಎಡ್ಜ್‌ ಹಲವು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿದೆ. ಸಿಎಲ್‌ಎಟಿ 2024ನೇ ಸಾಲಿನ ತರಬೇತಿಗಾಗಿ ಐಡಿಯಾ ಸಂಸ್ಥೆಯ 37 ಶಿಕ್ಷಾರ್ಥಿಗಳಿಗೆ ಅದು ತರಬೇತಿ ನೀಡಲಿದೆ
LegalEdge and IDIA
LegalEdge and IDIA

ಸಮಾಜದ ಅಂಚಿನಲ್ಲಿರುವ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಅವಕಾಶ ಒದಗಿಸುವ ಬದ್ಧತೆಯೊಂದಿಗೆ ಟಾಪ್‌ ರ‍್ಯಾಂಕರ್ಸ್‌ ಸಂಸ್ಥೆಯ ಲೀಗಲ್‌ಎಡ್ಜ್ ಅಂಗಸಂಸ್ಥೆಯು ಐಡಿಯಾ (ಇನ್‌ಕ್ರೀಸಿಂಗ್‌ ಡೈವರ್ಸಿಟಿ ಫಾರ್ ಇನ್‌ಕ್ರೀಸಿಂಗ್‌ ಅಕ್ಸೆಸ್‌) ಸಂಸ್ಥೆಯೊಂದಿಗೆ ಕೈಜೋಡಿಸಿದೆ.

ಐಡಿಯಾ ಎಂಬುದು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ (ಸಿಎಲ್‌ಎಟಿ) ಬರೆಯುವ ಅಭ್ಯರ್ಥಿಗಳಿಗಾಗಿ ಬೋಧನೆ, ಹಣಕಾಸು ನೆರವು ಹಾಗೂ ಮಾರ್ಗದರ್ಶನ ನೀಡುವ ಸರ್ಕಾರೇತರ (ಎನ್‌ಜಿಒ) ಸಂಸ್ಥೆಯಾಗಿದೆ. ಸಮಾಜದ ವಿವಿಧ ಕ್ಷೇತ್ರಗಳಿಗೆ ಸೇರಿದ ಉದಯೋನ್ಮುಖ ಪ್ರತಿಭೆಯ ಮಹತ್ವವನ್ನು ಗುರುತಿಸಿ ಅವರಿಗೆ ಕಾನೂನು ಶಿಕ್ಷಣ ಒದಗಿಸುವ ಸಲುವಾಗಿ ಟಾಪ್‌ ರ‍್ಯಾಂಕರ್ಸ್‌ ಲೀಗಲ್‌ಎಡ್ಜ್‌ 2019ರಿಂದಲೇ ಐಡಿಯಾದೊಂದಿಗೆ ಸಹಭಾಗಿತ್ವ ಹೊಂದಿದೆ.

Also Read
ಐಡಿಐಎ ವಿದ್ಯಾರ್ಥಿಗಳ ಸಾಧನೆ: ಅಗ್ರ ರಾಷ್ಟ್ರೀಯ ಕಾನೂನು ಶಾಲೆಗಳಲ್ಲಿ ಪ್ರವೇಶ ಪಡೆದ 12 ವಿದ್ಯಾರ್ಥಿಗಳು

ಕಳೆದ ಅನೇಕ ವರ್ಷಗಳಲ್ಲಿ ಲೀಗಲ್‌ಎಡ್ಜ್‌ ಹಲವು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿದ್ದು ಭವಿಷ್ಯದಲ್ಲೂ ಈ ನೆರವು ಮುಂದುವರೆಸಲು ತನ್ನನ್ನು ಸಮರ್ಪಿಸಿಕೊಂಡಿದೆ. ಈ ಬೆಸುಗೆಯ ಪರಿಣಾಮ ಎಂಬಂತೆ ಲೀಗಲ್‌ಎಡ್ಜ್‌ ಸಿಎಲ್‌ಎಟಿ 2024ನೇ ಸಾಲಿನ ತರಬೇತಿಗಾಗಿ 37 ಐಡಿಯಾ ಸಂಸ್ಥೆಯ ಶಿಕ್ಷಾರ್ಥಿಗಳಿಗೆ ತರಬೇತಿ ನೀಡಲಿದೆ. ಇವರಲ್ಲಿ ಭೋಪಾಲ್, ರಾಯ್‌ಪುರ್, ಗುರುಗ್ರಾಮ್, ದೆಹಲಿ, ಚಂಡೀಗಢ, ಜಮ್ಮು, ಪಾಟ್ನಾ, ದೆಹಲಿ, ಜೈಪುರ ಮತ್ತು ಜೋಧ್‌ಪುರ ಸೇರಿದಂತೆ ನಗರಗಳಲ್ಲಿ ಆಫ್‌ಲೈನ್ ತರಗತಿ ಆಯ್ದುಕೊಂಡ 19 ವಿದ್ಯಾರ್ಥಿಗಳು ಇದ್ದಾರೆ. ಉಳಿದ 18 ವಿದ್ಯಾರ್ಥಿಗಳು ಆನ್‌ಲೈನ್ ಕೋಚಿಂಗ್‌ಗೆ ಆದ್ಯತೆ ನೀಡಿದ್ದಾರೆ.

ಇದಿಷ್ಟೇ ಅಲ್ಲದೆ ಸಾಮಾಜಿಕ- ಆರ್ಥಿಕವಾಗಿ ಹಿಂದುಳಖಿದ ವರ್ಗಗಳ ವಿದ್ಯಾರ್ಥಿಗಳಿಗೆ ಲೀಗಲ್‌ ಎಡ್ಜ್‌ ʼಉಡಾನ್‌ ಇಡ್ಬ್ಲ್ಯೂಎಸ್‌ʼ, ʼಸೂಪರ್ 30ʼ  ರೀತಿಯ ವಿವಿಧ ಯೋಜನೆಗಳನ್ನು ರೂಪಿಸಿದೆ.  ಐಡಿಯಾ ಜೊತೆ ಸಹಭಾಗಿತ್ವ ಹೊಂದುತ್ತಿರುವುದಕ್ಕಾಗಿ ಸಂಸ್ಥೆಯ ಸಿಇಒ ಗೌರವ್‌ ಗೋಯೆಲ್‌ ಸಂತಸ ವ್ಯಕ್ತಪಡಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com