ಬಲವಂತದ ಲಿಂಗ ಪರಿವರ್ತನೆ: ಮಾರ್ಗಸೂಚಿ ರೂಪಿಸುವಂತೆ ಸೂಚಿಸಿದ ಕೇರಳ ಹೈಕೋರ್ಟ್

ಲಿಂಗ ಪರಿವರ್ತನೆ ಚಿಕಿತ್ಸೆಯ ಅನುಭವಗಳನ್ನು ಅರ್ಜಿದಾರರು ವಿವರಿಸಿದಾಗ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದರು.
Kerala High Court and Transgender

Kerala High Court and Transgender

ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಸಾಮಾನ್ಯವಾಗಿ ಬಲವಂತದ ಲಿಂಗ ಪರಿವರ್ತನೆಗೆ ಒಳಗಾಗುವುದನ್ನು ತಡೆಯಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ಕ್ವೀರ್‌ಲಾ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಅರ್ಜಿ ಸಲ್ಲಿಸಿರುವ ಸಂಘಟನೆ ʼಕ್ವೀರ್‌ಲಾʼ ಲಿಂಗ ಪರಿವರ್ತನೆ ಚಿಕಿತ್ಸೆಯ ಅನುಭವಗಳನ್ನು ವಿವರಿಸಿದಾಗ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದರು. ಇದಕ್ಕೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಅಗತ್ಯಬಿದ್ದರೆ ತಜ್ಞರ ಸಮಿತಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದರು. ಈ ಸಂಬಂಧ ಐದು ತಿಂಗಳೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

Also Read
ತೃತೀಯ ಲಿಂಗಿ ವ್ಯಕ್ತಿಯ ಎನ್‌ಸಿಸಿ ಸೇರ್ಪಡೆ ಕೋರಿಕೆಗೆ ಅನುಮತಿ ನೀಡಿದ ಕೇರಳ ಹೈಕೋರ್ಟ್‌

ಕೇರಳದ ಲೆಸ್ಬಿಯನ್, ಗೇ, ದ್ವಿಲಿಂಗಿ, ಟ್ರಾನ್ಸ್‌ಜೆಂಡರ್, ಕ್ವೀರ್ ಮತ್ತು ಇಂಟರ್‌ಸೆಕ್ಸ್ ಲೈಫ್ (ಎಲ್‌ಜಿಬಿಟಿಕ್ಯೂಐ) ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ನೋಂದಾಯಿತ ಸಂಘವಾದ ʼಕ್ವೀರ್‌ಲಾʼ ಮತ್ತು ಸಂತ್ರಸ್ತರೆಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ.

ಲಿಂಗ ಪರಿವರ್ತನೆ ಎಂಬುದು ವ್ಯಕ್ತಿಯ ಲೈಂಗಿಕ ದೃಷ್ಟಿಕೋನ, ಲಿಂಗ ಅಸ್ಮಿತೆ ಅಥವಾ ಲೈಂಗಿಕ ವರ್ತನೆಯನ್ನು ಬದಲಿಸುವ ಅಥವಾ ನಿಗ್ರಹಿಸುವ ಯತ್ನವಾಗಿದ್ದು ಇದನ್ನು ಲಿಂಗಪರಿವರ್ತನೆಗೆ ಒಳಗಾಗುವ ವ್ಯಕ್ತಿಯ ಒಪ್ಪಿಗೆ ಪಡೆದು ಅಥವಾ ಪಡೆಯದೆಯೂ ಮಾಡಬಹುದು. ಕೌಟುಂಬಿಕ ಹಾಗೂ ಸಾಮಾಜಿಕ ಕಾರಣಗಳಿಂದಾಗಿ ಲೈಂಗಿಕ ಅಲ್ಪಸಂಖ್ಯಾತರನ್ನು ಒತ್ತಾಯಪೂರ್ವಕವಾಗಿ ಅವರ ಇಚ್ಛೆಗೆ ವಿರುದ್ಧವಾಗಿ ಲಿಂಗ ಪರಿವರ್ತನೆಗೆ ದೂಡುವ ಪ್ರಕರಣಗಳು ವರದಿಯಾಗಿವೆ. ವ್ಯಕ್ತಿಯ ಲೈಂಗಿಕ ನಿಲುವನ್ನು, ಲಿಂಗ ಅಭಿವ್ಯಕ್ತಿ ಮತ್ತು ಲಿಂಗ ಗುರುತನ್ನು ಒತ್ತಾಯಪೂರ್ಕ ಮಾನಸಿಕ ಚಿಕಿತ್ಸೆಯಂತಹ ಪ್ರಕ್ರಿಯೆ ಮೂಲಕ ಹತ್ತಿಕ್ಕುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತತ ಪ್ರಕರಣ ಮಹತ್ವವನ್ನು ಪಡೆದಿದೆ. ಪ್ರಕರಣದ ಮುಂದಿನ ವಿಚಾರಣೆ 2022ರ ಮೇ 18ಕ್ಕೆ ನಿಗದಿಯಾಗಿದೆ.

Related Stories

No stories found.
Kannada Bar & Bench
kannada.barandbench.com