ಫಿಟ್ನೆಸ್‌, ಪರ್ಮಿಟ್, ಪರವಾನಗಿ, ನೋಂದಣಿ ಸೇರಿದಂತೆ ಮೋಟಾರ್ ವಾಹನಗಳ ಸಿಂಧುತ್ವ ಡಿಸೆಂಬರ್ 31ರ ವರೆಗೆ ವಿಸ್ತರಣೆ

ಕೋವಿಡ್ ಸಾಂಕ್ರಾಮಿಕತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮೋಟಾರು ವಾಹನಗಳ ದಾಖಲೆಯನ್ನು ಡಿಸೆಂಬರ್ 31ರ ವರೆಗೂ ಊರ್ಜಿತ್ವ ಹೊಂದಿವೆ ಎಂದು ಪರಿಗಣಿಸಲು ಜಾರಿ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ.
Mumbai RTO
Mumbai RTO

ಕೋವಿಡ್ ಸಾಂಕ್ರಾಮಿಕತೆ ಹಿನ್ನೆಲೆಯಲ್ಲಿ ಮೋಟಾರು ವಾಹನಗಳಿಗೆ ಸಂಬಂಧಿಸಿದ ಫಿಟ್ನೆಸ್‌, ಪರ್ಮಿಟ್ ಗಳು, ಪರವಾನಗಿ, ನೋಂದಣಿ ಮತ್ತು ಇತರೆ ದಾಖಲೆಗಳ ಊರ್ಜಿತತ್ವವನ್ನು ಡಿಸೆಂಬರ್‌ 31ರ ವರೆಗೂ ವಿಸ್ತರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜಾರಿ ಸಂಸ್ಥೆಗಳಿಗೆ ಸೂಚಿಸಿದೆ.

ಮೋಟಾರು ವಾಹನಗಳ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮ 1989 ರ ಅಡಿ ಸದರಿ ದಾಖಲೆಗಳ ಊರ್ಜಿತತ್ವವನ್ನು ಡಿಸೆಂಬರ್ 31, 2020ರ ವರೆಗೂ ವಿಸ್ತರಿಸಲಾಗಿದೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇ ವರ್ಷದ ಫೆಬ್ರುವರಿಯಿಂದ ಡಿಸೆಂಬರ್ 31ರ ನಡುವೆ ಸಿಂಧುತ್ವ ಕಳೆದುಕೊಳ್ಳುವ ಎಲ್ಲಾ ದಾಖಲೆಗಳಿಗೂ ಮಾನ್ಯತೆ ವಿಸ್ತರಿಸಲಾಗುವುದು. ದೇಶದಲ್ಲಿ ಕೋವಿಡ್ ಸಾಂಕ್ರಾಮಿಕತೆ ಇನ್ನೂ ಮುಂದುವರಿಯುತ್ತಿದ್ದು, ಲಾಕ್‌ ಡೌನ್ ನಿಮಯಗಳು ಚಾಲ್ತಿಯಲ್ಲಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

“ಸಾರಿಗೆ ಸಂಬಂಧಿತ ಸೇವೆಯ ನಿರೀಕ್ಷೆಯಲ್ಲಿರುವ ಜನರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಗಳ ನಿರ್ಧಾರದಿಂದ ಅನುಕೂಲವಾಗಲಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com