ದುಷ್ಯಂತ್‌ ಧವೆ ಅವರ ಹಿರಿಯ ನ್ಯಾಯವಾದಿ ಸ್ಥಾನವನ್ನು ಹಿಂಪಡೆಯುವಂತೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಕೆ

ತಮ್ಮದೇ ಪ್ರಕರಣದಲ್ಲಿ ನಿವೃತ್ತ ಸಿಜೆಐ ಗೊಗೊಯ್‌ ಅವರು ನ್ಯಾಯಮೂರ್ತಿಗಳಾಗಿದ್ದರು ಎನ್ನುವುದನ್ನು ಸೂಚ್ಯವಾಗಿ ತಿಳಿಸುವ ಮೂಲಕ ನ್ಯಾಯವಾದಿ ಧವೆ ಅವರು “ಇಬ್ಬಗೆ ನೀತಿ” ಅನುಸರಿಸುತ್ತಿದ್ದಾರೆ ಎನ್ನುವುದು ಅರ್ಜಿದಾರ ಶರದ್‌ ದತ್ತ ಯಾದವ್‌ ಆರೋಪ.
ದುಷ್ಯಂತ್‌ ಧವೆ
ದುಷ್ಯಂತ್‌ ಧವೆ

ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್‌ ವಿರುದ್ಧ ಸುಪ್ರೀಂ ಕೋರ್ಟ್‌ ದಾಖಲಿಸಿರುವ ಸ್ವಯಂ ಪ್ರೇರಣಾ ಅರ್ಜಿಯ ಸಂಬಂಧ ಭೂಷಣ್‌ ಪರವಾಗಿ ವಾದ ಮಾಡುತ್ತಿರುವ ಹಿರಿಯ ನ್ಯಾಯವಾದಿ ದುಷ್ಯಂತ್ ಧವೆ ಅವರು “ಸುಪ್ರೀಂ ಕೋರ್ಟಿನ ಘನತೆಗೆ ಮಸಿ ಬಳಿಯುವ” ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ, ಅವರಿಂದ ಹಿರಿಯ ನ್ಯಾಯವಾದಿ ಸ್ಥಾನವನ್ನು ಹಿಂಪಡೆಯುವಂತೆ ಅರ್ಜಿದಾರರಾದ ಶರದ್‌ ದತ್ತ ಯಾದವ್‌ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ.

ಸಂವಿಧಾನದ 32 ಹಾಗೂ 14ನೇ ವಿಧಿಯನ್ವಯ ಶರದ್‌ ದತ್ತ ಯಾದವ್‌ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಯಾದವ್‌ ಅವರು ಕೋರ್ಟಿನ ವಿಚಾರಣೆಯ ಮಾಹಿತಿಗಾಗಿ ಬಾರ್ & ಬೆಂಚ್‌ ಹಾಗೂ ಇತರೆ ಕಾನೂನು ಸುದ್ದಿತಾಣಗಳನ್ನು ಅವಲಂಬಿಸಿದ್ದು, ತಮ್ಮ ಅರ್ಜಿಯಲ್ಲಿ ಹೀಗೆ ಹೇಳಿದ್ದಾರೆ,

“ಧವೆ ಅವರು ಸುಪ್ರೀಂ ಕೋರ್ಟಿನ ಘನತೆಗೆ ಕಳಂಕ ತರುವಂತಹ ಒರಟು ಧೋರಣೆಯನ್ನು ವ್ಯಕ್ತಪಡಿಸಲು ಅವರು ತಮ್ಮ ಬಗೆಗೆ ತಾವೇ ಹೊಂದಿರುವ ತಾನೊಬ್ಬ ಧರ್ಮಿಷ್ಠ, ನೈತಿಕತೆಯ ಹಾಗೂ ಸುಪ್ರೀಂ ಕೋರ್ಟಿನ ಆಗುಹೋಗುಗಳ ರಕ್ಷಕ ಎನ್ನುವ ಪ್ರದರ್ಶನಕಾರಿ ಧೋರಣೆಗೆ ಹೊರತಾದ ಇನ್ನಾವುದೇ ವಿವರಣೆಗಳಿಲ್ಲ. ಅವರ ಈ ನಡೆ ನ್ಯಾಯಿಕ/ಸಾಮಾಜಿಕ ಅವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಅರ್ಜಿದಾರರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರಲಿದೆ.”

ಶರದ್‌ ದತ್ತ ಯಾದವ್‌ ಮನವಿ

ಪ್ರಶಾಂತ್‌ ಭೂಷಣ್‌ ವಿರುದ್ಧದ ನ್ಯಾಯಾಂಗ ನಿಂದನೆಯ ಸ್ವಯಂ ಪ್ರೇರಣೆ ಅರ್ಜಿಯ ಕುರಿತಾದ ಆದೇಶವನ್ನು ಸುಪ್ರೀಂ ಕೋರ್ಟ್‌ ಆಗಸ್ಟ್ 5ರಂದು ಕಾಯ್ದಿರಿಸಿತ್ತು. ತಮ್ಮ ಎರಡು ಟ್ವೀಟ್‌ ಗಳ ಮೂಲಕ ಸುಪ್ರೀಂ ಕೋರ್ಟಿನ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎನ್ನುವ ಆರೋಪ ಭೂಷಣ್ ಅವರ ಮೇಲಿದೆ.

ಧವೆ ಅವರು ತಮ್ಮ ವಾದದಲ್ಲಿ ಭೂಷಣ್‌ ಅವರ ಟೀಕೆಯು ಮುಖ್ಯ ನ್ಯಾಯಮೂರ್ತಿಗಳಿಗೆ ಸಂಬಂಧಿಸಿದಂತೆ ಮಾತ್ರವೇ ಮಾಡಿದ್ದಾಗಿದ್ದು, ಅದನ್ನು ಅಷ್ಟೇ ವ್ಯಕ್ತಿಗತ ನೆಲೆಗೆ ಸೀಮಿತವಾಗಿ ಪರಿಗಣಿಸಬೇಕು ಎಂದು ಹೇಳಿದ್ದರು. ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಟೀಕೆಯನ್ನು ಮಾಡಿದರೆ ಅದನ್ನು ಸುಮ್ಮನಿರಿಸಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದರು. ಅಲ್ಲದೆ, 2018ರ ಜನವರಿಯಲ್ಲಿ ನ್ಯಾಯಮೂರ್ತಿಗಳು ನಡೆಸಿದ್ದ ಸಾರ್ವಜನಿಕ ಪತ್ರಿಕಾಗೋಷ್ಠಿಯ ಬಗ್ಗೆ ಇದೇ ವೇಳೆ ಗಮನಸೆಳೆದಿದ್ದರು.

ಇದಿಷ್ಟೇ ಅಲ್ಲದೆ, ಧವೆಯವರು ಈ ಹಿಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ವಿರುದ್ಧದ ಲೈಂಗಿಕ ಕಿರುಕುಳದ ಪ್ರಕರಣವನ್ನೂ ಸಹ ಧವೆ ನೆನಪಿಸಿದ್ದರು. ಮಹಿಳಾ ಸಿಬ್ಬಂದಿಯೊಬ್ಬರಿಂದಲೇ ಈ ಆರೋಪಗಳು ಕೇಳಿಬಂದಿದ್ದನ್ನು, ಇದಕ್ಕೆ ಪ್ರತಿಯಾಗಿ ಮಹಿಳೆಯ ವಿರುದ್ಧ ಪ್ರತ್ಯಾರೋಪ ನಡೆದಿದ್ದನ್ನು ಅವರು ಪ್ರಸ್ತಾಪಿಸಿದ್ದರು. ಆದರೆ ಆರೋಪಗಳು ಬಿದ್ದು ಹೋದ ಪರಿಣಾಮ ಆ ಮಹಿಳೆ ಕರ್ತವ್ಯದಲ್ಲಿ ಮುಂದುವರೆದಿರುವ ಬಗ್ಗೆಯೂ ಗಮನಸೆಳೆದಿದ್ದರು.

ನ್ಯಾಯಮೂರ್ತಿ ನಾರಿಮನ್‌ ಅವರಿಗೆ ರಾಜಕೀಯ ಸೂಕ್ಷ್ಮದ ಪ್ರಕರಣಗಳು ಸಿಗಬೇಕು ಎನ್ನುವ ಧವೆಯವರ ಆಸಕ್ತಿ ವಿವರಣೆಗೆ ಮೀರಿದ್ದು.
ಶರದ್‌ ದತ್ತ ಯಾದವ್‌ ಆರೋಪ

ಧವೆ “ಇಬ್ಬಗೆ ನೀತಿಯನ್ನು” ಅನುಸರಿಸುತ್ತಿರುವುದಾಗಿ ಯಾದವ್‌ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ನಿವೃತ್ತ ಸಿಜೆಐ ಗೊಗೊಯ್‌ ತಮ್ಮದೇ ಪ್ರಕರಣದಲ್ಲಿ ನ್ಯಾಯಮೂರ್ತಿಯಾಗಿದ್ದ ಬಗ್ಗೆ ಹೇಳುವ ಧವೆಯವರು ನ್ಯಾಯಮೂರ್ತಿಗಳಾದ ರೋಹಿನ್ಟನ್ ನಾರಿಮನ್‌ ಮತ್ತು ವಿನೀತ್‌ ಸರಣ್‌ ಅವರು ತಮ್ಮದೇ ವಿರುದ್ಧದ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾಗಿದ್ದನ್ನು ಬೇಕೆಂದೇ ಮೆರೆಯುತ್ತಾರೆ. “ಧವೆಯವರ ಈ ಅವಕಾಶವಾದಿ ಮರೆಗುಳಿತನ ಚಿಂತೆಗೀಡುಮಾಡುವಂಥದ್ದು,” ಎಂದಿದ್ದಾರೆ.

ಅಲ್ಲದೆ, ನ್ಯಾಯಮೂರ್ತಿ ನಾರಿಮನ್‌ ಅವರ ಪರವಾಗಿ ಧವೆ ಅವರು ವಾದಿಸುತ್ತಿರುವಂತೆ ತೋರುತ್ತಿದ್ದು, ರಾಜಕೀಯ ಸೂಕ್ಷ್ಮದ ಪ್ರಕರಣಗಳಲ್ಲಿ ನಾರಿಮನ್‌ ಅವರನ್ನು ಹೊರಗಿರಿಸುತ್ತಿರುವುದೇಕೆ ಎಂದು ಪ್ರಶ್ನಿಸುವ ಮೂಲಕ ಅವರ ಹೇಳಿಕೆಯು ಅಪಾಯಕಾರಿ ಸ್ವರೂಪ ಪಡೆದುಕೊಂಡಿದೆ ಎಂದು ಯಾದವ್‌ ಅರ್ಜಿಯಲ್ಲಿ ಹೇಳಿದ್ದಾರೆ. ನ್ಯಾಯಮೂರ್ತಿ ನಾರಿಮನ್‌ ಅವರಿಗೆ ರಾಜಕೀಯ ಸೂಕ್ಷ್ಮದ ಪ್ರಕರಣಗಳು ಸಿಗಬೇಕು ಎನ್ನುವ ಧವೆಯವರ ಆಸಕ್ತಿ ವಿವರಣೆಗೆ ಮೀರಿದ್ದು ಎಂದು ಆರೋಪಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com