ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಒಬಿಸಿ ಮೀಸಲಾತಿಗೆ ಶಿಫಾರಸು ಮಾಡಿದ್ದ ಮಧ್ಯಂತರ ವರದಿ ತಿರಸ್ಕರಿಸಿದ ಸುಪ್ರೀಂ

ಶೇ 27ರಷ್ಟು ಒಬಿಸಿ ಕೋಟಾವ ಜಾರಿಗೆ ತರದೇ ಮಧ್ಯಂತರ ವರದಿ ಅನುಷ್ಠಾನಗೊಳಿಸಬಾರದು ಮತ್ತು ಚುನಾವಣೆ ನಡೆಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್ಇಸಿ) ನ್ಯಾಯಾಲಯ ನಿರ್ದೇಶಿಸಿದೆ.
Justices Dinesh Maheshwari, AM Khanwilkar and CT Ravikumar

Justices Dinesh Maheshwari, AM Khanwilkar and CT Ravikumar

Published on

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಶಿಫಾರಸು ಮಾಡಿ ಹಿಂದುಳಿದ ವರ್ಗ ಆಯೋಗ ಸಲ್ಲಿಸಿದ್ದ ಮಧ್ಯಂತರ ವರದಿಗೆ ಸುಪ್ರೀಂ ಕೋರ್ಟ್‌ ಗುರುವಾರ ಅಸಮ್ಮತಿ ಸೂಚಿಸಿದೆ [ರಾಹುಲ್‌ ರಮೇಶ್‌ ವಾಘ್‌ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಚುನಾವಣಾ ಮೀಸಲಾತಿ ಕಾಯ್ದಿರಿಸುವ ಮೊದಲು ತ್ರಿವಳಿ ಪರೀಕ್ಷಾ ಮಾನದಂಡ ಪೂರೈಸಬೇಕು ಎಂದು ತಾನು ವಿಕಾಸ್ ಕಿಶನ್‌ರಾವ್ ಗಾವಳಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣದಲ್ಲಿ ನೀಡಿದ್ದ ಆದೇಶವನ್ನು ವರದಿ ಪಾಲಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ತಿಳಿಸಿದೆ.

Also Read
ನೀಟ್ ಪಿಜಿ ಪರೀಕ್ಷೆ: ಮೀಸಲಾತಿ ಅರ್ಹತೆಗೆ ವಿರುದ್ಧವಲ್ಲ ಎಂದ ಸುಪ್ರೀಂ, ಒಬಿಸಿ ಮೀಸಲಾತಿ ಎತ್ತಿಹಿಡಿದು ವಿವರವಾದ ಆದೇಶ

ಅಲ್ಲದೆ ಆಯೋಗದ ಪ್ರಾಯೋಗಿಕ ಅಧ್ಯಯನ ಮತ್ತು ಸಂಶೋಧನೆಯ ಅನುಪಸ್ಥಿತಿಯಲ್ಲಿ ವರದಿ ಸಿದ್ಧವಾಗಿದೆ ಎಂದು ಖುದ್ದು ಮಧ್ಯಂತರ ವರದಿಯಲ್ಲಿ ಹೇಳಿರುವುದನ್ನು ನ್ಯಾಯಾಲಯ ಗಮನಿಸಿದೆ.

ಈ ಹಿನ್ನೆಲೆಯಲ್ಲಿ ಮಧ್ಯಂತರ ವರದಿಯನ್ನು ಅನುಸರಿಸದಂತೆ ನ್ಯಾಯಾಲಯವು ಸೂಚಿಸಿದ್ದು ಶೇ. 27ರಷ್ಟು ಒಬಿಸಿ ಮೀಸಲಾತಿಯನ್ನು ಅನುಷ್ಠಾನಗೊಳಿಸದೆ ಚುನಾವಣೆ ನಡೆಸುವಂತೆ ನಿರ್ದೇಶಿಸಿದೆ.

Kannada Bar & Bench
kannada.barandbench.com